Advertisement

ಸಮೀಕ್ಷೆ ಗುರಿ ತಲುಪಲು ಸೂಚನೆ

04:40 PM May 20, 2017 | Team Udayavani |

ಆಳಂದ: ನಿರುದ್ಯೋಗ ಯುವಕರ ಬೇಡಿಕೆ ಸಮೀಕ್ಷೆ ಮತ್ತು ಆನ್‌ಲೈನ್‌ ನೋಂದಣಿ ಕಾರ್ಯದ ಗುರಿ ತಲುಪಲು ಸಂಬಂಧಿಸಿದ ಎಲ್ಲ ಇಲಾಖೆಗಳ ಸಿಬ್ಬಂದಿಗಳು ಶ್ರಮಿಸಬೇಕು ಎಂದು ತಹಶೀಲ್ದಾರ ಬಸವರಾಜ ಎಂ. ಬೆಣ್ಣೆಶಿರೂರ ಹೇಳಿದರು. 

Advertisement

ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಪಂ, ಪುರಸಭೆ ಕಂದಾಯ, ಶಿಕ್ಷಣ ಮತ್ತು ಮಹಿಳಾ  ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. 10ರಿಂದ15 ಸಾವಿರ ನಿರುದ್ಯೋಗ ಯುವಕರ ನೋಂದಣಿ ಮಾಡುವ ಗುರಿ  ಹಾಕಿಕೊಳ್ಳಲಾಗಿದೆ.

ಎಲ್ಲರೂ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು. ಪುರಸಭೆಯಿಂದ 2 ಸಾವಿರ, ಕಂದಾಯ ಇಲಾಖೆಯಿಂದ 3 ಸಾವಿರ,  ಸಿಡಿಪಿಒ 2 ಸಾವಿರ, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ 2 ಸಾವಿರ ಮಂದಿ ಸಮೀಕ್ಷೆ ನೋಂದಣಿ ಕೈಗೊಳ್ಳಬೇಕು. ನೋಂದಣಿ ಕಾರ್ಯಕ್ಕೆ ಮೇ 22ಕೊನೆ ದಿನಾಂಕವಾಗಿದೆ.  

ಅಷ್ಟರೊಳಗೆ ಪರಿಶ್ರಮ ವಹಿಸಿ ಯುವಜನತೆಗೆ ಅನುಕೂಲ ಮಾಡಬೇಕು ಎಂದು ಹೇಳಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ| ಸಂಜಯ ರೆಡ್ಡಿ ಮಾತನಾಡಿ,  ಗ್ರಾಪಂಗಳಲ್ಲಿ ಅಭಿವೃದ್ಧಿ ಅಧಿಕಾರಿಗಳು ಈಗಾಗಲೇ ನೋಂದಣಿ ಕಾರ್ಯ ಕೈಗೊಳ್ಳುತ್ತಿದ್ದಾರೆ. 

ಯುವಜನರು ಸಹ ತಮಗೆ ಅನುಕೂಲವಾಗುವ ಕಚೇರಿ ಅಥವಾ ಖಾಸಗಿ  ಕಂಪ್ಯೂಟರ್‌ ಅಂಗಡಿಗಳಲ್ಲಿ ಸೌಲಭ್ಯ ಹೊಂದಿರುವ ಮೊಬೈಲ್‌ನಿಂದಲೇ ನೋಂದಣಿ ಮಾಡಬಹುದಾಗಿದೆ ಎಂದು ಹೇಳಿದರು. 

Advertisement

ಪುರಸಭೆ ಮುಖ್ಯಾಧಿಕಾರಿ ಗ್ವಾಲೇಶ  ಹೊನ್ನಳ್ಳಿ, ನೋಡಲ್‌ ಅಧಿಕಾರಿ ಜಾಫರ್‌ ಅನ್ಸಾರಿ ಸೇರಿ ಇನ್ನಿತರ ಇಲಾಖೆ ಅಧಿ ಕಾರಿಗಳು ಸಭೆಯಲ್ಲಿ ಹಾಜರಿದ್ದರು. ಯುವ ಜನರಿಗೆ ಕೌಶಲ ತರಬೇತಿ ನೀಡಲು ಕೌಶಲ್ಯ ವೆಬ್‌ ಪೋರ್ಟಲ್‌ನಲ್ಲಿ ನೋಂದಾಯಿಸಲಾಗುತ್ತಿದೆ.

ನೋಂದಣಿಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ್‌ ಕಾರ್ಡ್‌ ಅಥವಾ ಕಾರ್ಡ್‌ ಸಂಖ್ಯೆ ನಮೂದಿಸಬೇಕಾಗಿದೆ. ಮೇ 15ರಿಂದ 22ರ ವರೆಗೆ ಪುರಸಭೆ. ತಾಪಂ, ತಹಶೀಲ್ದಾರ ಮತ್ತು ಗ್ರಾಪಂ ಕಚೇರಿಗಳಲೂ ನೋಂದಣಿಗೆ ಅವಕಾಶ ಒದಗಿಸಲಾಗಿದೆ. ಅಲ್ಲದೆ, ಉದ್ಯೋಗ ವಿನಿಮಯ  ಕಚೇರಿಗಳಲ್ಲಿ ವರ್ಷಪೂರ್ತಿ ನೋಂದಣಿ ಕಾರ್ಯ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next