ಬೆಂಗಳೂರು: ಸಮ್ಮಿಶ್ರ ಸರ್ಕಾರದ ಚೊಚ್ಚಲ ಅಧಿವೇಶನಕ್ಕೆ ಅಧಿಸೂಚನೆ ಹೊರಡಿಸಲಾಗಿದ್ದು, ಜು. 2ರಿಂದ
12ರವರೆಗೆ ಕಲಾಪಗಳು ನಡೆಯಲಿವೆ.
ಜು. 2ರಂದು ಮಧ್ಯಾಹ್ನ 12.30ಕ್ಕೆ ಜಂಟಿ ಅಧಿವೇಶನವನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದರೊಂದಿಗೆ ಕಲಾಪ ಶುರುವಾಗಲಿದೆ. ಜು. 5ರಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ. ಒಟ್ಟು 9 ದಿನ ಕಾರ್ಯಕಲಾಪಗಳು ನಡೆಯಲಿವೆ.
ಸಾಮಾನ್ಯವಾಗಿ ಜಂಟಿ ಅಧಿವೇಶನ ಮತ್ತು ಬಜೆಟ್ ಮಂಡನೆ ದಿನ ಹೊರತಾಗಿ ಕಲಾಪ ನಡೆಯುವ ಎಲ್ಲಾ ದಿನಗಳಲ್ಲೂ ಪ್ರಶ್ನೋತ್ತರಕ್ಕೆ ಅವಕಾಶವಿರುತ್ತದೆ. ಆದರೆ,ಈ ಬಾರಿ ಸಮಯದ ಕೊರತೆಯಿಂದ ಜು. 9ರಿಂದ 12ರವರೆಗೆ ನಾಲ್ಕು ದಿನ ಮಾತ್ರ ಪ್ರಶ್ನೋತ್ತರಕ್ಕೆ ಅವಕಾಶ ಮಾಡಿಕೊಡಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.