Advertisement

ಗ್ರಾಮ ಕರಣಿಕರು ಹಣ ಕೇಳಿದರೆ ಗಮನಕ್ಕೆ ತನ್ನಿ: ತಹಶೀಲ್ದಾರ್‌

07:55 AM Jul 26, 2017 | Harsha Rao |

ಉರ್ವಸ್ಟೋರ್‌: ಗ್ರಾಮ ಮಟ್ಟದಲ್ಲಿ ಸರ್ವೆ ಕಾರ್ಯ ಮಾಡಬೇಕಾದರೆ ಗ್ರಾಮ ಕರಣಿಕರಿಗೆ ಒಂದು ಸಾವಿರ ರೂ.ಗಳಿಂದ ಎರಡು ಸಾವಿರ ರೂ.ಗಳ ತನಕ ನೀಡಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಬಡವರ ಬಳಿ ಹೀಗೆ ಹಣ ಪಡೆಯುವುದರಿಂದ ಅವರಿಗೆ ಅನಗತ್ಯ ಸಮಸ್ಯೆಯಾಗುತ್ತದೆ. ಇದಕ್ಕೆ ಕಡಿವಾಣ ಅಗತ್ಯವಾಗಿದೆ ಎಂದು ತಾಲೂಕು ಪಂಚಾಯತ್‌ ಸದಸ್ಯರು ಒತ್ತಾಯಿಸಿದರು.

Advertisement

ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ತಾ.ಪಂ. ಸಾಮಾನ್ಯ ಸಭೆ ಜರಗಿತು.

ಇದಕ್ಕೆ ಪ್ರತಿಕ್ರಿಯಿಸಿದ ಮಂಗಳೂರು ತಹಶೀಲ್ದಾರ್‌ ಮಹಾದೇವಯ್ಯ ಅವರು, ಸರ್ವೆ ಕಾರ್ಯಕ್ಕೆ ಯಾವುದೇ ರೀತಿಯ ಹಣ ನೀಡುವ ನಿಯಮವಿಲ್ಲ. ಒಂದು ವೇಳೆ ಅಂತಹ ಪ್ರಕರಣಗಳು ಕಂಡು ಬಂದರೆ ತತ್‌ಕ್ಷಣ ನನ್ನ ಗಮನಕ್ಕೆ ತನ್ನಿ. ಅಂತಹ ಗ್ರಾಮ ಕರಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮೂಡಬಿದಿರೆ ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಮಾತನಾಡಿ, ಮೂಡಬಿದಿರೆಯಲ್ಲಿ ಹಕ್ಕುಪತ್ರ ನೀಡಲು ಡೀಮ್ಡ್ ಫಾರೆಸ್ಟ್‌ ಸಮಸ್ಯೆ ತಲೆದೋರಿದೆ. ಈಗಾಗಲೇ ಉಂಟಾಗಿರುವ ಸಮಸ್ಯೆ ಬಗೆಹರಿಸಿಕೊಂಡು ಹಕ್ಕು ಪತ್ರ ವಿತರಿಸುವ ಕೆಲಸ ನಡೆಯಲಿದೆ ಎಂದರು.

ಕುಡಿಯುವ ನೀರು ಕಲುಷಿತ
ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕುಡಿಯುವ ನೀರು ಕಲುಷಿತಗೊಂಡಿರುವುದರ ಬಗ್ಗೆ ಈ ಹಿಂದೆ ತಿಳಿಸ ಲಾಗಿತ್ತು. ಈ ಕುರಿತು ಏನು ಕ್ರಮಗಳಾಗಿವೆ ಎಂದು ಸದಸ್ಯ ಬಶೀರ್‌ ಅಹಮ್ಮದ್‌ ಪ್ರಶ್ನಿಸಿದರು. 
ತಾಲೂಕು ಪಂಚಾಯ ತ್‌ ಅಧ್ಯಕ್ಷ ಮಹಮ್ಮದ್‌ ಮೋನು ಮಾತನಾಡಿ, ನೀರು ಕಲುಷಿತಗೊಂಡಿರುವ ಬಗ್ಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಅವರಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ  ಪಂಚಾಯ ತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ತಾಲೂಕು ಪಂಚಾಯ ತ್‌ ಉಪಾಧ್ಯಕ್ಷೆ ಪೂರ್ಣಿಮಾ ಗಣೇಶ್‌, ಸ್ಥಾಯೀ ಸಮಿತಿಯ ರೀಟಾ ಕುಟಿನ್ಹೊ, ಇಒ ಸದಾನಂದ ಮತ್ತತಿರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next