ಬೆಳಗಾವಿ: ಈ ಬಾರಿಯ ಚುನಾವಣೆ ರಸ್ತೆ, ಗಟಾರ, ನೀರಿಗಾಗಿ ಅಲ್ಲ.ಹಿಂದೂ-ಮುಸ್ಲಿಂ ಚುನಾವಣೆಯಾಗಿದೆ. ಯಾರಿಗೆ ಬಾಬ್ರಿ ಮಸೀದಿ ಕಟ್ಟಬೇಕಿದೆಯೋ ಅವರು ಕಾಂಗ್ರೆಸ್‌ಗೆ ಮತ ಹಾಕಿ, ಶಿವಾಜಿ-ಸಂಭಾಜಿ ಮಹಾರಾಜರು ಬೇಕೆನ್ನುವವರು ಬಿಜೆಪಿಗೆ ಮತ ಹಾಕಿ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಿಜೆಪಿ ಶಾಸಕ ಸಂಜಯ ಪಾಟೀಲ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತಾಲೂಕಿನ ಸುಳೇಭಾವಿ ಗ್ರಾಮದಲ್ಲಿ ಮೂರ್‍ನಾಲ್ಕು ದಿನಗಳ ಹಿಂದೆ ಮತಯಾಚನೆ ಬಳಿಕ ಸಭೆಯಲ್ಲಿ ಮಾತನಾಡಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಶಿವಾಜಿ ಮಹಾರಾಜರು, ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಯಾರಿಗೆ ಬೇಕೋ ಅವರೆಲ್ಲರೂ ಬಿಜೆಪಿಗೆ ಮತ ಹಾಕಿ. ಟಿಪ್ಪು ಸುಲ್ತಾನ ಜಯಂತಿ ಬೇಕು ಎನ್ನುವವರು ಅಕ್ಕಾ (ಲಕ್ಷ್ಮೀ ಹೆಬ್ಟಾಳಕರ) ಕೊಡುವ ಕುಕ್ಕರ್ ತೆಗೆದುಕೊಂಡು ಕಾಂಗ್ರೆಸ್‌ಗೆ ವೋಟ್ ಹಾಕಿ. ಹಿಂದೂ ಧರ್ಮ ಉಳಿಸುವ ಬಿಜೆಪಿಗೆ ಮತ ಹಾಕ್ತೀರೋ ಅಥವಾ ಟಿಪ್ಪು ಜಯಂತಿ ಆಚರಿಸುವವರಿಗೆ ವೋಟ್ ಹಾಕ್ತಿರೋ ಯೋಚಿಸಿ ಎಂದಿದ್ದಾರೆ.
ಮಸೀದಿ ಕಟ್ಟಲು ಒಂದೂ ರೂಪಾಯಿ ಕೊಡಲ್ಲ: “ದೇಶದಲ್ಲಿ ಶಿವಾಜಿ ಹಾಗೂ ಸಂಭಾಜಿ ಮಹಾರಾಜರು ಇರದಿದ್ದರೆ ನಾವೆಲ್ಲರೂ ಈಗ ಯೂಸುಫ, ಸಲೀಂ,ಮಹ್ಮದ್ ಆಗಿ ಇರುತ್ತಿದ್ದೆವು. ಶಿವಾಜಿ, ಸಂಭಾಜಿ ಮಹಾರಾಜರ ಪ್ರತಿಮೆಗೆ ಹಣ ಕೊಡುತ್ತೇನೆ. ಆದರೆ, ಮಸೀದಿ ಕಟ್ಟಲು ಒಂದೂ ರೂಪಾಯಿಯನ್ನೂ ನಾನು ಕೊಡುವುದಿಲ್ಲ. ಚುನಾವಣೆ ಮುಗಿದ ಬಳಿಕ ನಮ್ಮ ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿ’ ಎಂದಿದ್ದಾರೆ.
“ಹಿಂದೂ-ಮುಸ್ಲಿಂ ಗಲಾಟೆಯಾದಾಗ ಪೊಲೀಸ್ ಠಾಣೆಗೆ μರೋಜ್ ಸೇಠ,ಲಕ್ಷ್ಮೀಹೆಬ್ಟಾಳಕರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮುಸ್ಲಿಂ ಯುವಕರ ಪರವಾಗಿ ಕರೆ ಮಾಡಿ ಹೇಳುತ್ತಾರೆ. ಆದರೆ, ಹಿಂದೂ ಯುವಕರ ಪರ ಫೋನ್ ಮಾಡಿ ಅವರನ್ನು ಬಿಡಿ ಎಂದು ಹೇಳ್ಳೋದು ನಾನೊಬ್ಬನೇ’ ಎಂದಿದ್ದಾರೆ.