Advertisement

ಮ್ಯಾಡ್ರಿಡ್‌ ಓಪನ್‌ ಟೆನಿಸ್‌: ಜೊಕೋವಿಕ್‌ ನಿರ್ಗಮನ

06:40 AM May 11, 2018 | Team Udayavani |

ಮ್ಯಾಡ್ರಿಡ್‌: ಮ್ಯಾಡ್ರಿಡ್‌ ಓಪನ್‌ ಟೆನಿಸ್‌ ಪಂದ್ಯಾವಳಿಯಿಂದ ಮಾಜಿ ನಂಬರ್‌ ವನ್‌ ಆಟಗಾರ ನೊವಾಕ್‌ ಜೊಕೋವಿಕ್‌ ಹೊರಬಿದ್ದಿದ್ದಾರೆ. ದ್ವಿತೀಯ ಸುತ್ತಿನ ಮುಖಾಮುಖೀಯಲ್ಲಿ ಬ್ರಿಟನ್ನಿನ ಕೈಲ್‌ ಎಡ್ಮಂಡ್‌ 6-3, 2-6, 6-3 ಅಂತರದಿಂದ ಜೊಕೋಗೆ ಆಘಾತವಿಕ್ಕಿದರು.

Advertisement

ಇದು ಜೊಕೋವಿಕ್‌ ವಿರುದ್ಧ ಎಡ್ಮಂಡ್‌ ಸಾಧಿಸಿದ 3ನೇ ಜಯವಾಗಿದೆ. ಇವರಿಬ್ಬರ ಹೋರಾಟ ಒಂದು ಗಂಟೆ, 42 ನಿಮಿಷಗಳ ತನಕ ಸಾಗಿತು.

ಕೈಲ್‌ ಎಡ್ಮಂಡ್‌ ಅವರಿನ್ನು ಬೆಲ್ಜಿಯಂನ ಡೇವಿಡ್‌ ಗೊಫಿನ್‌ ಸವಾಲನ್ನು ಎದುರಿಸಬೇಕಿದೆ. ಇಬರಿಬ್ಬರು 2015ರ ಡೇವಿಸ್‌ ಕಪ್‌ನಲ್ಲಿ ಎದುರಾದಾಗ ಎಡ್ಮಂಡ್‌ ಸೋಲನುಭವಿಸಿದ್ದರು. ಈಗ ಸೇಡು ತೀರಿಸಿಕೊಳ್ಳುವ ಅವಕಾಶವೊಂದು ಬ್ರಿಟನ್‌ ಟೆನಿಸಿಗನಿಗೆ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next