Advertisement

ಅಸಹಜ ಸಾವಿನ ಆಡಿಟ್‌ಗೆ ಸೂಚನೆ

06:55 AM Jun 14, 2020 | Lakshmi GovindaRaj |

ರಾಯಚೂರು: ಕೋವಿಡ್‌ 19 ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ ಘಟಿಸುವ ಪ್ರತಿಯೊಂದು ಅಸಹಜ ಸಾವಿನ ಆಡಿಟ್‌ ಮಾಡಲು ಸೂಚಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದರು.  ಸುದ್ದಿಗಾರರೊಂದಿಗೆ ಮಾತನಾಡಿ, ತಜ್ಞ ವೈದ್ಯರ ತಂಡ ರಚಿಸಿದ್ದು, ಅಸಹಜ ಸಾವು ಘಟಿಸಿದಲ್ಲಿ ಅದರ ನಿಖರ ಕಾರಣ ವರದಿ ಸಿದ್ಧಪಡಿಸಲು ತಿಳಿಸಲಾಗಿದೆ.

Advertisement

ರಾಜ್ಯದಲ್ಲಿ ಸದ್ಯಕ್ಕೆ ಕೋವಿಡ್‌ 19 ನಿಯಂತ್ರಣದಲ್ಲಿದ್ದು, ಭಯಪಡುವ  ಅಗತ್ಯವಿಲ್ಲ. ಈವರೆಗೆ ಪತ್ತೆಯಾದ ಪಾಸಿಟಿವ್‌ ಪ್ರಕರಣಗಳಲ್ಲಿ ಶೇ.52.08 ರೋಗಿಗಳು ಗುಣಮುಖರಾಗಿದ್ದಾರೆ. ಶೇ.95ರಷ್ಟು ರೋಗಿಗಳಲ್ಲಿ ಕಾಯಿಲೆ ಲಕ್ಷಣಗಳೇ ಇಲ್ಲ. ಶೇ.5ರಷ್ಟು ರೋಗಿಗಳು ಮಾತ್ರ ತೀವ್ರತರ ಸಮಸ್ಯೆಯಿಂದ ಬಳಲುತ್ತಿದ್ದು, ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದರು. ವೈದ್ಯರು ಉದ್ದೇಶಪೂರ್ವಕವಾಗಿ ಸೇವೆಯಿಂದ ವಿಮುಖರಾದರೆ ಮಾತ್ರ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ರಾಜ್ಯದಲ್ಲಿ ಕೋವಿಡ್‌ 19 ಕೆಲಸಕ್ಕೆ ನಿಯೋಜನೆಗೊಂಡವರಿಗೆ ಸೋಂಕು ತಗುಲಿಲ್ಲ.

ಆದರೆ, ರಿಮ್ಸ್‌ನಲ್ಲಿ ನಾಲ್ವರು ನರ್ಸ್‌ಗಳಿಗೆ ಹೇಗೆ ಬಂತು? ಈ ಕುರಿತು ಸಂಪೂರ್ಣ ವಿವರ ನೀಡುವಂತೆ ರಿಮ್ಸ್‌ ನಿರ್ದೇಶಕರಿಗೆ ತಿಳಿಸಿದರು. ಈಗ ರೋಗದ ಲಕ್ಷಣ ಇದ್ದವರಿಗೆ ಮಾತ್ರ ತಪಾಸಣೆ ಮಾಡುವಂತೆ ತಿಳಿಸಲಾಗಿದೆ. ಹೊರ  ರಾಜ್ಯದಿಂದ ಬಂದವರನ್ನು ಮನೆಯಲ್ಲೇ ಕ್ವಾರಂಟೈನ್‌ ಮಾಡಲಾಗುವುದು. ರಾಜ್ಯದಲ್ಲಿ 40 ಸರ್ಕಾರಿ ಹಾಗೂ 31 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌-19 ಮಾದರಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next