Advertisement

Asia cup; ಇಂತಹ ಬೌಲಿಂಗ್ ಎದುರಿಸಿ ಅಭ್ಯಾಸವಿಲ್ಲ…: ಪಾಕ್ ಬೌಲರ್ ಗಳ ಬಗ್ಗೆ ಗಿಲ್ ಮಾತು

05:31 PM Sep 09, 2023 | Team Udayavani |

ಕೊಲಂಬೊ: ಸದ್ಯ ಶ್ರೀಲಂಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ 2023 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಮೆಗಾ ಪಂದ್ಯಕ್ಕೆ ಮುಂಚಿತವಾಗಿ, ಭಾರತದ ಯುವ ಬ್ಯಾಟಿಂಗ್ ಸೆನ್ಸೇಷನ್ ಶುಭ್ಮನ್ ಗಿಲ್ ಅವರು ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್, ನಸೀಮ್ ಷಾ ಮತ್ತು ಮುಂತಾದವರನ್ನು ಮೊದಲ ಬಾರಿಗೆ ಎದುರಿಸಿದ ಬಗ್ಗೆ ಮಾತನಾಡಿದ್ದಾರೆ.

Advertisement

ಗುಣಮಟ್ಟದ ಪಾಕಿಸ್ತಾನಿ ಬೌಲಿಂಗ್ ದಾಳಿಯ ವಿರುದ್ಧ ಆಡದಿರುವುದು ಟೀಂ ಇಂಡಿಯಾ ಆಟಗಾರರು ಕೆಲವೊಮ್ಮೆ ಅವರನ್ನು ಎದುರಿಸಲು ಹೆಣಗಾಡುತ್ತಿರುವುದಕ್ಕೆ ಒಂದು ಕಾರಣ ಎಂದು ಗಿಲ್ ಶನಿವಾರ ಹೇಳಿದರು.

ಭಾನುವಾರ ಕೊಲಂಬೊದಲ್ಲಿ ನಡೆಯಲಿರುವ ಸೂಪರ್ ಫೋರ್ ಏಷ್ಯಾಕಪ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಎದುರಿಸಲಿದೆ.

“ನೀವು ಈ ಹಂತದಲ್ಲಿ ಆಡುತ್ತಿರುವಾಗ, ನಿಮ್ಮ ವೃತ್ತಿಜೀವನದ ಕೆಲವು ಹಂತದಲ್ಲಿ ನೀವು ಎಡಗೈ ವೇಗಿಗಳನ್ನು ಆಡುತ್ತೀರಿ. ಇತರ ತಂಡಗಳಿಗೆ ಹೋಲಿಸಿದರೆ ನಾವು ಪಾಕಿಸ್ತಾನ ವಿರುದ್ಧ ಹೆಚ್ಚು ಆಡುವುದಿಲ್ಲ. ಅವರು ಗುಣಮಟ್ಟದ ಬೌಲಿಂಗ್ ದಾಳಿಯನ್ನು ಹೊಂದಿದ್ದಾರೆ. ನೀವು ಆಗಾಗ್ಗೆ ಅಂತಹ ಬೌಲಿಂಗ್ ದಾಳಿಯನ್ನು ಎದುರಿಸದಿದ್ದಾಗ ಅದು ವ್ಯತ್ಯಾಸ ಉಂಟುಮಾಡುತ್ತದೆ” ಎಂದು ಗಿಲ್ ಹೇಳಿದರು.

ಆರಂಭಿಕ ಜೊತೆಗಾರ ಮತ್ತು ನಾಯಕ ರೋಹಿತ್ ಶರ್ಮಾ ಬಗ್ಗೆ ಮಾತನಾಡಿದ ಅವರು, “ನಾನು ಪವರ್ ಪ್ಲೇ ನಲ್ಲಿ ಆದಷ್ಟು ಗ್ರೌಂಡಲ್ಲಿ ಆಡಲು ಇಷ್ಟಪಡುವ ವ್ಯಕ್ತಿ. ಆದರೆ ರೋಹಿತ್ ಸಿಕ್ಸರ್ ಹೊಡೆಲು ಇಷ್ಟ ಪಡುತ್ತಾರೆ. ಈ ಸಂಯೋಜನೆಯು ನಮಗೆ ಚೆನ್ನಾಗಿ ಕೆಲಸ ಮಾಡುತ್ತದೆ” ಎಂದು ಹೇಳಿದರು.

Advertisement

ಇದನ್ನೂ ಓದಿ:G20;ಆಹ್ವಾನವಿಲ್ಲ ಎಂದ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದ ಬಿಜೆಪಿ

ಪಾಕಿಸ್ತಾನ ನಾಯಕ ಬಾಬರ್ ಅಜಂ ಬಗ್ಗೆ ಮಾತನಾಡಿದ ಗಿಲ್, ಖಂಡಿತವಾಗಿಯೂ ನಾವು ಅವರನ್ನು ಫಾಲೋ ಮಾಡುತ್ತೇವೆ. ಒಬ್ಬ ಆಟಗಾರ ಉತ್ತಮ ಪ್ರದರ್ಶನ ನೀಡುತ್ತಿರುವಾಗ ಅವರು ಯಾಕೆ ಇಷ್ಟು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಅವರ ವಿಶೇಷತೆ ಏನು ಎಂದು ತಿಳಿಯಲು ಎಲ್ಲರೂ ಅವರನ್ನು ನೋಡುತ್ತಾರೆ. ಬಾಬರ್‌ ಅವರು ವಿಶ್ವ ದರ್ಜೆಯ ಆಟಗಾರ ಮತ್ತು ನಾವೆಲ್ಲರೂ ಅವರನ್ನು ಮೆಚ್ಚುತ್ತೇವೆ” ಎಂದು ಗಿಲ್ ಹೇಳಿದರು.

ಪಾಕಿಸ್ತಾನ ಬೌಲರ್ ಗಳಾದ ಶಹೀನ್ ಶಾ ಅಫ್ರಿದಿ ಮತ್ತು ನಸೀಂ ಶಾ ನಡುವಿನ ವ್ಯತ್ಯಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶುಭ್ಮನ್ ಗಿಲ್, ಶಹೀನ್ ಶಾ ಹೆಚ್ಚು ಸ್ವಿಂಗ್ ಮಾಡುತ್ತಾರೆ, ಆದರೆ ನಸೀಂ ಶಾ ಹೆಚ್ಚು ವೇಗ ಮತ್ತು ಉತ್ತಮ ಏರಿಯಾಗಳಲ್ಲಿ ಬಾಲ್ ಹಾಕುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next