ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದಆಕ್ಸಿಜನ್ ಕೊರತೆ ಆಗುತ್ತಿದೆ. ಇದನ್ನು ನಿವಾರಿಸಲುಇಎಸ್‌ಐಸಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಸ್ಟೋರೇಜ್ ಪ್ಲಾಂಟ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಬೇಕುಎಂದು ಸಂಸದ ಡಾ| ಉಮೇಶ ಜಾಧವ ಇಎಸ್‌ಐಸಿ ಅಧಿ ಕಾರಿಗಳಿಗೆ ನಿರ್ದೇಶನ ನೀಡಿದರು.
ಶುಕ್ರವಾರ ಸಂಜೆ ಜಿಲ್ಲಾಧಿ ಕಾರಿ ಕಚೇರಿಸಭಾಂಗಣದಲ್ಲಿ ಆರೋಗ್ಯ ಇಲಾಖೆ ಸೇರಿದಂತೆಜಿಮ್ಸ್ ಮತ್ತು ಇಎಸ್‌ಐಸಿ ಆಸ್ಪತ್ರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.ಮುಂದಿನ ತಿಂಗಳು ಕೊರೊನಾ ಸೋಂಕುಮತ್ತಷ್ಟು ಉಲ್ಬಣವಾಗುವ ಸಾಧ್ಯತೆಯಿದೆ.ಹೀಗಾಗಿ ತುರ್ತು ಪ್ಲಾÂಂಟ್ ಸ್ಥಾಪಿಸಿ. ಅವಶ್ಯವಿದ್ದರೆಕೇಂದ್ರದಲ್ಲಿ ಇದಕ್ಕೆ ಸಂಬಂಧಿ ಸಿದ ಸಚಿವರನ್ನುಭೇಟಿಯಾಗಿ ಚರ್ಚಿಸಲಾಗುವುದು. ಇಎಸ್‌ಐಸಿಮತ್ತು ಡ್ರಗ್ಸ್ ಅ ಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯಕ್ರಮ ಕೈಗೊಳ್ಳಿ. ಇದಕ್ಕೆ ಸಮನ್ವಯಾ ಧಿಕಾರಿಯಾಗಿಕಾರ್ಯನಿರ್ವಹಿಸಿ ಎಂದು ಜೆಸ್ಕಾಂ ಎಂ.ಡಿ.ರಾಹುಲ್ ಪಾಂಡ್ವೆಗೆ ಜವಾಬ್ದಾರಿ ನೀಡಿದರು.
ಆರೋಗ್ಯ ಇಲಾಖೆಯಲ್ಲಿನ ಖಾಲಿಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿಗೆಸರ್ಕಾರ ನಿರ್ದೇಶನ ನೀಡಿರುವುದರಿಂದ ಶೀಘ್ರನೇಮಕಾತಿ ಮಾಡಿಕೊಂಡು ಮಾನವ ಸಂಪನ್ಮೂಲಹೆಚ್ಚಿಸಿಕೊಳ್ಳಬೇಕು. ತಾಲೂಕು ಆಸ್ಪತ್ರೆಯಲ್ಲಿಯೂಆಕ್ಸಿಜನ್‌ದೊಂದಿಗೆ ರೋಗಿಗಳ ಚಿಕಿತ್ಸೆನೀಡಲು ಪೂರ್ವಸಿದ್ಧತೆ ಕೈಗೊಳ್ಳಬೇಕು ಎಂದುಡಿಎಚ್‌ಒ ಡಾ| ಶರಣಬಸಪ್ಪ ಗಣಜಲಖೇಡ್‌ಗೆಸೂಚಿಸಿದರು.ಕೋವಿಡ್ ಲಸಿಕೆ ಪಡೆದುಕೊಂಡವರಲ್ಲಿಇತ್ತೀಚಿನ ಅಧ್ಯಯನದ ಪ್ರಕಾರನಿರ್ಲಕ್ಷಿಸಬಹುದಾದ ಶೇ. 0.033 ಪ್ರಮಾಣದಲ್ಲಿಸೋಂಕು ಕಂಡುಬಂದಿದೆ. ಹೀಗಾಗಿ ಲಸಿಕೆ ನೀಡಿಕೆಕಾರ್ಯ ಚುರುಕುಗೊಳಿಸಿ. ಆಶಾ ಕಾರ್ಯಕರ್ತೆಯರನ್ನುಇದರಲ್ಲಿ ಸಂಪೂರ್ಣ ಸದ್ಬಳಕೆ ಮಾಡಿಕೊಳ್ಳಬೇಕುಎಂದು ಅ ಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಸೋಂಕಿತರ ಪೈಕಿ ಶೇ. 