Advertisement

ನ.14, 15ಕ್ಕೆ ದೀಪಿಕಾ, ರಣವೀರ್‌ ಮದುವೆ

12:07 PM Oct 22, 2018 | Team Udayavani |

ಮುಂಬಯಿ: ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ (32) ಮತ್ತು ನಟ ರಣವೀರ್‌ ಸಿಂಗ್‌ (33) ಅವರ ಮದುವೆ ನ. 14 ಮತ್ತು 15ರಂದು ನಡೆಯಲಿದೆ. ಮೂಲಗಳ ಪ್ರಕಾರ ಇಟಲಿಯಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಆಪ್ತರಿಗಷ್ಟೇ ಆಹ್ವಾನ ನೀಡುತ್ತಾರೆಂದು ಹೇಳಲಾಗಿದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಆಹ್ವಾನ ಪತ್ರಿಕೆ ಮುದ್ರಣವಾಗಿದೆ. 

Advertisement

ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿ, ಮದುವೆ ಆಗುತ್ತಿರುವುದಾಗಿ ಗಾಳಿ ಸುದ್ದಿಯಾದ ಸಾಕಷ್ಟು ದಿನಗಳ ಬಳಿಕ, ಸ್ವತಃ ಗುಳಿಕೆನ್ನೆ ಸುಂದರಿ ದೀಪಿಕಾ ಅವರೇ ಟ್ವಿಟರ್‌ನಲ್ಲಿ ಗಾಸಿಪ್‌ ಏನಿಲ್ಲ, ನಿಜ ಎಂದು ಖಚಿತಪಡಿಸಿದ್ದರು.

ಅಷ್ಟೇ ಅಲ್ಲ, ಇಬ್ಬರೂ ತಾರೆಯರು ಕಳೆದ ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದು, ಇದೀಗ ಮದುವೆ ದಿನಾಂಕವೂ ಬಹಿರಂಗಗೊಂಡಿದೆ‌. ಇಟಲಿಯ ಪ್ರತಿಷ್ಠಿತ “ಲೇಕ್‌ ಕೊಮೊ’ದಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next