ಪಾಟ್ನಾ: ಹಲವಾರು ಪ್ರಕರಣಗಳು ಆರೋಪಿ, ಕುಖ್ಯಾತ ನಕ್ಸಲ್ ಮುಸಾಫಿರ್ ಸಾಹ್ನಿ ಪಾಟ್ನಾದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅನಾರೋಗ್ಯದಿಂದ ಬಳಲುತ್ತಿದ್ದ ಮುಸಾಫಿರ್ ನನ್ನು ಬಿಯೋರ್ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕುಖ್ಯಾತ ನಕ್ಸಲ್ ಆಗಿರುವ ಮುಸಾಫಿರ್ ಸಾಹ್ನಿ ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಎಸ್‌ಎಸ್‌ಬಿಯ ಜಂಟಿ ಕಾರ್ಯಾಚರಣೆಯಲ್ಲಿ ಸಾಹ್ನಿಯನ್ನು 2015 ರಲ್ಲಿ ಬಂಧಿಸಲಾಗಿತ್ತು. ಉತ್ತರ ಬಿಹಾರದ ಅನೇಕ ಪೊಲೀಸ್ ಠಾಣೆಗಳಲ್ಲಿ ಸಾಹ್ನಿ ಹೆಸರಿನಲ್ಲಿ ಡಜನ್ ಗಟ್ಟಲೆ ಪ್ರಕರಣಗಳು ದಾಖಲಾಗಿವೆ. ಬಿಹಾರದ ಸೀತರ್ಮಾಹಿ, ಮುಜಾಫರ್ಪುರ್ ಮತ್ತು ಹಾಜಿಪುರ ಜಿಲ್ಲೆಗಳಲ್ಲಿ ಹಲವಾರು ಪೊಲೀಸ್ ಠಾಣೆಗಳಲ್ಲಿ ಸಾಹ್ನಿ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ.
ಇದನ್ನೂ ಓದಿ: ಲಿಫ್ಟ್ ನೀಡುವುದಾಗಿ ಹೇಳಿ 50 ವರ್ಷದ ಮಹಿಳೆಯ ಗ್ಯಾಂಗ್ ರೇಪ್: ವಿಡಿಯೋ ವೈರಲ್, ಆರು ಜನರ ಬಂಧನ
ಕಳೆದ 18 ತಿಂಗಳುಗಳಿಂದ ಪಾಟ್ನಾದ ಬಿಯೋರ್ ಜೈಲಿನಲ್ಲಿರುವ ಮುಸಾಫಿರ್ ಸಾಹ್ನಿಗೆ ಅನಾರೋಗ್ಯ ಕಾಡಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾಹ್ನಿ ಮೃತಪಟ್ಟಿದ್ದಾನೆ. ಮುಸಾಫಿರ್ ಸಾಹ್ನಿ ಪುತ್ರ ರೋಹಿತ್ ಸಾಹ್ನಿ ಕೂಡಾ ರೌಡಿ ಶೀಟರ್ ಆಗಿದ್ದು, ಹಾಜೀಪುರ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ.
ಇದನ್ನೂ ಓದಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಸೆ.30ರೊಳಗೆ ತೀರ್ಪು ನೀಡುವಂತೆ ಸುಪ್ರೀಂ ಆದೇಶ