Advertisement

ಶೀಘ್ರ ಕಾಮಗಾರಿ ಪೂರ್ತಿಗೊಳಿಸಲು ಸೂಚನೆ

12:13 PM May 21, 2022 | Team Udayavani |

ಸುಳ್ಯ: ಸುಳ್ಯ ಕಲ್ಲುಮುಟ್ಲುವಿನ ನಗರ ಪಂಚಾಯತ್‌ ಕುಡಿಯುವ ನೀರಿನ ಪಂಪ್‌ ಹೌಸ್‌ ಬಳಿ ಭೂ ಕುಸಿತ ಉಂಟಾಗಿರುವ ಪ್ರದೇಶಕ್ಕೆ ಸಚಿವ ಎಸ್.ಅಂಗಾರ ಅವರು ಶುಕ್ರವಾರ ಭೇಟಿ ನೀಡಿ ಭೂ ಕುಸಿತ ಪ್ರದೇಶ ಮತ್ತು ಜಾಕ್‌ ವೆಲ್‌ ಕಾಮಗಾರಿ ಸ್ಥಗಿತಗೊಂಡಿರುವುದನ್ನು ವೀಕ್ಷಿಸಿದರು.

Advertisement

ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಎಂಜಿನಿಯರ್‌ ಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಸಚಿವರು ಜಾಕ್‌ವೆಲ್‌ ಕಾಮಗಾರಿ ತಡವಾಗಿರುವುದಕ್ಕೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಇನ್ನಷ್ಟು ವಿಳಂಬ ಮಾಡದೆ, ಎಲ್ಲ ಆಧುನಿಕ ವ್ಯವಸ್ಥೆಗಳನ್ನು ಬಳಸಿಕೊಂಡು ಆದಷ್ಟು ಬೇಗ ಜಾಕ್‌ವೆಲ್‌ ಕಾಮಗಾರಿ ಪೂರ್ತಿ ಮಾಡಬೇಕು ಎಂದು ಸಚಿವರು ಸೂಚನೆ ನೀಡಿದರು.

ನಗರ ಪಂಚಾಯತ್‌ ಅಧ್ಯಕ್ಷ ವಿನಯಕುಮಾರ್‌ ಕಂದಡ್ಕ, ನ.ಪಂ. ಸದಸ್ಯ ಬೂಡು ರಾಧಾಕೃಷ್ಣ ರೈ, ಬಿಜೆಪಿ ಯುವ ಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್‌ ಕೇರ್ಪಳ, ಪ್ರಮುಖರಾದ ಹರೀಶ್‌ ರೈ ಉಬರಡ್ಕ, ಜಿನ್ನಪ್ಪ ಪೂಜಾರಿ, ನಗರ ಪಂಚಾಯತ್‌ ಎಂಜಿನಿಯರ್‌ ಶಿವಕುಮಾರ್‌ ಮೊದ ಲಾದವರು ಉಪಸ್ಥಿತರಿದ್ದರು.

ತಾತ್ಕಲಿಕ ರಕ್ಷಣಾ ಕಾರ್ಯ

ಭೂ ಕುಸಿತ ಉಂಟಾದ ಸ್ಥಳದಲ್ಲಿ ತಾತ್ಕಲಿಕ ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ. ಕುಸಿತಗೊಂಡಿರುವ ಭೂ ಭಾಗದ ಬದಿಯಲ್ಲಿ ಮರಳು ತುಂಬಿದ ಗೋಣಿ ಚೀಲಗಳನ್ನು ಇರಿಸಲಾಗಿದೆ. ಹೆಚ್ಚು ಕುಸಿತ ಆಗದಂತೆ ಟರ್ಪಾಲು ಅಳವಡಿಸಲಾಗಿದೆ.

Advertisement

ವಿಪಕ್ಷ ಸದಸ್ಯರು ಭೇಟಿ

ಭೂ ಕುಸಿತ ಸಂಭವಿಸಿದ ಪ್ರದೇಶಕ್ಕೆ ನಗರ ಪಂಚಾಯತ್‌ನ ವಿಪಕ್ಷ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್‌.ಉಮ್ಮರ್‌, ಶರೀಪ್‌ ಕಂಠಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜಿಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು. ಕೇವಲ ಜಾಕ್‌ವೆಲ್‌ ಮಾತ್ರ ನಿರ್ಮಾಣಗೊಂಡರೆ ನಗರಕ್ಕೆ ಶುದ್ಧ ಕುಡಿಯುವ ನೀರು ಸಬರಾಜಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಹೊಸ ಶುದ್ಧೀಕರಣ ಘಟಕ ಅಗತ್ಯವಾಗಿದೆ. ಅದರ ಅನುಷ್ಠಾನಕ್ಕೆ ಸಚಿವರು, ನ.ಪಂ. ಪ್ರಯತ್ನ ನಡೆಸಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next