Advertisement

ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಲು ಸಿದ್ಧವಾಗುತ್ತಿದೆ ನೋಟಾ …!

01:43 PM Apr 14, 2018 | Team Udayavani |

ಮಂಗಳೂರು: ವಿಧಾನಸಭಾ ಚುನಾವಣೆಗೆ ಇನ್ನು ಇಪ್ಪತೊಂಬತ್ತೇ ದಿನ ಬಾಕಿ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಅನೇಕ ಸಮಸ್ಯೆಗಳಿವೆ. ಅದರಲ್ಲಿ ಮುಖ್ಯವಾದುದು ನೇತ್ರಾವತಿ ನದಿ ತಿರುವು ಯೋಜನೆ. ನೇತ್ರಾವತಿಯನ್ನು ಉಳಿಸುವ ಸಲುವಾಗಿ ಕೆಲ ವರ್ಷಗಳಿಂದ ಜಿಲ್ಲೆಯಲ್ಲಿ ಅನೇಕ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ಚಕಾರ ಎತ್ತಲಿಲ್ಲ
ಎಂಬ ಕಾರಣಕ್ಕೋಸ್ಕರ ಈ ಬಾರಿ ನೋಟಾ ಅಭಿಯಾನದಿಂದ ಸಂಬಂಧಪಟ್ಟವರನ್ನು ಸೆಳೆಯಲು ತೀರ್ಮಾನ ಮಾಡಲಾಗಿದೆ.

Advertisement

ಅಭಿಯಾನವು ಗ್ರಾಮೀಣ ಪ್ರದೇಶದಿಂದಲೇ ನಡೆಯಲಿದೆ. ಸದಸ್ಯರು ಗ್ರಾಮಗಳ ಮನೆ ಮನೆಗೆ ತೆರಳಿ, ಅಭಿಯಾನದ ಕುರಿತು ಅರಿವು ಮೂಡಿಸುತ್ತಾರೆ. ಅಭಿಯಾನ ಯಶಸ್ವಿ ಯಾಗಲು ರಿಕ್ಷಾ ಚಾಲಕರೂ ಕೈಜೋಡಿಸಲಿದ್ದಾರೆ. ಮೊದಲನೆಯದಾಗಿ ನಗರದ ರಿಕ್ಷಾ ಚಾಲಕರಿಗೆ ಅರಿವು ಮೂಡಿಸಲಾಗುತ್ತದೆ. ಅನಂತರ ಪ್ರತಿಯೊಂದು ರಿಕ್ಷಾದಲ್ಲಿಯೂ ಭವಿಷ್ಯದಲ್ಲಿ ನೀರಿ ಗೋಸ್ಕರ ನೇತ್ರಾವತಿಯನ್ನು ಉಳಿಸಲು ನೋಟಾ ಅಭಿಯಾನನ್ನು ಬೆಂಬಲಿಸಿ ಎಂಬ ಘೋಷಣೆಯುಳ್ಳ ಸ್ಟಿಕ್ಕರ್‌ಗಳನ್ನು ಹಚ್ಚಲಾಗುತ್ತದೆ.

ಈ ಹಿಂದೆ ಯಶಸ್ವಿ ಆಗಿತ್ತು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಟಾ ಅಭಿಯಾನ ಇದೇ ಮೊದಲಲ್ಲ. 2016ರಲ್ಲಿ ನಡೆದ ಜಿ.ಪಂ., ತಾ.ಪಂ.ಚುನಾವಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ, ಮುಂಡಾಜೆ ಸೇರಿದಂತೆ ಕೆಲ ಗ್ರಾಮಗಳಲ್ಲಿ ನೇತ್ರಾವತಿ ಉಳಿಸುವ ಸಲುವಾಗಿ ಸಹ್ಯಾದ್ರಿ ಸಂಚಯ ನೋಟಾ ಅಭಿಯಾನ ನಡೆಸಿತ್ತು. ಅಂದು ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿಯೂ ಈ ಬಾರಿಯೂ ಅದೇ ತಂತ್ರವನ್ನು ಪ್ರಯೋಗಿಸಲು ತೀರ್ಮಾನಿಸಿದೆ.

ಏನಿದು ನೋಟಾ?
NOTA (None Of The Above) ಎಂಬುದು ನೋಟಾ ಪದದ ಅರ್ಥ. ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳು ತನ್ನ ಮದ ಪಡೆಯಲು ಅರ್ಹರಲ್ಲ ಎಂದು ಮತದಾರ ತೀರ್ಮಾನಿಸಿದರೆ ಎಲೆಕ್ಟ್ರಾನಿಕ್‌ ಮತಯಂತ್ರದಲ್ಲಿ ಇರುವ ನೋಟಾ ಬಟನ್‌ ಒತ್ತಹುದು. ಕೆಲವು ಸುತ್ತುಗಳ ವಿಚಾರಣೆಗಳ ಬಳಿಕ ಸುಪ್ರೀಂ ಕೋರ್ಟ್‌ 2013ರ ಸೆಪ್ಟಂಬರ್‌ 27ರಂದು ನೋಟಾ ಜಾರಿಗೊಳಿಸಲು ಅವಕಾಶ ಕಲ್ಪಿಸಿತ್ತು.

ನೇತ್ರಾವತಿ ಉಳಿಸಿ ಸಹಿತ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಈ ಬಾರಿ ಜಿಲ್ಲೆಯಾದ್ಯಂತ ನೋಟಾ ಅಭಿಯಾನ ನಡೆಸಲಾಗುವುದು.
– ದಿನೇಶ್‌ ಹೊಳ್ಳ , ಸಹ್ಯಾದ್ರಿ ಸಂಚಯ ಸಂಚಾಲಕ

Advertisement

ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next