Advertisement

ನಿಯಮ ಮೀರಿದ ಕಟ್ಟಡ ಮಾಲೀಕರಿಗೆ ನೋಟಿಸ್‌

04:26 PM Oct 06, 2020 | Suhan S |

ರಾಯಚೂರು: ನಗರದಲ್ಲಿ ಹೊಸ ಹೊಸ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸುತ್ತಿದ್ದು, ಸಾಕಷ್ಟು ಕಡೆ ನಿಯಮ  ಉಲ್ಲಂಘಿಸಲಾಗುತ್ತಿದೆ. ಕೂಡಲೇ ಅಂಥ ಕಟ್ಟಡಗಳ ಮಾಲೀಕರಿಗೆ ನೋಟಿಸ್‌ ನೀಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೋಪಾಲರೆಡ್ಡಿ ಸೂಚಿಸಿದರು.

Advertisement

ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಮೊದಲ ಸಭೆಯಲ್ಲಿ ಅವರು ಮಾತನಾಡಿದರು. ಹೊಸ ಲೇಔಟ್‌ ನಿರ್ಮಾಣ, ಉದ್ಯಾನಕ್ಕೆ ಮೀಸಲಿಟ್ಟ ನಿವೇಶನಗಳಅತಿಕ್ರಮಣ, ನಿಯಮ ಮೀರಿ ಕಟ್ಟಡ ನಿರ್ಮಾಣ ಸೇರಿದಂತೆ ಸಾಕಷ್ಟು ಪ್ರಕರಣಗಳು ಗಮನಕ್ಕೆ ಬಂದಿವೆ.ನಗರದಲ್ಲಿ ಯಾವುದೇ ಬಡಾವಣೆಗೆ ಅನುಮೋದನೆ ನೀಡುವ ಮುನ್ನ ಮೂಲ ಸೌಲಭ್ಯ ಕಲ್ಪಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಇಂಜಿನಿಯರ್‌ಗಳು ಪರಾಮರ್ಶಿಸದೆ ಅನುಮೋದನೆ ನೀಡಿದಲ್ಲಿ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸದಸ್ಯ ಎ.ಚಂದ್ರಶೇಖರ ಮಾತನಾಡಿ, ನಗರದಲ್ಲಿ ಕಾನೂನುಬದ್ಧವಾಗಿ ಅಪಾರ್ಟ್‌ಮೆಂಟ್‌ ನಿರ್ಮಿಸುತ್ತಿಲ್ಲ. ನಗರ ದಿನೇದಿನೆ ಅಭಿವೃದ್ಧಿಯಾಗುತ್ತಿದೆ. ಬಹುಮಹಡಿ ಕಟ್ಟಡಗಳು ತಲೆ ಎತ್ತುತ್ತಿವೆ. ಆದರೆ, ಸಾಕಷ್ಟು ಕಡೆ ನಿಯಮಾನುಸಾರ ಕಟ್ಟಡ ಕಟ್ಟುತ್ತಿಲ್ಲ. ವಾಹನಗಳ ನಿಲುಗಡೆ ಹಾಗೂಹೆಚ್ಚುವರಿ ಜಾಗ ಬಿಡುವ ನಿಯಮಗಳ ಪಾಲನೆ ಆಗುತ್ತಿಲ್ಲ. ಅಧಿಕಾರಿಗಳು ಇದನ್ನು ಗಮನಿಸಬೇಕು ಎಂದರು.

ಸದಸ್ಯ ಭೀಮಣ್ಣ ಮಾತನಾಡಿ, ಪ್ರತಿ ಲೇಔಟ್‌ ನಲ್ಲಿ ಉದ್ಯಾನವನಕ್ಕೆ ಮೀಸಲಿಟ್ಟ ಸ್ಥಳ ಅತಿಕ್ರಮಣ ವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು. ಅಂಥ ಲೇಔಟ್‌ಗಳ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಬೇಕು ಎಂದು ತಾಕೀತು ಮಾಡಿದರು. ಸದಸ್ಯ ಶೇಖರ ವಾರದ ಮಾತನಾಡಿ, ಲೇಔಟ್‌ ಗಳಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಕೆಲವು ನಿವೇಶನ ಗಳನ್ನು ಮೀಸಲಿಡಲಾಗಿದೆ. ವಾಸ್ತವದಲ್ಲಿ ಆ ನಿವೇಶನಗಳೆಲ್ಲವೂ ಅತಿಕ್ರಮಣಗೊಂಡಿವೆ.ಅವುಗಳನ್ನು ನಗರಾಭಿವೃದ್ಧಿ ಪ್ರಾ ಧಿಕಾರದ ವಶಕ್ಕೆ ಪಡೆಯಬೇಕು ಎಂದರು.

ಬೋಳಮಾನದೊಡ್ಡಿ ಮಾರ್ಗದಲ್ಲಿ ಅಭಿವೃದ್ಧಿ ಮಾಡಿರುವ ಪ್ರಾಧಿಕಾರದ ಬಡಾವಣೆಯಲ್ಲಿ, ಬಾಕಿ ಇರುವ ನಿವೇಶನಗಳನ್ನು ಹಂಚಿಕೆ ಮಾಡುವ ಬಗ್ಗೆ ಮತ್ತು ನಾಲ್ಕು ಉದ್ಯಾನಗಳನ್ನು ಅಭಿವೃದ್ಧಿ ಮಾಡುವಕುರಿತು ಚರ್ಚಿಸಲಾಯಿತು. ಕೊನೆಗೆ ಮಾತನಾಡಿದ ಅಧ್ಯಕ್ಷರು ಇನ್ನು ಮುಂದೆ ಹೊಸ ಲೇಔಟ್‌ಗಳಿಗೆ ಮಂಜೂರಾತಿ ನೀಡುವಾಗ ಮೂಲ ಸೌಲಭ್ಯ ಅಭಿವೃದ್ಧಿ ಮಾಡಿರುವ ಕುರಿತು ಸದಸ್ಯರ ಜೊತೆ ಖುದ್ದಾಗಿ ಪರಿಶೀಲಿಸಿ ಅನುಮತಿ ನೀಡಲಾಗುವುದು. ಯಾವುದೇ ಪ್ರಭಾವಕ್ಕೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದರು.

Advertisement

ಸದಸ್ಯೆ ವಾಣಿಶ್ರೀ, ಪ್ರಭಾರ ಆಯುಕ್ತ ಶರಣಪ್ಪ, ನಗರಸಭೆ ಪೌರಾಯುಕ್ತ ಡಾ|ದೇವಾನಂದ ದೊಡ್ಡಮನಿ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next