Advertisement

ಇನ್ನು ಏಳಲ್ಲ ,ಎಂಟು ಖಂಡ!- 375 ವರ್ಷಗಳ ಹಿಂದೆ ಕಾಣೆಯಾಗಿದ್ದ ಖಂಡ ವಿಜ್ಞಾನಿಗಳಿಂದ ಪತ್ತೆ

12:33 AM Sep 28, 2023 | Team Udayavani |

ಹೊಸದಿಲ್ಲಿ: ಅಚ್ಚರಿ ಎನ್ನಿಸಿದರೂ ಸತ್ಯ! ಬರೋಬ್ಬರಿ 375 ವರ್ಷಗಳ ಹಿಂದೆ ಸಮುದ್ರದಾಳದಲ್ಲಿ ಕಾಣೆಯಾಗಿದ್ದ ಖಂಡವೊಂದನ್ನು ಭೂವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಇದಕ್ಕೆ ಎಂಟನೇ ಖಂಡದ ಸ್ಥಾನ ನೀಡಿದ್ದಾರೆ. ಇದು ವಿಶ್ವದ ಅತ್ಯಂತ ಚಿಕ್ಕ  ಖಂಡವಾಗಿದೆ.

Advertisement

ಈ ಹೊಸ ಖಂಡಕ್ಕೆ ಝೀಲಾಂಡಿಯಾ ಅಥವಾ ಟೆ ರಿಯ ಎ ಮೌಯಿ ಎಂಬ ಹೆಸರು ನೀಡಿದ್ದು, ಇದಕ್ಕಾಗಿಯೇ ಪರಿಷ್ಕರಿಸಿದ ಹೊಸ ನಕ್ಷೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ಭೂ

ವಿಜ್ಞಾನಿಗಳು ಮತ್ತು ಭೂಕಂಪಶಾಸ್ತ್ರಜ್ಞರ ತಂಡವೊಂದು ಖಂಡವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ. ಸಾಗರ ತಳದಿಂದ ತೆಗೆದುಕೊಂಡ ಬಂಡೆಯ ಮಾದರಿಗಳಿಂದ ಪಡೆದ ದತ್ತಾಂಶವನ್ನು ಬಳಸಿಕೊಂಡು ಸಂಶೋಧಕರು ಇದನ್ನು ಕಂಡುಕೊಂಡಿದ್ದಾರೆ. ಸಂಶೋಧನೆಯ ವಿವರಗಳನ್ನು ಟೆಕ್ಟೋನಿಕ್ಸ್‌ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

ಝೀಲಾಂಡಿಯಾ 1.89 ದಶಲಕ್ಷ ಚದರ ಮೈಲು (4.9 ದಶಲಕ್ಷ ಚದರ ಕಿ.ಮೀ) ವಿಶಾಲವಾಗಿದೆ.

ಇದು ಮಡಗಾಸ್ಕರ್‌ನ ಗಾತ್ರಕ್ಕಿಂತ ಆರು ಪಟ್ಟು ದೊಡ್ಡದಾಗಿದೆ. ಹೊಸ ಖಂಡದ ಶೇ. 94ರಷ್ಟು ಭಾಗದಲ್ಲಿ ನೀರಿದ್ದು, ನ್ಯೂಜಿಲೆಂಡ್‌ನ‌ಂತೆಯೇ ಬೆರಳೆಣಿಕೆಯಷ್ಟು ದ್ವೀಪಗಳನ್ನು ಹೊಂದಿದೆ. 2021ರಲ್ಲೇ ವಿಜ್ಞಾನಿಗಳು ಇಂಥದ್ದೊಂದು ಖಂಡವಿದೆ ಎಂದು ಹೇಳಿದ್ದರೂ ಅದನ್ನು ಅಧಿಕೃತವಾಗಿ ಗುರುತಿಸಿರಲಿಲ್ಲ.

Advertisement

ವಿಜ್ಞಾನಿಗಳು ಹೇಳುವಂತೆ ಝೀಲಾಂಡಿಯಾವನ್ನು ಅಧ್ಯಯನ ಮಾಡುವುದು ಕಷ್ಟಕರವಾಗಿದೆ. ಸದ್ಯ ವಿಜ್ಞಾನಿಗಳು  ಸಮುದ್ರದ ತಳದಿಂದ ತರಲಾದ ಬಂಡೆಗಳು ಮತ್ತು ಕೆಸರಿನ ಮಾದರಿಗಳ ಸಂಗ್ರಹಗಳನ್ನು ಅಧ್ಯಯನ ಮಾಡುತ್ತಿದ್ದಾರೆ. ಜತೆಗೆ ತೀರದ ಕೆಲವೊಂದು ಸಣ್ಣಪುಟ್ಟ ಕಲ್ಲುಗಳನ್ನೂ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಇದರಿಂದ ಬಂದ ದತ್ತಾಂಶವನ್ನು ಬಳಸಿಕೊಂಡು ಹೊಸ ಖಂಡದ ಬಗ್ಗೆ ಮಾಹಿತಿ ನೀಡಲಾಗಿದೆ.

ಬಂಡೆಯ ಮಾದರಿಗಳ ಅಧ್ಯಯನವು ಪಶ್ಚಿಮ ಅಂಟಾರ್ಕ್‌ಟಿಕಾದಲ್ಲಿನ ಭೂವಿಜ್ಞಾನದ ಮಾದರಿಗಳನ್ನು ತೋರಿಸಿದೆ ಎಂದು ಕಜys.ಟ್ಟಜ ವರದಿ ಮಾಡಿದೆ. ಇದು ನ್ಯೂಜಿಲೆಂಡ್‌ನ‌ ಪಶ್ಚಿಮ ಕರಾವಳಿಯ ಕ್ಯಾಂಪೆºಲ್‌  ಪ್ರಸ್ಥಭೂಮಿಯ ಬಳಿಯ ಕೆಳಗಿನ ವಲಯದ ಸಾಧ್ಯತೆಯನ್ನು ಸೂಚಿಸುತ್ತದೆ. ಆದಾಗ್ಯೂ ಸಂಶೋಧಕರು ಆ ಪ್ರದೇಶದಲ್ಲಿ ಕಾಂತೀಯ ವೈಪರೀತ್ಯಗಳನ್ನು ಗುರುತಿಸಿಲ್ಲ.

550 ದಶಲಕ್ಷ  ವರ್ಷಗಳ ಹಿಂದೆ…

ಝೀಲಾಂಡಿಯಾ ಮೂಲತಃ ಗೊಂಡ್ವಾನಾದ ಪ್ರಾಚೀನ ಸೂಪರ್‌ ಖಂಡದ ಭಾಗವಾಗಿತ್ತು. ಇದು ಸುಮಾರು 550 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡಿದ್ದು, ಮೂಲ ಭೂತವಾಗಿ ದಕ್ಷಿಣ ಗೋಳಾರ್ಧದ ಎಲ್ಲ ಭೂಮಿಯನ್ನು ಒಟ್ಟುಗೂಡಿಸಿತ್ತು ಎಂದು ಸಂಶೋಧಕರು ಹೇಳುತ್ತಾರೆ.  100 ದಶಲಕ್ಷ ವರ್ಷದ ಹಿಂದೆ ದೂರವಾಗಿತ್ತು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next