Advertisement

ಬೆಳೆ ಹಾನಿ ಸಮೀಕ್ಷೆ ವರದಿ ನೀಡಲು ಸೂಚನೆ

01:44 PM Nov 22, 2021 | Team Udayavani |

 ಚಿಕ್ಕಬಳ್ಳಾಪುರ: ಜಿಲ್ಲೆ ಸಹಿತ ರಾಜ್ಯಾದ್ಯಂತ ಸುರಿದ ಮಳೆಯಿಂದ ಬೆಳೆ ಹಾನಿಯಾಗಿರುವ ಕುರಿತು ಎಲ್ಲಾ ಜಿಲ್ಲಾ ಧಿಕಾರಿಗಳಿಂದ ಸಮೀಕ್ಷೆ ನಡೆಸಿ, ವರದಿಯನ್ನು ತರಿಸಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ಕಂದಾಯ ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ತಿಳಿಸಿದರು.

Advertisement

ನಗರದ ಬಿ.ಬಿ.ರಸ್ತೆಯಲ್ಲಿ ರಾಜಗಾಲುವೆ ತುಂಬಿ ರಸ್ತೆ ಹರಿಯುತ್ತಿರುವ ನೀರನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಾದ್ಯಂತ ಸುರಿದ ಮಳೆಯಿಂದ ಮನೆ ಮತ್ತು ಬೆಳೆಗಳಿಗೆ ನಷ್ಟ ಸಂಭವಿಸಿರುವ ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ, ಬೆಳೆ ಹಾನಿಯಾಗಿರುವ ಸಮೀಕ್ಷೆ ನಡೆಸಿ ವರದಿ ನೀಡಲು ಸೂಚಿಸಿ ಜಿಲ್ಲಾ ಉಸ್ತುವಾರಿ ಸಚಿವರು ಮಳೆಯಿಂದ ಆಗಿರುವ ತೊಂದರೆಗಳ ಕುರಿತು ವೀಕ್ಷಣೆ ಮಾಡಿ ವರದಿ ನೀಡಲು ಸೂಚನೆ ನೀಡಿದ್ದೇನೆ. ಅದರಂತೆ ಜಿಲ್ಲಾ ಉಸ್ತುವಾರಿ ಸಚಿವರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ರಾಜಕಾಲುವೆ, ಚರಂಡಿ ನಿರ್ಮಾಣಕ್ಕೆ ಕ್ರಮ: ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿಹಾನಿ ಉಂಟಾಗಿದೆ. ಕಂದವಾರ ಕೆರೆಯಿಂದ ಅಮಾನಿಕೆರೆವರೆಗೆ ರಾಜಕಾಲುವೆ ನಿರ್ಮಾಣ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಗೆ ಹೊಂದುಕೊಂಡಿರುವ ಚರಂಡಿಗಳು ಮತ್ತು ಮೇಲುಹೊದಿಕೆಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ;- ಮಾಹಿತಿ ಸೋರಿಕೆ ಪ್ರಕರಣ: ಬಂಧಿತ ನೌಕಾಪಡೆ ಅಧಿಕಾರಿಗೆ ಜಾಮೀನು

ಮಳೆಯಿಂದ ಮನೆ ಕಳೆದುಕೊಂಡವರಿಗೆ ತಾತ್ಕಾಲಿಕವಾಗಿ ಪರಿಹಾರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಜೊತೆಗೆ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ.ಗಳ ವೆಚ್ಚದಲ್ಲಿ ಪುನರ್‌ ವಸತಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

Advertisement

ಜಿಲ್ಲಾಧಿಕಾರಿಗಳಿಗೆ ಅಧಿಕಾರ: ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ, ಪೂರ್ಣ ಪ್ರಮಾಣದಲ್ಲಿ ಮನೆ ಕುಸಿದು ಬಿದ್ದಿದ್ದರೆ ಕೂಡಲೇ 95 ಸಾವಿರ ನೀಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅದರ ಜೊತೆಗೆ ಸರ್ಕಾರದಿಂದ ಪೂರ್ಣವಾಗಿ ಬಿದ್ದಿರುವ ಮನೆಗೆ 5 ಲಕ್ಷ ರೂ.ಗಳು ಮತ್ತು ಭಾಗಶಃ ಬಿದ್ದಿರುವ ಮನೆಗಳಿಗೆ 3 ಲಕ್ಷ ಹಾಗೂ ಅಲ್ಪ ಪ್ರಮಾಣದಲ್ಲಿ ಕುಸಿದ ಮನೆಗೆ 50 ಸಾವಿರ ಪರಿಹಾರ ನೀಡುವ ಯೋಜನೆಯನ್ನು ಮುಂದುವರೆಸಿದ್ದೇವೆ. ಇಡೀ ಜಿಲ್ಲೆಯಲ್ಲಿ 24 ಮನೆಗಳು ಸಂಪೂರ್ಣವಾಗಿ ಕುಸಿದಿದೆ.

