Advertisement

ಫೆಂಚ್‌ ಓಪನ್‌: ಪುರುಷರ ಫೈನಲ್ ; ‌ಪ್ರಶಸ್ತಿಗಾಗಿ ನಡಾಲ್‌- ಜೊಕೋವಿಕ್‌ ಕದನ

08:34 PM Oct 10, 2020 | mahesh |

ಪ್ಯಾರಿಸ್: ವಿಶ್ವಶ್ರೇಷ್ಠ ಟೆನಿಸ್‌ ಆಟಗಾರರಾದ ನೊವಾಕ್‌ ಜೊಕೋವಿಕ್‌ ಮತ್ತು ರಫೆಲ್‌ ನಡಾಲ್‌ ಅವರು ರವಿವಾರ ನಡೆಯುವ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದಾರೆ. ಸರ್ಬಿಯಾದ ಜೋಕೊವಿಕ್‌ ಸೆಮಿಪೈನಲ್‌ನಲ್ಲಿ 6-3, 6-2, 5-7, 4-6, 6-1 ಸೆಟ್‌ಗಳಿಂದ ಸ್ಟೆಫಾನಸ್‌ ಸಿಸಿಪಸ್‌ ವಿರುದ್ಧ ಜಯ ಗಳಿಸಿ ಪ್ರಶಸ್ತಿ ಸುತ್ತಿಗೇರಿದ್ದಾರಲ್ಲದೇ ಫ್ರೆಂಚ್‌ ಓಪನ್‌ನಲ್ಲಿ ಐದನೇ ಮತ್ತು ಗ್ರ್ಯಾನ್‌ ಸ್ಲಾಮ್‌ ಕೂಟಗಳಲ್ಲಿ 27ನೇ ಬಾರಿ ಫೈನಲ್‌ ತಲುಪಿದ ಸಾಧನೆ ಮಾಡಿದ್ದಾರೆ.

Advertisement

ಆವೆ ಅಂಗಣದ ಮಾಸ್ಟರ್‌ ಸ್ಪೇನ್‌ನ ರಫೆಲ್‌ ನಡಾಲ್‌ ಮತ್ತೂಂದು ಸೆಮಿಫೈನಲ್‌ ಕಾದಾಟದಲ್ಲಿ ಆರ್ಜೆಂಟೀನಾದ ಡೀಗೊ ಚಾಟ್ಜ್ìಮನ್‌ ವಿರುದ್ಧ 6-3, 6-3, 7-6 (0) ಅಂತರದಿಂದ ಮಣಿಸಿ 13ನೇ ಬಾರಿ ಫ್ರೆಂಚ್‌ ಓಪನ್‌ ಫೈನಲ್‌ ತಲುಪಿದರು. ಮೂರನೇ ಸೆಟ್‌ನಲ್ಲಿ ನಡಾಲ್‌ ಅವರಿಗೆ ತೀವ್ರ ಪೈಪೋಟಿ ಒಡ್ಡಿದ ಚಾಟ್ಜ್ಮನ್‌ ಹೋರಾಟವನ್ನು ಟೈಬ್ರೇಕರ್‌ ವರೆಗೆ ವಿಸ್ತರಿಸಿದರು ಆದರೆ ಟೈಬ್ರೇಕರ್‌ನಲ್ಲಿ ನಡಾಲ್‌ ಅಮೋಘವಾಗಿ ಆಡಿ ಎದುರಾಳಿಯ ಸವಾಲನ್ನು ಮೆಟ್ಟಿನಿಲ್ಲುವಲ್ಲಿ ಯಶಸ್ವಿಯಾದರು.

12 ಬಾರಿ ಫ್ರೆಂಚ್‌ ಓಪನ್‌ ಕಿರೀಟ ಧರಿಸಿರುವ ನಡಾಲ್‌ ಇದುವರೆಗೆ 19 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳನ್ನು ಗೆದ್ದಿ¨ªಾರೆ. ಒಂದು ವೇಳೆ ಇಲ್ಲಿ ಪ್ರಶಸ್ತಿ ವಶಪಡಿಸಿಕೊಂಡರೆ ಸ್ವಿಟ್ಜರ್‌ಲ್ಯಾಂಡಿನ ರೋಜರ್‌ ಫೆಡರರ್‌ ಅವರ 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಗೆಲುವಿನ ದಾಖಲೆ ಸಮಗಟ್ಟಲಿದ್ದಾರೆ. ಇದೇ ವೇಳೆ 17 ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆದ್ದಿರುವ ಜೊಕೋವಿಕ್‌ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಒಂದು ವೇಳೆ ಅವರು ಗೆದ್ದರೆ 18ನೇ ಗ್ರ್ಯಾನ್‌ಸ್ಲಾಮ್‌ ಮತ್ತು ಎರಡನೇ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next