ನ್ಯೂಯಾರ್ಕ್: ಕೊರೊನಾ ವ್ಯಾಕ್ಸಿನ್ ಪಡೆಯದ ಟೆನಿಸಿಗ ನೊವಾಕ್ ಜೊಕೋವಿಕ್ ಅವರಿಗೆ ಅಮೆರಿಕ ಪ್ರವೇಶ ಸಾಧ್ಯವಾಗುತ್ತಿಲ್ಲ. ಹೀಗಾಗಿ ಇಂಡಿಯನ್ ವೆಲ್ಸ್ ಮತ್ತು ಮಯಾಮಿ ಟೆನಿಸ್ ಟೂರ್ನಿಗಳಿಂದ ಅವರು ಹೊರಗುಳಿಯಲಿದ್ದಾರೆ. ಈ ವಿಷಯವನ್ನು ಸ್ವತಃ ಜೊಕೋ ಅವರೇ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ನಿಯಮಾವಳಿ ಯಲ್ಲಿ ಯಾವುದೇ ಬದಲಾವಣೆ ಸಂಭವಿಸದ ಕಾರಣ ತನಗೆ ಅಲ್ಲಿನ ಕೂಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಜೊಕೋವಿಕ್ ಟ್ವೀಟ್ ಮಾಡಿದ್ದಾರೆ.
ಇದೇ ಕಾರಣಕ್ಕಾಗಿ ಜೊಕೋವಿಕ್ ಅವರಿಗೆ ಆಸ್ಟ್ರೇಲಿಯ ಪ್ರವೇಶವನ್ನು ನಿಷೇಧಿಸಲಾಗಿತ್ತು. ವರ್ಷಾರಂಭದ ಆಸ್ಟ್ರೇಲಿಯನ್ ಓಪನ್ ಆಡಲು ಮೆಲ್ಬರ್ನ್ಗೆ ಆಗಮಿಸಿದ ಜೊಕೋ ಅವರನ್ನು ಅಲ್ಲಿಂದಲೇ ವಾಪಸ್ ಕಳುಹಿಸಲಾಗಿತ್ತು.
ಇದನ್ನೂ ಓದಿ:ಟೆಸ್ಟ್ ಪಂದ್ಯ: ಮುನ್ನಡೆಯತ್ತ ವೆಸ್ಟ್ ಇಂಡೀಸ್
“ಇಲ್ಲಿ ನಾವು ಪ್ರತಿಕ್ರಿಯಿಸಲೇನೂ ಇಲ್ಲ. ಸರಕಾರದ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಿನಿಂದ ಪಾಲಿಸುವುದಷ್ಟೇ ನಮ್ಮ ಕರ್ತವ್ಯ’ ಎಂಬುದಾಗಿ ಯು.ಎಸ್. ಟೆನಿಸ್ ಅಸೋಸಿಯೇಶನ್ ವಕ್ತಾರ ಕ್ರಿಸ್ ವಿಡ್‌ಮೈರ್ ಹೇಳಿದ್ದಾರೆ.