Advertisement

ಹುಣಸಗಿಯಲ್ಲಿ 40 ಸಾವಿರ ಸಸಿಗಳ ಪೋಷಣೆ

04:48 PM Feb 03, 2021 | Team Udayavani |

ಹುಣಸಗಿ: ಪಟ್ಟಣದ ಸರ್ಕಾರಿ ಆಸ್ಪತ್ರೆ ಹಿಂದುಗಡೆ ಯುಕೆಪಿಯ ನಾಲ್ಕು ಎಕರೆ ಜಾಗದಲ್ಲಿರುವ ತಾಲೂಕು ನರ್ಸರಿ ಫಾರ್ಮ್ನಲ್ಲಿ ಅರಣ್ಯ ಇಲಾಖೆ 40 ಸಾವಿರ ಸಸಿಗಳನ್ನು ಬೆಳೆಸುವ ಗುರಿ ಹೊಂದಿದ್ದು, ವಿವಿಧ ಸಸಿಗಳಿಗೆ ನೀರುಣಿಸಿ ಪೋಷಿಸುವ ತಯಾರಿ ನಡೆದಿದೆ. ಫಾರ್ಮ್ನಲ್ಲಿ ಸುಮಾರು 23 ವರ್ಷಗಳಿಂದಲೂ ಸಸಿಗಳನ್ನು ಬೆಳೆಸಿಕೊಂಡು ಬರಲಾಗಿದ್ದು, ಇವು ಸಂಪೂರ್ಣ ಬೆಳೆದು ಜೂನ್‌ ತಿಂಗಳಲ್ಲಿ ಆಸಕ್ತ ರೈತರಿಗೆ ಇಲಾಖೆ ನಿಗದಿಪಡಿಸಿದ ದರದಲ್ಲಿ ದೊರಕಲಿವೆ.

Advertisement

ಈಗಾಗಲೇ ಬೇವು, ಹೊಂಗೆ, ಕರಿಬೇವು, ಮಾಗಣಿ, ನೇರಳೆ, ತಪ್ಸಿ, ಪೆಲ್ಟೋಪಾರು, ಸಂಕೇಶ್ವರ, ಶಿರಸಲ, ಹೆಬ್ಬೇವು, ಶ್ರೀಗಂಧ, ಹುಣಸೆ, ಬಂಗಾಲಿ, ಪೇರಲ ಸಸಿಗಳನ್ನು ಬೆಳೆಸಲಾಗಿದೆ. ನಿತ್ಯವೂ ನೀರಾಯಿಸಿ ಸಂರಕ್ಷಿಸಿಕೊಂಡು ಬರಲಾಗಿದೆ ಎನ್ನುತ್ತಾರೆ ಸಿಬ್ಬಂದಿ ಸೋಮಣ್ಣ ಕೋಟೆಗುಡ್ಡ.

ಸಸಿ ನೆಡಹಾಕುವುದೆಲ್ಲಿ?: ಜಿಪಂ ವ್ಯಾಪ್ತಿಯಲ್ಲಿ ಬರುವ ಪಂಚಾಯತ್‌ ರಾಜ್‌ ಇಲಾಖೆಗೆ ಸಂಬಂಧಿಸಿದ ರಸ್ತೆ ಬದಿ ಹಾಗೂ ಸರ್ಕಾರಿ ಕಚೇರಿ ಆವರಣ ಮತ್ತು ಸ್ಮಶಾನ, ಶಾಲಾ ಕಾಲೇಜು ಸೇರಿದಂತೆ ಅಗತ್ಯಯಿರುವ ಕಡೆಗೆ ಸಸಿ ನೆಡುವ ಇಚ್ಚಾಸಕ್ತರಿಗೆ ವಿತರಿಸಲಾಗುತ್ತಿದೆ. ರೈತರಾದರೆ ಅಗತ್ಯ ದಾಖಲಾತಿ ನೀಡಿ ಸಸಿಗಳನ್ನು ಖರೀದಿಸಬಹುದು. ಇನ್ನು ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಲ್ಲಿ ಸಸಿಗಳ ಖರೀದಿಸಿ ನೆಡಹಾಕಬಹುದು. ರೈತರು ಜಮೀನಿನಲ್ಲಿ ಬೆಳೆಸಿದಾಗ ಜಮೀನಿನ ಬದು ಗಟ್ಟಿ ಆಗುವುದಲ್ಲದೆ ಕೊಚ್ಚುವುದು ತಡೆಗಟ್ಟಬಹುದು.

