Advertisement

ಖ್ಯಾತ ಸಂಗೀತಗಾರ ಉಸ್ತಾದ್‌ ದಾಗರ್‌ ಇನ್ನಿಲ್ಲ

10:21 AM Aug 01, 2017 | |

ಪುಣೆ: ಖ್ಯಾತ ಧ್ರುಪದ್‌ ಶೈಲಿಯ ಸಂಗೀತಗಾರ ಉಸ್ತಾದ್‌ ಸಯೀದುದ್ದೀನ್‌ ದಾಗರ್‌(78) ಸೋಮವಾರ ನಿಧನ ಹೊಂದಿದರು. ಕೆಲ ಕಾಲದಿಂದ ಅನಾರೋಗ್ಯದಲ್ಲಿದ್ದ ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 1939 ಏ.20ರಂದು ಅಲ್ವಾರ್‌ನಲ್ಲಿ ಜನಿಸಿದ್ದ ಅವರು, ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಧ್ರುಪದ್‌ ಶೈಲಿಯ ಹಾಡುಗಾರರಾಗಿ ಖ್ಯಾತಿ ಪಡೆದಿದ್ದರು. 1985ರಲ್ಲಿ ಅವರು ಪುಣೆಗೆ ಆಗಮಿಸಿದ್ದು, ಮಹಾರಾಷ್ಟ್ರದಲ್ಲಿ ಧ್ರುಪದ್‌ ವ್ಯಾಪಕವಾಗಿ ಮನ್ನಣೆ ಪಡೆಯಲು ಕಾರಣವಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next