Advertisement

ಕೋವಿಡ್‌ ಮಾರ್ಗಸೂಚಿ ಪಾಲನೆಗೆ ಸೂಚನೆ

04:28 PM Mar 27, 2021 | Team Udayavani |

ಹಾವೇರಿ: ಕೋವಿಡ್‌-19 ಎರಡನೇ ಅಲೆಯ ಕಾರಣ ಜಿಲ್ಲೆಯಲ್ಲಿ ಅತ್ಯಂತ ಸೂಕ್ಷ್ಮ ಪರಿಸ್ಥಿತಿಯಿದೆ.ದಿನದಿಂದ ದಿನಕ್ಕೆ ಕೋವಿಡ್‌ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸರ್ಕಾರದಮಾರ್ಗಸೂಚಿಯಂತೆ ಸಾಮಾಜಿಕ ಅಂತರಕಾಯ್ದುಕೊಂಡು ಅತ್ಯಂತ ಸರಳವಾಗಿ ಹೋಳಿ,ಯುಗಾದಿ, ಶಬ್‌-ಎ-ಬರಾತ್‌ ಹಾಗೂ ಗುಡ್‌ ಫ್ತೈಡೆಹಬ್ಬಗಳನ್ನು ಆಚರಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಮನವಿ ಮಾಡಿದರು.

Advertisement

ನಗರದ ಜಿಲ್ಲಾ ಗುರುಭವನದಲ್ಲಿ ಶುಕ್ರವಾರ ಸಂಜೆ ಯುಗಾದಿ, ಶಬ್‌-ಎ-ಬರಾತ್‌ ಹಾಗೂ ಗುಡ್‌ ಫ್ರೆçಡೆಹಬ್ಬಗಳ ಹಿನ್ನೆಲೆಯಲ್ಲಿ ಕರೆಯಲಾದ ಜಿಲ್ಲಾಮಟ್ಟದಶಾಂತಿ ಸಭೆಯಲ್ಲಿ ಸಾರ್ವಜನಿಕರ ಅಭಿಪ್ರಾಯಗಳನ್ನುಆಲಿಸಿ ನಂತರ ಅವರು ಮಾತನಾಡಿದರು.

ಹೋಳಿ, ಹಿರಿಯರ ಹಬ್ಬ, ಯುಗಾದಿ ಸೇರಿದಂತೆ ಯಾವುದೇ ಸಾಂಪ್ರದಾಯಿಕ ಹಬ್ಬಗಳ ಆಚರಣೆಗೆನಿರ್ಭಂಧವಿಲ್ಲ. ಆದರೆ ಸಾರ್ವಜನಿಕವಾಗಿ ಗುಂಪುಗೂಡದೆ ಕೋವಿಡ್‌ ನಿಯಮ ಪಾಲಿಸಿಮನೆಯಲ್ಲಿಯೇ ಸುರಕ್ಷತವಾಗಿ ಸರಳ ಆಚರಣೆ ಮಾಡಿ ಎಂದು ಸಲಹೆ ನೀಡಿದರು.

ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಪ್ರಕರಣಗಳುಹೆಚ್ಚಾಗುತ್ತಿವೆ. ಇಂದು ಐದು ಜನರಿಗೆ ಕೋವಿಡ್‌ಪಾಜಿಟಿವ್‌ ಕಂಡುಬಂದಿದೆ. ಆರಂಭದಲ್ಲಿಕಡಿಮೆ ಪ್ರಕರಣಗಳು ಕಂಡುಬಂದು 200, 300ಪಾಜಿಟಿವ್‌ ಪ್ರಕರಣಗಳು ಕಂಡುಬಂದವು. ತಮ್ಮವರಶವಸಂಸ್ಕಾರಕ್ಕೂ ಕುಟುಂಬದವರು ಭಾಗವಹಿಸದಪರಿಸ್ಥಿತಿ ಉಂಟಾಗಿತ್ತು. ಈಗ ಮತ್ತೆ ಕೋವಿಡ್‌ ಮರುಕಳಿಸಿದೆ, ಎರಡನೇ ಅಲೆ ಆರಂಭವಾಗಿದೆ. ಈಹಿನ್ನೆಲೆಯಲ್ಲಿ ಎಲ್ಲರೂ ಮುನ್ನೆಚ್ಚರಿಕೆ ವಹಿಸೋಣ ಎಂದು ಹೇಳಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಹಾಗೂ ರಾಜ್ಯ ಸರ್ಕಾರಗಳು ಹಬ್ಬ, ಸಾರ್ವಜನಿಕಸಭೆ-ಸಮಾರಂಭಗಳಲ್ಲಿ ಹೆಚ್ಚು ಜನಸೇರುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದೆ.ಜಿಲ್ಲಾಡಳಿತದಿಂದಲೂ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದ ಅವರು, ಕೋವಿಡ್‌ ಲಸಿಕೆಬಂದರೂ ಜನ ಲಸಿಕೆ ಹಾಕಿಸಿಕೊಳ್ಳಲು ಮುಂದೆಬರುತ್ತಿಲ್ಲ. ಜಿಲ್ಲೆಯಲ್ಲಿ 18 ಲಕ್ಷ ಜನಸಂಖ್ಯೆ ಇದ್ದು,ಈವರೆಗೆ 50 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ.ಈ ಪೈಕಿ 20 ಸಾವಿರ ಜನ ಸರ್ಕಾರಿ ಅಧಿಕಾರಿ ಹಾಗೂನೌಕರರಿದ್ದಾರೆ. ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿಎಚ್ಚರ ತಪ್ಪಿದರೆ ದೊಡ್ಡ ಅನಾಹುತ ಕಾದಿದೆ ಎಂದು ಎಚ್ಚರಿಸಿದರು.

Advertisement

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಕಳೆದ ವರ್ಷ ಕೋವಿಡ್‌ ಸಂದರ್ಭದಲ್ಲಿ ಇದ್ದ ಪರಿಸ್ಥಿತಿ ಮತ್ತೆ ಮರುಕಳಿಸಿದೆ. ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲಿಸಾರ್ವಜನಿಕರ ಆರೋಗ್ಯ ಮತ್ತು ಜೀವದಸುರಕ್ಷತೆಗಾಗಿ ಸರ್ಕಾರ ಮಾರ್ಗಸೂಚಿಗಳನ್ನುಪ್ರಕಟಿಸಿದೆ. ಈ ಮಾರ್ಗಸೂಚಿಗಳನ್ನುಎಲ್ಲರೂ ಪಾಲಿಸೋಣ. ಧಾರ್ಮಿಕ ಹಾಗೂಸಾಂಪ್ರದಾಯಿಕವಾಗಿ ಸರಳವಾಗಿ ಹೆಚ್ಚು ಜನ ಜೊತೆಗೂಡದೆ ಆಚರಿಸೋಣ. ಪೊಲೀಸರೊಂದಿಗೆಎಲ್ಲರೂ ಸಹಕರಿಸಿ, ಕೋವಿಡ್‌ ಇಳಿಮುಖವಾದಾಗಮುಂದಿನ ದಿನಗಳಲ್ಲಿ ಎಂದಿನಂತೆ ಸಂಭ್ರಮದಿಂದ ಹಬ್ಬಗಳನ್ನು ಆಚರಿಸೋಣ ಎಂದರು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿಹೋಳಿ ಹಬ್ಬ ರಾಜ್ಯದಲ್ಲೇ ಬಾಗಲಕೋಟೆಹೊರತುಪಡಿಸಿದರೆ ಹಾವೇರಿ ಜಿಲ್ಲೆಯಲ್ಲಿ ಹೆಚ್ಚುಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆಕೋವಿಡ್‌ ಹಿನ್ನೆಲೆಯಲ್ಲಿ ಸಾಂಪ್ರದಾಯಕತೆಮರೆಯದೇ ಸುರಕ್ಷತೆ ದೃಷ್ಟಿಯಿಂದ ಸರಳವಾಗಿಆಚರಿಸೋಣ. ಜಿಲ್ಲಾಡಳಿತದ ಆದೇಶವನ್ನು ಎಲ್ಲರೂಗೌರವಿಸುತ್ತೇವೆ. ಹೋಳಿ, ಯುಗಾದಿ ಸೇರಿದಂತೆ ಎಲ್ಲಹಬ್ಬಗಳನ್ನು ಗುಂಪು ಗುಂಪಾಗಿ ಸೇರದೆ ಸರಳವಾಗಿಶಾಂತಿಯುತವಾಗಿ ಆಚರಿಸೋಣ ಎಂದು ಮನವಿ ಮಾಡಿಕೊಂಡರು.

