Advertisement

ಐದು ತಿಂಗಳಿಂದ ವೇತನ ಲಭಿಸಿಲ್ಲ; ಶಿಕ್ಷಕರ ಗೋಳು ಕೇಳುವವರಿಲ್ಲ

10:15 AM Mar 04, 2020 | sudhir |

ಪೆರ್ಲ: ಎಂಜಿಎಲ್‌ಸಿ ಏಕಾಧ್ಯಾಪಕ ಶಾಲಾ ಶಿಕ್ಷಕರಿಗೆ ಕಳೆದ 5 ತಿಂಗಳಿಂದ ವೇತನ ಇಲ್ಲದೆ ಅಧ್ಯಾಪಕರು ಉಪವಾಸ ಇರುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಸೆಪ್ಟಂಬರ್‌ ತಿಂಗಳಲ್ಲಿ ವೇತನ ಲಭಿಸಿದ್ದೂ ನಂತರ ಇದುವರೆಗೂ ಸಂಬಳ ಲಭಿಸಲಿಲ್ಲ .ಇವರಿಗೆ ತಿಂಗಳಿಗೆ ರೂ.17,325ನ್ನು ಗೌರವ ಧನವಾಗಿ ನೀಡಲಾಗುತ್ತದೆ. ಇತರ ಭತ್ಯೆಗಳು ಯಾವುದೂ ಇಲ್ಲ .ಗೌರವ ಧನವು ಪ್ರತಿ ತಿಂಗಳು ಲಭಿಸದೆ ಎರಡೋ ಮೂರೊ ತಿಂಗಳಿಗೊಮ್ಮೆ ಸಿಗುವುದಾಗಿದೆ. ಇದೀಗ 5ತಿಂಗಳಾದರೂ ವೇತನ ಬರಲಿಲ್ಲ .

Advertisement

ಎಂಜಿಎಲ್‌ಸಿಗಳಲ್ಲಿ 1ನೇ ತರಗತಿಯಿಂದ 4ನೇ ತರಗತಿಯವರೆಗೆ ಓರ್ವ ಶಿಕ್ಷಕನೇ ಎಲ್ಲಾ ವಿಷಯಗಳ ತರಗತಿ ನಡೆಸುವುದರೊಂದಿಗೆ, ಪ್ರಧಾನ ಅಧ್ಯಾಪಕನಿಂದ ಪ್ಯೂನ್‌ ಮಾಡುವ ಎಲ್ಲಾ ಕೆಲಸ ಕಾರ್ಯಗಳನ್ನು ಮಾಡಬೇಕು.ರಾಜ್ಯದಲ್ಲಿ ಸುಮಾರು 270 ಎಂಜಿಎಲ್‌ಸಿ ಏಕಾಧ್ಯಾಪಕ ಶಾಲೆಗಳಿದ್ದೂ, 340ರಷ್ಟು ಶಿಕ್ಷಕರು ದುಡಿಯುತ್ತಿದ್ದಾರೆ.ಕಾಸರಗೋಡು ಜಿಲ್ಲೆಯಲ್ಲಿ 52 ಎಂಜಿಎಲ್‌ಸಿ ಗಳಲ್ಲಾಗಿ 71 ಅಧ್ಯಾಪಕರು ಇದ್ದಾರೆ. 1ರಿಂದ 4ನೇ ತರಗತಿಯವರೆಗೆ ಪ್ರಾಥಮಿಕ ವಿದ್ಯಾಭ್ಯಾಸ ಇಲ್ಲಿ ನೀಡಲಾಗುತ್ತಿದೆ. ಸುಮಾರು 70ಕ್ಕಿಂತಲೂ ಹೆಚ್ಚು ಮಕ್ಕಳಿರುವ ಎಂಜಿಎಲ್‌ಸಿಗಳು ಇವೆ.40ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಕೆಲವು ಎಂಜಿಎಲ್‌ಸಿಗಳಲ್ಲಿ ಒಬ್ಬರು ಹೆಚ್ಚುವರಿ ಶಿಕ್ಷಕರು ಇರುತ್ತಾರೆ.

