Advertisement

ಗರೀಬ್‌ ಕಲ್ಯಾಣ ಯೋಜನೆ ಪಡಿತರ ವಿತರಣೆಗೆ ಸೂಚನೆ

07:18 PM May 02, 2020 | Suhan S |

ಹಾವೇರಿ: ಕೇಂದ್ರ ಸರಕಾರದಿಂದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯಡಿ ಬಿಡುಗಡೆಯಾದ ಆಹಾರ ಧಾನ್ಯವನ್ನು ಮೇನಲ್ಲಿ ಜಿಲ್ಲೆಯ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿತ ಪ್ರಮಾಣದಂತೆ ಪಡೆಯಲು ಡಿಸಿ ಕೃಷ್ಣ ಭಾಜಪೇಯಿ ತಿಳಿಸಿದ್ದಾರೆ.

Advertisement

ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ಪ್ರತಿ ಯುನಿಟ್‌ ಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ ಒಂದು ಕೆ.ಜಿ. ತೊಗರಿಬೇಳೆ ನೀಡಲಾಗುವುದು. ಬಿಪಿಎಲ್‌ ಪಡಿತರ ಪಡಿತರ ಪ್ರತಿ ಯುನಿಟ್‌ಗೆ 10 ಕೆ.ಜಿ. ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ ಒಂದು ಕೆ.ಜಿ. ತೊಗರಿಬೇಳೆ ನೀಡಲಾಗುವುದು. ಎಪಿಎಲ್‌ ಏಕ ಸದಸ್ಯ ಪಡಿತರ ಚೀಟಿಗೆ 5 ಕೆಜಿ ಅಕ್ಕಿ ಮತ್ತು 2 ಮತ್ತು 2ಕ್ಕಿಂತ ಹೆಚ್ಚಿನ ಸದಸ್ಯರ ಪಡಿತರ ಚೀಟಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿ.ಗೆ 15 ರೂ.ಗಳಂತೆ ನೀಡಲಾಗುವುದು. ಹೊಸದಾಗಿ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಉಚಿತವಾಗಿ ಪ್ರತಿ ಅರ್ಜಿಗೆ 10 ಕೆ.ಜಿ. ಅಕ್ಕಿ, ಹೊಸದಾಗಿ ಎಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15 ರೂ.ಗಳಂತೆ ನೀಡಲಾಗುವುದು. ಅಂತಾರಾಜ್ಯ, ಅಂತರ್‌ಜಿಲ್ಲೆ ಪೋರ್ಟೆಬಿಲಿಟಿ ಜಾರಿಯಲ್ಲಿ ಇರುವುದರಿಂದ ಯಾವುದೇ ವರ್ಗದ ಪಡಿತರ ಚೀಟಿಗೆ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ಮೇಲ್ಕಾಣಿಸಿದ ವರ್ಗದ ಪಡಿತರ ಚೀಟಿದಾರರಿಗೆ ಆಹಾರಧಾನ್ಯವನ್ನು ಓಟಿಪಿ ಮುಖಾಂತರವೇ ವಿತರಿಸಲಾಗುತ್ತದೆ ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next