Advertisement

ಮಕ್ಕಳ ಕಲ್ಯಾಣದ ಬಗ್ಗೆ ಆದ್ಯತೆ ನೀಡದಿದ್ದರೆ ನೋಟ ಆಯ್ಕೆ

12:23 AM Apr 10, 2019 | Lakshmi GovindaRaju |

ಬೆಂಗಳೂರು: ರಾಜಕೀಯ ಪಕ್ಷಗಳು ಮಕ್ಕಳ ಪರವಾದ ಚುನಾವಣಾ ಪ್ರಣಾಳಿಕೆ ರೂಪಿಸಿ ಅನುಷ್ಠಾನಗೊಳಿಸದಿದ್ದರೆ “ನೋಟಾ’ ಆಯ್ಕೆ ಮಾಡಲಾಗುವುದು ಎಂದು ಕ್ರಿಸ್‌³ ಸಂಸ್ಥೆಯ ಅಧ್ಯಕ್ಷ ಕುಮಾರ್‌ ಜಹಗಿರ್‌ದಾರ್‌ ತಿಳಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ಪ್ರಸಕ್ತ ಬಿಡುಗಡೆಗೊಳಿಸಿರುವ ಪ್ರಣಾಳಿಕೆಯಲ್ಲಿ ಮಕ್ಕಳ ಕಲ್ಯಾಣದ ಕುರಿತು ಯಾವುದೇ ಅಂಶಗಳನ್ನು ಪ್ರಸ್ತಾಪಿಸದಿರುವುದು ಬೇಸರದ ಸಂಗತಿ. ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬುದು ಪಠ್ಯಕಷ್ಟೇ ಸೀಮಿತವಾಗಿದೆ.

ಭವಿಷ್ಯದ ಪ್ರಜೆಗಳ ಬಗ್ಗೆ ಯಾವುದೇ ಪಕ್ಷಗಳಿಗೆ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಭಾರತ ಜನಸಂಖ್ಯೆಯಲ್ಲಿ ಶೇ.55ರಷ್ಟು ಮಕ್ಕಳಿದ್ದಾರೆ. ಇವರಿಗೆ ಮತ ಚಲಾಯಿಸಲು ಅವಕಾಶ ಇಲ್ಲದಿರುವುದರಿಂದ ಅವರ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ವಿಷಯ ಪ್ರಸ್ತಾಪಿಸದೆ ನಿರ್ಲಕ್ಷ್ಯ ಮಾಡಿವೆ ಎಂದರು.

ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ, ವಿದ್ಯಾಭ್ಯಾಸ ಹಾಗೂ ಆರೋಗ್ಯ ಒದಗಿಸಬೇಕು. ಶಾಲೆಗೆ ಪ್ರಯಾಣಿಸುವಾಗ ಮತ್ತು ಶಾಲಾ ಸಮಯದಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು. ಮಕ್ಕಳ ಮೇಲೆ ದೌರ್ಜನ್ಯ ಎಸಗುವವರು ವಿರುದ್ಧ ಕಠಿಣ ಶಿಕ್ಷೆ ಕೈಗೊಂಡು ಪೋಸ್ಕೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳನ್ನು 6 ತಿಂಗಳೊಳಗಾಗಿ ಇತ್ಯರ್ಥಪಡಿಸಬೇಕು ಎಂದು ಒತ್ತಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next