ಸಭೆಯಲ್ಲಿ ಭಾಗವಹಿಸಿದ ಜಿಲ್ಲೆಯ ವಿವಿಧಭಾಗದಿಂದ ಆಗಮಿಸಿದ್ದ ವಿವಿಧ ಧಾರ್ಮಿಕ ಮುಖಂಡರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ ಕೋವಿಡ್‌ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದರು.

ನಗರಸಭೆ ಸದಸ್ಯ ಮಲ್ಲಿಕಾರ್ಜುನ ಸಾತೇನಹಳ್ಳಿ,ಶಿವರಾಜ ಗದ್ದಿನಮಠ, ರಿಯಾಜ್‌ ಅಹ್ಮದ್‌,ವಿರೂಪಾಕ್ಷಪ್ಪ, ಮಲ್ಲಿಕಾರ್ಜುನ ಪೂಜಾರಿ,ಪ್ರಕಾಶ ಮಣಿಗಾರ, ಪ್ರಭು ಹಿಟ್ನಳ್ಳಿ, ಪ್ರಭುಸ್ವಾಮಿಕರ್ಜಗಿಮಠ, ಬಸವರಾಜ ಪೂಜಾರ, ರಮೇಶಆನವಟ್ಟಿ, ಅಬ್ದುಲ್‌ ಖಾದರ್‌, ಐ.ಯು.ಪಠಾಣ ಇತರರು ಮಾತನಾಡಿದರು. ಡಿಎಸ್‌ಪಿವಿಜಯಕುಮಾರ ಸಂತೋಷ ಸ್ವಾಗತಿಸಿದರು. ರಾಣೆಬೆನ್ನೂರ ಡಿಎಸ್‌ಪಿ ಟಿ. ಸುರೇಶ ವಂದಿಸಿದರು.ಸರ್ಕಾರಿ ಕಾಮಣ್ಣ ಪ್ರತಿಷ್ಠಾನದ ಮುಖ್ಯಸ್ಥರಾದ ರಾಕೇಶ್‌ಗೌಡ ಪೊಲೀಸ್‌ ಪಾಟೀಲ ಇದ್ದರು.

ಪ್ರತಿಯೊಬ್ಬರೂ ಸಾಮಾಜಿಕ ಅಂತರಕಾಯ್ದುಕೊಳ್ಳಬೇಕು. ಕಡ್ಡಾಯವಾಗಿಮಾಸ್ಕ್ ಧರಿಸಬೇಕು. ಗುಂಪು ಗುಂಪಾಗಿ ಸೇರಿಸಭೆ-ಸಮಾರಂಭ, ಉತ್ಸವಗಳನ್ನು ಆಚರಿಸಲುನಿರ್ಬಂಧಿಸಲಾಗಿದೆ. ಈ ನಿಯಮಗಳನ್ನುಎಲ್ಲರೂ ಪಾಲಿಸಿ ಹೋಳಿ ಸೇರಿದಂತೆ ಹಬ್ಬಗಳನ್ನು ಆಚರಿಸಲು ಯಾವುದೇ ಅಡ್ಡಿ ಇಲ್ಲ.ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಹಬ್ಬಗಳನ್ನು ಆಚರಿಸಿ. – ಸಂಜಯ ಶೆಟ್ಟೆಣ್ಣವರ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next