Advertisement

ಉಮೇಶ್‌ ಜಾಧವ್‌ಗೆ ನೋಟಿಸ್‌ ಜಾರಿ ಮಾರ್ಚ್‌ 12 ರಂದು ವಿಚಾರಣೆ

02:12 AM Mar 09, 2019 | |

ಬೆಂಗಳೂರು: ಕಾಂಗ್ರೆಸ್‌ ಶಾಸಕತ್ವ ಸ್ಥಾನಕ್ಕೆ ರಾಜೀನಾಮೆ ನೀಡಿದ ಉಮೇಶ್‌ ಜಾಧವ್‌ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಮಾರ್ಚ್‌ 12 ರಂದು 12 ಗಂಟೆಗೆ ವಿಚಾರಣೆಯಿದೆ ಎಂದು ಸ್ಪೀಕರ್‌ ರಮೇಶ್‌ಕುಮಾರ್‌ ತಿಳಿಸಿದ್ದಾರೆ.

Advertisement

ವಿಧಾನಸೌಧದಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಉಮೇಶ್‌ ಜಾಧವ್‌ ಅವರು ಮಾರ್ಚ್‌ 4 ರಂದು ನನ್ನ ಹಳ್ಳಿಗೆ ಬಂದು ರಾಜೀನಾಮೆ ನೀಡಿದ್ದರು. ಆವತ್ತು ಶಿವರಾತ್ರಿ ರಜೆ ಇತ್ತು. ಅವರಿಗೆ ಕೆಲವು ವಿವರಣೆ ಕೇಳಿ ಈಗ ಪತ್ರ ಬರೆದಿದ್ದೇನೆ. ವಿಪ್‌ ಉಲ್ಲಂಘನೆಯದು ಬೇರೆ ವಿಚಾರ. ಉಮೇಶ್‌ ಜಾಧವ್‌ ಸೇರಿ ನಾಲ್ವರು ಕಾಂಗ್ರೆಸ್‌ ಶಾಸಕರ ವಿರುದಟಛಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕರು ದೂರು ನೀಡಿದ್ದರು. ಆ ದೂರಿನ ಹಿನ್ನೆಲೆಯಲ್ಲಿ ನೋಟಿಸ್‌ ನೀಡಲಾಗಿದೆ. ಈ ಪ್ರಕರಣದಲ್ಲಿ ಕಾನೂನು ಹೇಗೆ ಹೇಳುತ್ತೋ ಹಾಗೆ ಮಾಡುತ್ತೇವೆ. ರೂಲ್ಸ್‌ಬುಕ್‌ ಪ್ರಕಾರ ನಡೆಯುತ್ತೇವೆ. ನಾಲ್ವರಿಗೂ ನೋಟಿಸ್‌ ನೀಡಿದ್ದೇವೆ. ಅವರು ಸಮಜಾಯಿಷಿ ನೀಡುತ್ತಿದ್ದಾರೆ. ಒಬ್ಬರು ರಾಜೀನಾಮೆ ನೀಡಿದ್ದಾರೆ. ಯಾರೇ ರಾಜೀನಾಮೆ ಕೊಟ್ಟರೂ ಸ್ವೀಕರಿಸುತ್ತೇನೆ ಎಂದಿದ್ದೆ. ಆದರೆ, ಹಾಗೆಯೇ ಅಂಗೀಕರಿಸಲಾಗುವುದಿಲ್ಲ. ಸ್ವೀಕಾರ
ಮಾಡುವುದು ಬೇರೆ, ಅಂಗೀಕರಿಸುವುದು ಬೇರೆ’ ಎಂದು ತಿಳಿಸಿದರು.

ನನಗೆ ಸಂಬಂಧಪಟ್ಟಿದ್ದಲ್ಲ: ಆಪರೇಷನ್‌ ಆಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ರಚನೆ ವಿಳಂಬವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, “ಆ ಬಗ್ಗೆ ಯಾರು ತಲೆಕೆಡಿಸಿಕೊಂಡರೂ, ಕೆಡಿಸಿಕೊಳ್ಳದಿದ್ದರೂ ನನಗೆ
ಸಂಬಂಧಪಟ್ಟಿದ್ದಲ್ಲ. ನಾನು ಪೀಠದಿಂದ ಒಂದು ಸಲಹೆ ಕೊಟ್ಟಿದ್ದೇನೆ. ಆ ಕುರಿತಂತೆ ಅವರಿಗೆ ಇಂದು ಮತ್ತೆ ಪತ್ರ
ಬರೆಯುತ್ತೇನೆ. ಎಸ್‌ಐಟಿ ರಚಿಸಬಾರದು ಎಂದೇನೂ ಇಲ್ಲ. ಚುನಾವಣೆ ಇರುವುದರಿಂದ ಸರ್ಕಾರವೂ ಬ್ಯುಸಿ
ಇರಬಹುದು’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next