ಮೆಲ್ಬರ್ನ್: 2195 ದಿನಗಳು ಮತ್ತು 33 ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ಓಪನ್ ನಲ್ಲಿ ಅಜೇಯರಾಗಿದ್ದ ವಿಶ್ವದ ನಂಬರ್ 1 ಟೆನ್ನಿಸ್ ಆಟಗಾರ ನೊವಾಕ್ ಜೊಕೊವಿಕ್ ಜನವರಿ 15 ರ ಶುಕ್ರವಾರ ರಾಡ್ ಲೇವರ್ ಅರೆನಾದಲ್ಲಿ ಆರು ವರ್ಷಗಳಲ್ಲಿ ಮೊದಲ ಬಾರಿಗೆ ಪಂದ್ಯವನ್ನು ಸೋತರು
ಹಾಲಿ ಚಾಂಪಿಯನ್ ಜೊಕೊವಿಕ್ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ನಲ್ಲಿ ನಾಲ್ಕನೇ ಶ್ರೇಯಾಂಕದ ಜಾನಿಕ್ ಸಿನ್ನರ್ ಅವರಿಂದ ಸೋತು ಹೊರಹಾಕಲ್ಪಟ್ಟರು.
ಜೊಕೊವಿಕ್ ಅವರು ಋತುವಿನ ಮೊದಲ ಗ್ರ್ಯಾನ್ ಸ್ಲಾಮ್ ನ ಸೆಮಿಫೈನಲ್ ನಲ್ಲಿ ಸೋತಿದ್ದು ಇದೇ ಮೊದಲು.
ಇತ್ತೀಚಿನ ದಿನಗಳಲ್ಲಿ ಟೆನಿಸ್ ಇತಿಹಾಸದಲ್ಲಿ ಅತಿದೊಡ್ಡ ಆಘಾತಗಳಲ್ಲಿ ಒಂದಾದ ಈ ಪಂದ್ಯದಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಜಾನಿಕ್ ಸಿನ್ನರ್ 1-6, 2-6, 7-6 (6), 3-6 ರಿಂದ ಸೋಲಿಸಿದರು. ಈ ಪಂದ್ಯದಲ್ಲಿ 3 ಗಂಟೆ 22 ನಿಮಿಷಗಳ ಕಾಲ ಈ ಪಂದ್ಯ ನಡೆಯಿತು.
ಭಾನುವಾರ ನಡೆಯಲಿರುವ ತನ್ನ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ನಲ್ಲಿ ಸಿನ್ನರ್ ಅವರು ಡೇನಿಯಲ್ ಮೆಡ್ವೆಡೆವ್ ಮತ್ತು ಅಲೆಕ್ಸಾಂಡರ್ ಜ್ವೆರೆವ್ ನಡುವಿನ ಮತ್ತೊಂದು ಸೆಮಿಫೈನಲ್ ನ ವಿಜೇತರನ್ನು ಎದುರಿಸಲಿದ್ದಾರೆ.