Advertisement

ವಿಮಾನ ಪೈಲಟ್‌ಗಳಿಗೆ  ವರ್ಷದ ನೋಟಿಸ್‌ ಅವಧಿ!

08:40 AM Aug 17, 2017 | Harsha Rao |

ಹೊಸದಿಲ್ಲಿ: ನೌಕರಿ ಬಿಡಬೇಕೆಂದರೆ, ಮುಂಚಿತವಾಗಿ 1 ತಿಂಗಳು, 2 ತಿಂಗಳು ನೋಟಿಸ್‌ ಅವಧಿ ನೀಡಬೇಕೆನ್ನುವುದು ಸಾಮಾನ್ಯ. ಆದರೆ, ನಾಗರಿಕ ವಿಮಾನಯಾನ ನಿರ್ದೇಶನಾಲಯದ ನೂತನ ಆದೇಶ ಪ್ರಕಾರ, ಪೈಲಟ್‌ಗಳು ರಾಜೀನಾಮೆ ನೀಡಿದ ಬಳಿಕ 1ವರ್ಷ ನೋಟಿಸ್‌ ಅವಧಿಯನ್ನು ಪೂರೈಸಬೇಕು. ಇದರಿಂದ ಇನ್ನು ಪೈಲಟ್‌ಗಳು ಕೆಲಸ ಬಿಡುವುದೇ ಕಷ್ಟವಾಗಲಿದೆ.  

Advertisement

ಈ ವರೆಗೆ ಹಿರಿಯ ಪೈಲಟ್‌ಗಳಿಗೆ ನೋಟಿಸ್‌ ಅವಧಿ 6 ತಿಂಗಳು ಎಂದಿದ್ದು, ಹೊಸದಾಗಿ 1 ವರ್ಷಕ್ಕೇರಿಸಿ ಆದೇಶಿಸಲಾಗಿದೆ. ಸಹ ಪೈಲಟ್‌ಗಳಿಗೆ 6 ತಿಂಗಳು ನೋಟಿಸ್‌ ಅವಧಿ ಎಂದು ನಿಗದಿ ಪಡಿಸಲಾಗಿದೆ. ತಕ್ಷಣದಿಂದಲೇ ಈ ನಿಯಮ ಜಾರಿಗೆ ಬಂದಿದೆ. ಆದರೆ ಒಂದು ವೇಳೆ ನೂತನ ನಿಯಮಾವಳಿ ಜಾರಿಗೆ ಮುನ್ನ ವೈಮಾನಿಕ ಕಂಪೆನಿಗಳು ನಿರಪೇಕ್ಷಣಾ ಪತ್ರ ನೀಡಿದಲ್ಲಿ, ನೋಟಿಸ್‌ ಅವಧಿಯಲ್ಲಿ ಕಡಿತ ಉಂಟಾಗಲಿದೆ. 

ವಿವಿಧ ದೇಶೀಯ ವಿಮಾನ ಯಾನ ಕಂಪೆನಿಗಳ ಬೇಡಿಕೆ ಮೇರೆಗೆ ವಿಮಾನಯಾನ ನಿರ್ದೇಶನಾಲಯ ಹೊಸ ನಿಯಮ ಜಾರಿಗೆ ತಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next