80ರೋಗಿಗಳಿಗೆ ಆಸ್ಪತ್ರೆ ಚಿಕಿತ್ಸೆ ಅಗತ್ಯವಿಲ್ಲ. ಹೋಂಐಸೋಲೇಷನಲ್ಲಿ ಇದ್ದರೆ ಸಾಕು. ಈ ಕುರಿತುಸೋಂಕಿತರಿಗೆ ಮನದಟ್ಟಾಗುವಂತೆ ತಿಳಿಸುವ ಕಾರ್ಯಎಲ್ಲ ಆಸ್ಪತ್ರೆಗಳಿಂದ ಆಗಬೇಕು ಎಂದು ಸಂಸದರುವಿವರಿಸಿದರು.ಸಭೆಯಲ್ಲಿ ಭಾಗವಹಿಸಿದ್ದ ಕಲ್ಯಾಣ ಕರ್ನಾಟಕಪ್ರಾದೇಶಿಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲರೇವೂರ ಮಾತನಾಡಿ, ಪರಿಸ್ಥಿತಿ ವಿಕೋಪಕ್ಕೆಹೋಗುವ ಮೊದಲು ಕಲಬುರಗಿಯಲ್ಲಿಆಕ್ಸಿಜನ್ ಮತ್ತು ರೆಮ್‌ಡೆಸಿವಿಯರ್ ಇಂಜೆಕ್ಷನ್‌ಕೊರತೆ ನೀಗಿಸಲು ಅ ಧಿಕಾರಿಗಳು ಕೂಡಲೇಕಾರ್ಯಪ್ರವೃತ್ತರಾಗಿ ಎಂದರು.ಜಿಲ್ಲಾ ಧಿಕಾರಿ ವಿ.ವಿ. ಜ್ಯೋತ್ಸಾ ° ಮಾತನಾಡಿ,ಜಿಮ್ಸ್ ಆವರಣದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎಸ್.ಎನ್.ಸಿ.ಯು ಕಟ್ಟಡದಲ್ಲಿಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಲುಚಿಂತಿಸಿದ್ದು, ಅಗತ್ಯ ಮೂಲಸೌಕರ್ಯ ಕಲ್ಪಿಸುವಂತೆಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇದಲ್ಲದೆ ಟ್ರಾಮಾಸೆಂಟರ್ ನಲ್ಲಿಯೂ ಐಸಿಯು ಬೆಡ್ ಸಂಖ್ಯೆಹೆಚ್ಚಳ ಮಾಡಲಾಗುತ್ತಿದೆ. ಮುಂದಿನ ವಾರದಲ್ಲಿ100 ಐಸಿಯು ಬೆಡ್ ಹೆಚ್ಚಳಗೊಂಡು ರೋಗಿಗಳಸೇವೆಗೆ ಸಿದ್ಧವಾಗಲಿವೆ ಎಂದು ಹೇಳಿದರು.ಸಭೆಯಲ್ಲಿ ಭಾಗವಹಿಸಿದ್ದ ಡ್ರಗ್ಸ್ ಅಧಿ ಕಾರಿಗಳುಜಿಲ್ಲೆಗೆ 1200 ರೆಮ್‌ಡೆಸಿವಿಯರ್ ಇಂಜೆಕ್ಷನ್‌ಬರಲಿವೆ ಎಂದು ತಿಳಿಸಿದರು.
ಶಾಸಕರಾದ ಎಂ.ವೈ.ಪಾಟೀಲ, ಖನೀಜ್ ಫಾತಿಮಾ, ಬಿ.ಜಿ. ಪಾಟೀಲ,ನಗರ ಪೊಲೀಸ್ ಆಯುಕ್ತ ಎನ್. ಸತೀಶಕುಮಾರ,ಜಿಲ್ಲಾ ಪಂಚಾಯತ್ ಸಿಇಒ ಡಾ| ದಿಲೀಷ ಸಸಿ,ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರಲೋಖಂಡೆ, ಜಿಮ್ಸ್ ನಿರ್ದೇಶಕ ಡಾ| ಕವಿತಾಪಾಟೀಲ, ಇಎಸ್‌ಐಸಿ ಡೀನ್ ಡಾ| ಲೋಬೋ,ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ| ಅಂಬಾರಾಯರುದ್ರವಾಡಿ ಇದ್ದರು.