Advertisement

ಬೆಂಗಳೂರು:3 ಕುಖ್ಯಾತ ಸರಗಳ್ಳರು ಅರೆಸ್ಟ್‌ 

10:45 AM Nov 12, 2017 | Team Udayavani |

ಬೆಂಗಳೂರು : ಮಹತ್ವದ ಕಾರ್ಯಾಚರಣೆ ನಡೆಸಿದ ಶಿವಾಜಿನಗರ ಪೊಲೀಸರು ಮೂವರು ಕುಖ್ಯಾತ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ವಾರದ ಒಳಗೆ 8 ಮಂದಿ ಕಳ್ಳರು ಬಲೆಗೆ ಬಿದ್ದಿದ್ದು ಸಾರ್ವಜನಿಕರು ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.

Advertisement

ಬಂಥಿತರು ಇಬ್ರಾಹಿಂ, ಕುಲು ಮತ್ತು ಫ‌ಯಾಜ್‌ ಎಂದು ತಿಳಿದು ಬಂದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಕಳ್ಳರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಬಂಧಿತರ ಬಳಿ 300 ಗ್ರಾಂ ತೂಕದ 8 ಸರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಕಳ್ಳರು ಪಲ್ಸರ್‌ ಬೈಕ್‌ ಬಳಸಿ ಒಂಟಿ ಮಹಿಳೆಯರನ್ನು ಟಾರ್ಗೆಟ್‌ ಮಾಡಿ ಸರ ಎಗರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಗುರುವಾರವಷ್ಟೆ  ಉತ್ತರ ಪ್ರದೇಶದ ಶಾವೇರಿ ಜಿಲ್ಲೆಯ “ಬವೇರಿಯಾ’ಗ್ಯಾಂಗ್‌ನ ಐವರು ಸರಗಳ್ಳರನ್ನು ಪೊಲೀಸರು ಬಂಧಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next