ಟೊರಂಟೊ: ರೋಜರ್ ಕಪ್ ಟೆನಿಸ್ ಪಂದ್ಯಾವಳಿಯಲ್ಲಿ ಅಗ್ರ ಶ್ರೇಯಾಂಕದ ರಫೆಲ್ ನಡಾಲ್, ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೋವಿಕ್ ಮತ್ತು ಹಾಲಿ ಚಾಂಪಿಯನ್ ಅಲೆಕ್ಸಾಂಡರ್ ಜ್ವೆರೇವ್ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ರಾತ್ರಿಯ ಪಂದ್ಯದಲ್ಲಿ ರಫೆಲ್ ನಡಾಲ್ ಫ್ರಾನ್ಸ್‌ನ ಬೆನೋಯಿಟ್ ಪೇರ್ ಅವರನ್ನು 6-2, 6-3 ಅಂತರದಿಂದ ಮಣಿಸಿದರು. ಇವರ ಮುಂದಿನ ಸುತ್ತಿನ ಎದುರಾಳಿ ಸ್ಟಾನಿಸ್ಲಾಸ್ ವಾವ್ರಿಂಕ. ಸ್ವಿಸ್ ಆಟಗಾರ ವಾವ್ರಿಂಕ ಹಂಗೇರಿಯ ಮಾರ್ಟನ್ ಫುಕೊÕàವಿಕ್ಸ್ ವಿರುದ್ಧ ಭಾರೀ ಹೋರಾಟ ನಡೆಸಿ 1-6, 7-6 (7-2), 7-6 (12-10) ಅಂತರದ ಜಯ ಸಾಧಿಸುವಲ್ಲಿ ಯಶಸ್ವಿಯಾದರು.
ಕೆನಡ ಕೂಟದಲ್ಲಿ 4 ಸಲ ಪ್ರಶಸ್ತಿ ಎತ್ತಿರುವ ಸರ್ಬಿಯಾದ ನೊವಾಕ್ ಜೊಕೋವಿಕ್ ತವರಿನ ಪೀಟರ್ ಪೋಲನ್‌ಸ್ಕಿ ವಿರುದ್ಧ 6-3, 6-4 ಅಂತರದ ಜಯ ಒಲಿಸಿಕೊಂಡರು.
ಪೋಲನ್‌ಸ್ಕಿ ವೈಲ್ಡ್‌ಕಾರ್ಡ್ ಮೂಲಕ ಈ ಕೂಟಕ್ಕೆ ಪ್ರವೇಶ ಪಡೆದಿದ್ದರು. ಕೆನಡದ ಮಿಲೋಸ್ ರಾನಿಕ್ ಕೂಡ ತವರಿನ ಅಭಿಮಾನಿಗಳನ್ನು ನಿರಾಸೆಯಲ್ಲಿ ಮುಳುಗಿಸಿದರು. ಅವರನ್ನು ಅಮೆರಿಕದ ಫ್ರಾನ್ಸೆಸ್ ತಿಯಾಫೊ 7-6 (7-4), 4-6, 6-1 ಅಂತರದಿಂದ ಮಣಿಸಿದರು. ಸದ್ಯ ಡೆನ್ನಿಸ್ ಶಪೊವಲೋವ್ ತವರಿನ ಆಶಾಕಿರಣವಾಗಿ ಉಳಿದಿದ್ದಾರೆ.
ದ್ವಿತೀಯ ಶ್ರೇಯಾಂಕದ ಜರ್ಮನ್ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ 6-4, 6-4 ಅಂತರದಿಂದ ಅಮೆರಿಕದ ಬ್ರಾಡ್ಲಿ ಕ್ಲಾನ್ ಅವರಿಗೆ ಸೋಲುಣಿಸಿದರು. ಶ್ರೇಯಾಂಕಿತ ಆಟಗಾರರಾದ ಜಾನ್ ಇಸ್ನರ್, ಡೀಗೊ ಶ್ವಾಟ್ಸìಮನ್, ಪಾಬ್ಲೊ ಕರೆನೊ ಬುಸ್ಟ ಈಗಾಗಲೇ ಸೋಲುಂಡು ಹೊರಬಿದ್ದಿದ್ದಾರೆ.