1078 ಮನೆ ಭಾಗಶಃ ಕುಸಿದಿದೆ. 5 ದೊಡ್ಡ ದನ, 46 ದನಕರುಗಳು ಮೃತಪಟ್ಟಿವೆ. ಅದಕ್ಕೆ ಕೂಡಲೇ ಪರಿಹಾರ ನೀಡುತ್ತೇವೆ ಎಂದರು. ಚಿಕ್ಕಬಳ್ಳಾಪುರದಲ್ಲಿ 55 ಮನೆಗಳಿಗೆ ಧಕ್ಕೆ: ಚಿಕ್ಕಬಳ್ಳಾಪುರ ನಗರ ಪ್ರದೇಶದಲ್ಲಿ ಸುಮಾರು 55 ಮನೆಗಳಿಗೆ ಧಕ್ಕೆಯಾಗಿದೆ. ಪೂರ್ಣ ಪ್ರಮಾಣದಲ್ಲಿ 13 ಮನೆಗಳು ಕುಸಿದಿದೆ. 42 ಮನೆಗಳಿಗೆ ಸಹ ತೊಂದರೆಯಾಗಿದೆ. ಅದಕ್ಕೆ ಪರಿಹಾರ ನೀಡಲು ಸೂಚನೆ ನೀಡಿದ್ದೇನೆ.

ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಬೆಳೆ ಹಾನಿಯಾಗಿರುವ ಕುರಿತು ಸಮೀಕ್ಷೆ ನಡೆಸಲು ನಿರ್ದೇಶನ ನೀಡಿದ್ದೇನೆ. ಕಳೆದ ಎರಡು ದಿನಗಳಿಂದ ಬೆಳೆ ಹಾನಿ ಕುರಿತು ಪ್ರಾಥಮಿಕ ಸಮೀಕ್ಷೆ ನಡೆಸಿ, ವರದಿ ಸಲ್ಲಿಸಲು ಸೂಚನೆ ನೀಡಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರವನ್ನು ಘೋಷಣೆ ಮಾಡುವುದಾಗಿ ಹೇಳಿದರು.

ನಾವು ಕೆಲಸ ಮಾಡುತ್ತೇವೆ: ಮುಖ್ಯಮಂತ್ರಿಗಳಿಂದ ಬರ್ಬಾದ್‌ ಸಮಾವೇಶ ಅನ್ನೊ ಸಿದ್ದರಾಮಯ್ಯ ಟೀಕೆ ವಿಚಾರವಾಗಿ ಸಿಎಂ ಪ್ರತಿಕ್ರಿಯಿಸಿ, ವಿರೋಧ ಪಕ್ಷದವರು ಟೀಕೆ ಮಾಡುತ್ತಿರಲಿ, ನಾವು ಕೆಲಸ ಮಾಡುತ್ತೇವೆ. ಕೆಲವು ಸಚಿವರು ಜಿಲ್ಲೆಯಲ್ಲಿದ್ದಾರೆ. ಮಳೆಹಾನಿ ಪರಿಶೀಲನೆ ನಡೆಸಿದ್ದಾರೆ. ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

ಮಳೆ ಹಾನಿ ವೀಡಿಯೋ ಸಂವಾದ ನಡೆಸಲು ಚುನಾವಣಾ ಆಯೋಗದ ಅನುಮತಿ ಬೇಕು ಅಂದ್ರು. ಇನ್ನೂ ಕೆಲವರು ಕೆಲವು ಜಿಲ್ಲೆಗಳಿಗೆ ಪ್ರವಾಸ ಹೋಗಬೇಕು. ಅಧಿಕಾರಿಗಳನ್ನು ಕರೆದುಕೊಂಡು ಹೋಗಲು ನೀತಿ ಸಂಹಿತೆ ಅಡ್ಡ ಇದೆ. ವಿನಾಯಿತಿ ಕೋರಿ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದರು. ಸಚಿವರಾದ ಆರ್‌.ಅಶೋಕ, ಡಾ.ಕೆ.ಸುಧಾಕರ್‌, ಸಂಸದ ಎಸ್‌.ಮುನಿಸ್ವಾಮಿ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜ್‌, ಡಿ.ಎಸ್‌.ಆನಂದ್‌ರೆಡ್ಡಿ (ಬಾಬು), ಡೀಸಿ ಆರ್‌.ಲತಾ, ಪಿ.ಶಿವಶಂಕರ್‌, ಜಿ.ಕೆ.ಮಿಥುನ್‌ ಕುಮಾರ್‌, ವಾಸುದೇವ್‌, ತಹಶೀಲ್ದಾರ್‌ ಗಣಪತಿ ಶಾಸ್ತ್ರೀ ಇದ್ದರು.

“ಎಲ್ಲ ಸಚಿವರಿಗೂ ಜಿಲ್ಲೆಗಳಿಗೆ ಹೋಗಿ ಬೆಳೆ ಹಾನಿಯಾಗಿರುವ ಪ್ರದೇಶಗಳಿಗೆ ತೆರಳಲು ಸೂಚನೆ ನೀಡಿದ್ದೇನೆ. ಸಚಿವರ ಭೇಟಿ ವೇಳೆ ಎಲ್ಲ ಅಧಿಕಾರಿಗಳು ಹಾಜರಿರಬೇಕು. ಚುನಾವಣಾ ಅಧಿಕಾರಿಗಳಿಗೆ ನಾನು ಪತ್ರವನ್ನು ಬರೆದು ಅಧಿಕಾರಿಗಳು ಜೊತೆಯಲ್ಲಿರಲು ಮನವಿ ಮಾಡಿದ್ದೇವೆ, ಕೋಲಾರ ಸೇರಿದಂತೆ ಬೇರೆ ಕಡೆ ಹೋಗಿ ಪರಿಶೀಲಿಸುತ್ತೇನೆ.” – ಬಸವರಾಜ್‌ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next