1995ರಲ್ಲಿ ಡಿಪಿಇಪಿ ಯೋಜನೆಯಲ್ಲಿ ಶಾಲೆಗಳಿಲ್ಲದ ಕುಗ್ರಾಮ ಪ್ರದೇಶ ಹಾಗೂ ಪರಿಶಿಷ್ಟ ಜಾತಿ,ವರ್ಗ ಕಾಲನಿಗಳಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುವುದು,ಅರ್ಧದಲ್ಲಿ ವಿದ್ಯಾಭ್ಯಾಸ ಮೊಟಕುಗೊಳಿಸುವುದನ್ನು ತಪ್ಪಿಸುವ ಉದ್ದೇಶದಿಂದ ಏಕಾಧ್ಯಾಪಕ ಶಾಲೆಗಳನ್ನು ಮೊದಲ ಹಂತದಲ್ಲಿ ಆರಂಭಿಸಲಾಗಿತ್ತು.ನಂತರ 1997ರಲ್ಲಿಯೂ,2000ನೇ ವರ್ಷದಲ್ಲಿ ಇನ್ನಷ್ಟು ಎಂಜಿಎಲ್‌ಸಿ ಗಳನ್ನು ತೆರೆಯಲಾಯಿತು.ಡಿಪಿಇಪಿ ಯೋಜನೆಯ ನಂತರ ಎಸ್‌ಎಸ್‌ಎ ಯೋಜನೆಯಲ್ಲಿ ಮುಂದು ವರಿಸಿದ ಎಂಜಿಎಲ್‌ಸಿಗಳನ್ನು ಈ ಯೋಜನೆಯ ಕಾಲಾವಧಿ ಮುಗಿದಾಗ ರಾಜ್ಯ ಸರಕಾರದ ಅಧೀನತೆಯಲ್ಲಿ ಮುಂದುವರಿಸಲಾಯಿತು.ಸಾರ್ವಜನಿಕ ವಿದ್ಯಾಭ್ಯಾಸ ಇಲಾಖೆಯ ಮೇಲ್ನೋಟದಲ್ಲಿ ಕಾರ್ಯಾಚರಿಸುವ ಏಕಾಧ್ಯಪಕ ಶಾಲೆಗಳ ಶಿಕ್ಷಕರಿಗೆ ಉಪಜಿಲ್ಲಾ ವಿದ್ಯಾಭ್ಯಾಸ ಇಲಾಖೆಯಿಂದ ವೇತನವು ಬ್ಯಾಂಕ್‌ ಖಾತೆಯ ಮೂಲಕ ವಿತರಣೆಯಾಗುತ್ತದೆ.

ಈ ಅಧ್ಯಯನ ವರ್ಷದಲ್ಲಿ ಸರಕಾರವು ಶಿಕ್ಷಕರಿಗೆ ತಿಂಗಳಿಗೆ ರೂ.18,500 ಆಗಿ ಗೌರವ ಧನ ಏರಿಸಿದರೂ ಅನುದಾನ ನೀಡಲಿಲ್ಲ .

ಪ್ರತೀ ವರ್ಷವು ಸರಕಾರ ಈ ಶಾಲೆಗಳಿಗೆ ಪ್ರತ್ಯೇಕ ಅನುದಾನ ಇಡದೆ ಇತರ ಮೂಲಗಳಿಂದ ಹಣ ಸಂಗ್ರಹಿಸಿ ವೇತನ ಹಾಗೂ ಇತರ ಕಾರ್ಯಗಳಿಗೆ ನೀಡುವುದಾಗಿದೆ.ಆದ್ದರಿಂದ ಇವರಿಗೆ ಪ್ರತೀ ತಿಂಗಳು ಸಂಬಳ ಲಭ್ಯವಾಗದಿರಲು ಮುಖ್ಯ ಕಾರಣ.ಸರಕಾರಿ,ಅನುದಾನಿತ ಶಾಲೆಗಳಂತೆ ಮಕ್ಕಳಿಗೆ ಉಚಿತ ಪಾಠ ಪುಸ್ತಕ,ಸಮವಸ್ತ್ರ ,ಮಧ್ಯಾಹ್ನದ ಭೋಜನ,ಪೋಷಕಾಹಾರ ನೀಡಲಾಗುತ್ತದೆ.ಮಧ್ಯಾಹ್ನದ ಭೊಜನ ವ್ಯವಸ್ಥೆಗೊಳಿಸಲು ಓರ್ವ ಆಯಾ(ಅಡುಗೆ ಕಾರ್ಮಿಕ) ಇದ್ದಾರೆ.ಈ ಅಡುಗೆ ಕಾರ್ಮಿಕರಿಗೆ ದಿನಕ್ಕೆ ರೂ.500ರಂತೆ ಲಭಿಸುತ್ತದೆ.

Advertisement

ಶಿಕ್ಷಕಿಯಿಂದ ನಿರಾಹಾರ ಧರಣಿ
ಐದು ತಿಂಗಳಿಂದ ಗೌರವ ಧನ ಲಭಿಸದಿರುವುದು ಹಾಗೂ ಉದ್ಯೋಗ ಖಾಯಂ ನೇಮಕಾತಿಗೊಳಿಸುವಂತೆ ತಿರುವನಂತಪುರ ಜಿಲ್ಲೆಯ ಅಗಸ್ತÂ ಎಂಜಿಎಲ್‌ಸಿಯ ಶಿಕ್ಷಕಿ ಉಷಾ ಕುಮಾರಿ ತಾವು ಶಿಕ್ಷಕಿಯಾಗಿರುವ ಶಾಲೆಯಲ್ಲಿಯೆ ನಿರಾಹಾರ ಧರಣಿ ಆರಂಭಿಸಿದ್ದಾರೆ.