ಕನಿಷ್ಠ ಒಂದು ಅಡಿ ಅಂತರದೊಂದಿಗೆ ಬೀಜ ಹಾಕಿ ನೀರುಣಿಸಿದರೆ ಸಸಿಗಳ ಮೊಳಕೆಯಾಗಿ ಚೆನ್ನಾಗಿ ಚಿಗುರುತ್ತವೆ. ಸಾವಯವ ಗೊಬ್ಬರವೇ ಸಾಕು. ಇದಕ್ಕಾಗಿ ಒಂದು ಬಾವಿ, ಕೊಳವೆ ಬಾವಿ, ವಿದ್ಯುತ್‌ ವ್ಯವಸ್ಥೆ ಕಲ್ಪಿಸಿದೆ ಎಂದು ಸಿಬ್ಬಂದಿ ಸೋಮಣ್ಣ ತಿಳಿಸುತ್ತಾನೆ.

ಇದರ ಅಭಿವೃದ್ಧಿಗೊಳಿಸುವ ಜವಾಬ್ದಾರಿ ಸಾಮಾಜಿಕ ಅರಣ್ಯ ಇಲಾಖೆಯದ್ದು.ಆದರೆ ಸ್ಥಳೀಯ ಜಿಪಂ ಆಡಳಿತದ ಕಾರ್ಯವೂ ಅಷ್ಟೇ ಮುಖ್ಯ. ಈ ನರ್ಸರಿ ಫಾರ್ಮ್ಗೆ ಇನ್ನು ಅಗತ್ಯ ಸೌಕರ್ಯ ಒದಗಿಸಬೇಕಿದೆ ಎನ್ನುತ್ತಾರೆ ಇಲ್ಲಿಯ ನಾಗರಿಕರು.

Advertisement

ಸೂಕ್ತ ರಕ್ಷಣೆ ಬೇಲಿ ಹಾಗೂ ಮುಂದುಗಡೆ ಗೇಟ್‌ ಇಲ್ಲ. ಇನ್ನು ಖರೀದಿಸಿ ಸಾಗಿಸಲು ರಸ್ತೆ ಸಮಸ್ಯೆ ಇದೆ. ಯುಕೆಪಿ ಕ್ಯಾಂಪ್‌ಲ್ಲಿರುವ ರಸ್ತೆಯನ್ನು ಹುಣಸಗಿ-ನಾರಾಯಣಪುರ ರಸ್ತೆಗೆ ಕೂಡಿಸಿ ಮುಖ್ಯ ರಸ್ತೆಗೆ ನಾಮಫಲಕ ಹಾಕಿದರೆ ಉತ್ತಮ.
ಚೆನ್ನಕುಮಾರ ದಿಂಡವಾರ್‌, ಪರಿಸರ ಪ್ರೇಮಿ ಹುಣಸಗಿ.

ಅರಣ್ಯ ಸಂಪತ್ತು ಬೆಳವಣಿಗೆಗೆ ಸಸಿಗಳು ಹೆಚ್ಚು ಬೆಳೆಸಬೇಕು. ಸುತ್ತಲೂ ತಂತಿ ಬೇಲಿ ವ್ಯವಸ್ಥೆ ಕಲ್ಪಿಸುವುದು ಅಗತ್ಯ. ಅದಕ್ಕೆ ರಸ್ತೆ ಮತ್ತು ನಾಮಫಲಕ ಹಾಕಲು ಸಂಬಂಧಿಸಿದ ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಮೇಲಾ ಧಿಕಾರಿಗಳೊಂದಿಗೆ ಅನುದಾನ ಒದಗಿಸುವಂತೆ ಮನವಿ ಮಾಡಿ ಪ್ರಯತ್ನಿಸಲಾಗುವುದು.
ಬಸವರಾಜಸ್ವಾಮಿ ಸ್ಥಾವರಮಠ,
ಜಿಪಂ ಸದಸ್ಯ ಹುಣಸಗಿ

*ಬಾಲಪ್ಪ ಎಂ.ಕುಪ್ಪಿ

Advertisement

Udayavani is now on Telegram. Click here to join our channel and stay updated with the latest news.

Next