Advertisement

ಬಂದೂಕು ಒಪ್ಪಿಸಲು ಸೂಚನೆ

02:34 PM Mar 29, 2018 | Team Udayavani |

ಬೆಂಗಳೂರು: ಚುನಾವಣೆ ದಿನಾಂಕ ಘೋಷಣೆ ಹಿನ್ನೆಲೆಯಲ್ಲಿ ನಾಗರಿಕರು ಹೊಂದಿರುವ ಪರವಾನಗಿ ಬಂದೂಕುಗಳನ್ನು ಕೂಡಲೇ ಪೊಲೀಸರಿಗೆ ಒಪ್ಪಿಸುವಂತೆ ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಆದೇಶಿಸಿದ್ದಾರೆ.

Advertisement

ಕೇಂದ್ರ ಚುನಾವಣಾ ಆಯೋಗ ಸೂಚನೆ ಮೇರೆಗೆ ಶಾಂತಿಯುತ ಮುತದಾನ ನಡೆಸುವ ಹಿನ್ನೆಲೆಯಲ್ಲಿ ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದು, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವವರು ಚುನಾವಣೆ ಅಂತ್ಯಗೊಳ್ಳುವವರೆಗೂ ತಮ್ಮ ವ್ಯಾಪ್ತಿಯ ಠಾಣೆಗಳಲ್ಲಿ ಬಂದೂಕುಗಳನ್ನು ಒಪ್ಪಿಸಿ ಪೊಲೀಸರಿಂದ ಸ್ವೀಕೃತಿ ಪಡೆಯಬೇಕು. ಮೇ 18ರಂದು ಮತ ಎಣಿಕೆ ಅಂತ್ಯಗೊಂಡ ನಂತರ ವಾಪಸ್‌ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.

ಒಂದು ವೇಳೆ ಪರವಾನಗಿದಾರರು ಬಂದೂಕುಗಳನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವ ವಿನಾಯಿತಿ ಬೇಕಾದರೆ ಏ.10ರೊಳಗೆ ತಮ್ಮ ವ್ಯಾಪ್ತಿಯ ಉಪ ಪೊಲೀಸ್‌ ಆಯುಕ್ತರಿಗೆ ಅರ್ಜಿ ಸಲ್ಲಿಸಬೇಕು. ಸೂಕ್ತಕಾರಣ ನೀಡಬೇಕೆಂದು ತಿಳಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಇಲಾಖೆಗಳು, ಸಾರ್ವಜನಿಕ ಹಾಗೂ ಖಾಸಗಿ ಉದ್ಯಮಗಳು. ಅಂದರೆ ಬ್ಯಾಂಕ್‌ಗಳು, ಭದ್ರತಾ ಏಜೆಸ್ಸಿ ಸಂಸ್ಥೆಗಳು. ಸರ್ಕಾರದ ಅನಮತಿ ಪಡೆದು ಖಾಸಗಿ ಆಡಳಿತ ಮಂಡಳಿಗಳಿಗೆ ನೀಡಿದ ಭದ್ರತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗೆಜೆಟೆಡ್‌ ಅಧಿಕಾರಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next