Advertisement

ಸೇತುವೆ ಕಾಮಗಾರಿ ಸ್ಥಗಿತಗೊಳಿಸಲು ಜೋಶಿ ಸೂಚನೆ

04:30 PM Jul 30, 2018 | |

ಹುಬ್ಬಳ್ಳಿ: ನಗರದ ದೇಸಾಯಿ ಕ್ರಾಸ್‌ ಬಳಿ ನಿರ್ಮಿಸಲಾಗುತ್ತಿರುವ ಸೇತುವೆ ಕಾಮಗಾರಿ ಅವೈಜ್ಞಾನಿಕವಾಗಿದೆ. ದೇಸಾಯಿ ಕ್ರಾಸ್‌ ಹತ್ತಿರ ವಾಹನಗಳ ಸುಗಮ ಸಂಚಾರಕ್ಕೆ ರಾಜ್ಯ ಸರಕಾರದ ಅನುದಾನದಡಿ ಅಂಡರ್‌ ಪಾಸ್‌ ಸೇತುವೆ ನಿರ್ಮಾಣ ಸೇರಿದಂತೆ ಇನ್ನಿತರೆ ಕಾಮಗಾರಿ ಆಗಬೇಕು. ಅಲ್ಲಿಯವರೆಗೆ ಈಗ ಆರಂಭಿಸಲು ಉದ್ದೇಶಿಸಿರುವ ಸೇತುವೆ ಕಾಮಗಾರಿ ಸ್ಥಗಿತಗೊಳಿಸಬೇಕೆಂದು ಸಂಸದ ಪ್ರಹ್ಲಾದ ಜೋಶಿ ಸಂಬಂಧಪಟ್ಟ ಗುತ್ತಿಗೆದಾರರಿಗೆ ಸೂಚಿಸಿದರು.

Advertisement

ದೇಸಾಯಿ ಕ್ರಾಸ್‌ ಬಳಿ ನಿರ್ಮಿಸಲಾಗುತ್ತಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿಯಮ್ಮು ರವಿವಾರ ಪರಿಶೀಲಿಸಿದ ಅವರು ನಂತರ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಕಾಮಗಾರಿ ಅವೈಜ್ಞಾನಿಕವಾಗಿದೆ. ತಮ್ಮ ಗಮನಕ್ಕೆ ತಾರದೇ ಕಾಮಗಾರಿ ಆರಂಭಿಸಲಾಗಿದೆ. ರೈಲ್ವೆ ಸೇತುವೆ ಈಗಿನ ಎತ್ತರಕ್ಕಿಂತ ಅಂದಾಜು ಎಂಟು ಅಡಿ ಎತ್ತರದಲ್ಲಿ ನಿರ್ಮಾಣವಾಗುತ್ತಿದೆ. ಇದರಿಂದ ದೇಸಾಯಿ ಕ್ರಾಸ್‌ನಿಂದ ಕೇಶ್ವಾಪುರದ ಸರ್ವೋದಯ ವೃತ್ತ ಕಡೆಗೆ ವಾಹನಗಳು ಸಂಚರಿಸಲು ಹಾಗೂ ಪ್ರವಾಸಿ ಮಂದಿರದಿಂದ ಪಿಂಟೋ ರಸ್ತೆ, ಕ್ಲಬ್‌ ರಸ್ತೆ, ಕೇಶ್ವಾಪುರ ರಸ್ತೆ ಕಡೆಗೆ ಹೋಗಲು ತುಂಬಾ ಅಡಚಣೆಯಾಗುತ್ತದೆ. ಈ ಎಲ್ಲದರ ಕುರಿತು ಸಮಗ್ರವಾಗಿ, ಕೂಲಂಕುಷವಾಗಿ ಅಧ್ಯಯನ ಮಾಡಿ ವೈಜ್ಞಾನಿಕವಾಗಿ ಸೇತುವೆ ನಿರ್ಮಿಸಬೇಕು. ಸುಗಮ ಸಂಚಾರಕ್ಕೆ ದೇಸಾಯಿ ಕ್ರಾಸ್‌ನಲ್ಲಿ ಅಂಡರ್‌ ಪಾಸ್‌ ಸೇತುವೆ ನಿರ್ಮಾಣ ಮಾಡಬೇಕು. ಈ ಕುರಿತು ಆ. 4ರಂದು ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಮಹಾಪೌರರು, ಪಿಡಬ್ಲ್ಯೂಡಿ ರಾಷ್ಟ್ರೀಯ ಹೆದ್ದಾರಿ ಹಿರಿಯ ಅಭಿಯಂತರ ಸಭೆ ಆಗುವವರೆಗೂ ಕಾಮಗಾರಿ ತಡೆಹಿಡಿಯಬೇಕು ಎಂದರು.

ದೇಸಾಯಿ ಕ್ರಾಸ್‌ ಬಳಿ ಅಂಡರ್‌ ಪಾಸ್‌ ಕಾಮಗಾರಿ ರಾಜ್ಯ ಸರಕಾರದ ಅಡಿ ಬರುವುದರಿಂದ ಈ ಕುರಿತು ರಾಜ್ಯ ಸರಕಾರದ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು. ರಾಜ್ಯ ಸರಕಾರ ಹಣ ಕೊಡುವುದಾದರೆ ಈ ಕಾಮಗಾರಿ ಮುಂದುವರಿಸಬೇಕು. ಇಲ್ಲವಾದಲ್ಲಿ ಅದನ್ನು ಸ್ಥಗಿತಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಶಾಸಕ ಜಗದೀಶ ಶೆಟ್ಟರ, ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು, ಎಂಜಿನಿಯರ್‌ ಹಾಗೂ ಗುತ್ತಿಗೆದಾರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next