Advertisement

ಜೊಕೊವಿಚ್‌ಗೆ ಯುಎಸ್‌ ಓಪನ್‌ ಬಾಗಿಲು ಬಂದ್‌!

09:22 PM Jul 21, 2022 | Team Udayavani |

ನ್ಯೂಯಾರ್ಕ್‌: ಆ.29ರಿಂದ ಆರಂಭವಾಗಲಿರುವ ಪ್ರತಿಷ್ಠಿತ ಯುಎಸ್‌ ಓಪನ್‌21 ಗ್ರ್ಯಾನ್‌ಸ್ಲ್ಯಾಮ್‌ ಟೆನಿಸ್‌ನಲ್ಲಿ 21 ಗ್ರ್ಯಾನ್‌ಸ್ಲ್ಯಾಮ್‌ಗಳ ಒಡೆಯ ನೊವಾಕ್‌ ಜೊಕೊವಿಚ್‌ ಆಡುವ ಸಾಧ್ಯತೆ ಶೇ.99 ಇಲ್ಲ. ಅಮೆರಿಕ ಸರಕಾರ ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ದೇಶಕ್ಕೆ ಪ್ರವೇಶ ಎಂದು ಖಚಿತವಾಗಿ ಹೇಳಿರುವುದರಿಂದ ನೊವಾಕ್‌ ಆಡುವ ಸಾಧ್ಯತೆ ತೀರಾ ಕಡಿಮೆ. ಒಂದು ವೇಳೆ ಆಡಿದರೆ 22ನೇ ಗ್ರ್ಯಾನ್‌ಸ್ಲ್ಯಾಮ್‌ ಗೆದ್ದು ನಡಾಲ್‌ ಜತೆಗೆ ವಿಶ್ವದಾಖಲೆ ಹಂಚಿಕೊಳ್ಳುವ ಅವಕಾಶ ಅವರಿಗಿದೆ.

Advertisement

ಜೊಕೊವಿಚ್‌ ಅವರ ಪರಿಸ್ಥಿತಿಗೆ ಅವರೇ ಕಾರಣ. ಅವರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದಿಲ್ಲ ಎಂಬ ಕಠಿನ ನಿಲುವು ತಾಳಿದ್ದಾರೆ. ಹೀಗಾಗಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟಕ್ಕೆ ತೆರಳಿದರೂ ಆ ದೇಶದ ಸರಕಾರ ಆಡಲು ಬಿಡದೆ ವಾಪಸ್‌ ಸರ್ಬಿಯಾಕ್ಕೆ ಗಡೀಪಾರು ಮಾಡಿತ್ತು! ಅಷ್ಟಾದರೂ ಅವರು ನಿಲುವು ಬದಲಿಸಿಕೊಳ್ಳಲಿಲ್ಲ. ಆದರೆ ಮುಂದೆ ಫ್ರೆಂಚ್‌ ಮತ್ತು ವಿಂಬಲ್ಡನ್‌ನಲ್ಲಿ ಆಡಲು ಅವಕಾಶ ಸಿಕ್ಕಿತ್ತು. ಇದೇ ಔದಾರ್ಯವನ್ನು ತೋರಲು ಅಮೆರಿಕ ಸರಕಾರ ಸಿದ್ಧವಿಲ್ಲ.

ಪ್ರಸ್ತುತ ರ್‍ಯಾಂಕಿಂಗ್‌ ಪ್ರಕಾರ ಜೊಕೊವಿಚ್‌ಗೆ ಸಹಜವಾಗಿ ಯುಎಸ್‌ ಓಪನ್‌ನಲ್ಲಿ ಆಡುವ ಅವಕಾಶ ಸಿಕ್ಕಿದೆ. ಯುಎಸ್‌ ಓಪನ್‌ ಸಂಘಟಕರು ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೂ, ಕೂಟದಲ್ಲಿ ಆಡಬಹುದು ಎಂಬ ನಿಯಮ ಹೊಂದಿದ್ದಾರೆ. ಆದರೆ ಅಮೆರಿಕ ಸರ್ಕಾರದ ನಿಯಮಗಳು ಇದಕ್ಕೆ ವ್ಯತಿರಿಕ್ತವಾಗಿವೆ. ಇದು ಜೊಕೊಗೆ ಹೊಡೆತ ನೀಡುತ್ತದೆ.

ಜೊಕೊ ತಮ್ಮ ಹಠವನ್ನು ಎಷ್ಟುಕಾಲ ಮುಂದುವರಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿದೆ. ಜಗತ್ತಿನ ಬಹುತೇಕ ದೇಶಗಳು ಕೊರೊನಾ ಕುರಿತ ನಿಯಮಗಳನ್ನು ಸಡಿಲಿಸಿವೆ. ಕೊರೊನಾ ಈಗಲೂ ಇರುವುದರಿಂದ ಇನ್ನೂ ಹಲವು ದೇಶಗಳಲ್ಲಿ ಪರಿಸ್ಥಿತಿಯ ಗಂಭೀರತೆ ಹಾಗೆಯೇ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next