ಇದನ್ನು ಬೆಂಬಲಿಸಿ ಕಾಸರಗೋಡು ಜಿಲ್ಲೆಯಲ್ಲಿಯೂ ಎಂಜಿಎಲ್‌ಸಿಗಳ ಆರು ಶಿಕ್ಷಕರು ನರ್ಕಿಲಕ್ಕಾಡ್‌ ಕಾವುಕಾಟ್‌ ಏಕಾಧ್ಯಪಕ ಶಾಲೆಯಲ್ಲಿ ನಿರಾಹಾರ ಧರಣಿ ಆರಂಭಿಸಿದ್ದಾರೆ.

ಕೆಲವು ಶಿಕ್ಷಕರನ್ನು ಖಾಯಂಗೊಳಿಸಿಲ್ಲ
ಏಕಾಧ್ಯಾಪಕ ಶಾಲೆಗಳಲ್ಲಿ ಕೆಲವು ಶಿಕ್ಷಕರು 23 ವರ್ಷಗಳಿಂದ ದುಡಿಯುತ್ತಿದ್ದರೂ ಯಾರನ್ನೂ ಖಾಯಂ ಗೊಳಿಸಿಲ್ಲ. ಕೆಲವರು 40ವರ್ಷ ಮೇಲ್ಪಟ್ಟವರೂ ಇದ್ದಾರೆ. ಎಂಜಿಎಲ್‌ಸಿ ಅಧ್ಯಾಪಕರನ್ನು ಖಾಯಂಗೊಳಿಸಿ ವೇತನ ಹೆಚ್ಚುಗೊಳಿಸಬೇಕು. .ಎಂಜಿಎಲ್‌ಸಿಗಳಿಗೆ ಪ್ರತ್ಯೇಕ ಅನು ದಾನ ಹಾಗೂ ರಾಜ್ಯಮಟ್ಟದಲ್ಲಿ ಆಯೋಗ ಸ್ಥಾಪಿಸಬೇಕು ಎಂದು ಲತೀಫ್‌ ಮಾಸ್ತರ್‌ ಕಳತ್ತೂರು ಹೇಳುತ್ತಾರೆ.

ಒಪ್ಪಿಗೆ ಸಿಗಲು ಬಾಕಿ
ಐದು ತಿಂಗಳ ಗೌರವ ಧನ ಹಾಗೂ ಹೆಚ್ಚುಗೊಳಿಸಿದ ವೇತನ ಸಮೇತ ಲಭಿಸಲು ಹಣಕಾಸು ಇಲಾಖೆಯ ಒಪ್ಪಿಗೆ ಸಿಗಲು ಬಾಕಿ ಇದ್ದು ,ಅಲ್ಲಿಂದ ರಾಜ್ಯ ಶಿಕ್ಷಣ ಇಲಾಖೆಯಿಂದ ಮಂಜೂರಾಗಿ ಆದಷ್ಟು ಬೇಗನೆ ಲಭಿಸ ಬಹುದು ಎಂದು ಎಂಜಿಎಲ್‌ಸಿ ಸಂಘಟನೆ ಎಎಸ್‌ಟಿಯು‌ ಜಿಲ್ಲಾ ಅಧ್ಯಕ್ಷ ರವೀಂದ್ರ ಮಾಸ್ತರ್‌ ತಿಳಿಸಿದ್ದಾರೆ.

ಅನುದಾನ ಲಭ್ಯವಾಗಿಲ್ಲ
ಸೆಪ್ಟಂಬರ್‌ ತಿಂಗÙ ಅನಂತರ ಅನುದಾನ ಲಭ್ಯವಾಗಿಲ್ಲ .ಈ ಮೊದಲು ಎರಡು ಅಥವಾ ಮೂರು ತಿಂಗಳ ಅಲೋಟ್‌ಮೆಂಟ್‌ (ಕೆಲವೊಮ್ಮೆ ಅಡ್ವಾಂನ್ಸ್‌ ಆಗಿ)ಸರಕಾರದಿಂದ ಬರುತಿತ್ತು. ಅಲಾಟ್‌ಮೆಂಟ್‌ ಬಂದಿಲ್ಲ ಬಂದ¨ಕೂಡಲೇ ಗೌರವ ಧನ ವಿತರಿಸಲಾಗುವುದು ಎಂದು ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್‌ ಕುಮಾರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next