Advertisement

ಮೋದಿ ಅಲ್ಲ; “ರಾಹುಲ್‌ ಝೆರಾಕ್ಸ್‌’!

12:30 AM Feb 12, 2019 | |

ಗ್ರೂಪ್‌ ಹೆಸರು: ರಾಹುಲ್‌ ಝೆರಾಕ್ಸ್‌
ಅಡ್ಮಿನ್‌: ರಾಹುಲ್‌ ಶೇಟ್‌, ಪರಮಾತ್ಮ ಗೌಡ, ವಿಶ್ವಾಸ್‌ ಸಿ.ಪಿ., ಕಾರ್ತಿಕ್‌ ಆರ್‌.

Advertisement

ಓದುವುದರಲ್ಲಿ ತುಸು ಹಿಂದೆ ಉಳಿದ ನಮ್ಮಂಥವರ ಪಾಲಿಗೆ ನೋಟ್ಸ್‌ ಕೊಟ್ಟವನೇ ದೇವ್ರು! ನಮ್ಮ ಸೆಕ್ಷನ್‌ನಲ್ಲಿ ಹಾಗೆ ನೋಟ್ಸ್‌ ಕೊಟ್ಟು ಉದಾರಿ ಆಗೋ ಮನುಷ್ಯ, ರಾಹುಲ್‌ ವೈ. ಶೇಟ್‌. “ಮೂರ್ನಾಲ್ಕು ದಿನ ರಜೆ ಇದ್ದೆ ಕಣೋ, ನೋಟ್ಸ್‌ ಕೊಡ್ತೀಯ’ ಅಂತಂದ್ರೆ, ಬ್ಯಾಗ್‌ನಿಂದ ಕೂಡಲೇ ಎತ್ತಿಕೊಡುವಷ್ಟು ಉದಾರಿ. ತಾನು ಕ್ಲಾಸ್‌ಗೆ ಟಾಪರ್‌ ಆಗಿ, ಮಿಕ್ಕವರನ್ನೂ ಪಾಸ್‌ ಮಾಡುವ ಈ ಸಹೃದಯನಿಗಾಗಿಯೇ ಹಿಂದಿನ ಬೆಂಚಿನವರೆಲ್ಲ ಸೇರಿ, ಒಂದು ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡೆವು. ಅದರ ಹೆಸರು, “ರಾಹುಲ್‌ ಝೆರಾಕ್ಸ್‌’! ರಾಹುಲ್‌ನ ನೋಟ್ಸ್‌, ಆತನ ಬಳಿ ಇರುತ್ತಿದ್ದ ಹಳೇ ಪ್ರಶ್ನೆ ಪತ್ರಿಕೆಗಳು, ಕೀ ಪಾಯಿಂಟ್ಸ್‌ಗಳು, ಎಲ್ಲವನ್ನೂ ಇಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದೆವು.

ಆದರೆ, ಈ ಗ್ರೂಪ್‌ನಲ್ಲಿ ರಾಹುಲ್‌ಗೆ ಸಮೀಪವರ್ತಿಗಳು ಯಾರೂ ಇದ್ದಿರಲಿಲ್ಲ. ಎಲ್ಲರೂ ಜಸ್ಟ್‌ ಪಾಸ್‌ಗಾಗಿ ಹರಸಾಹಸ ಪಡುತ್ತಿದ್ದ “ಶೂರ’ರೇ ಆಗಿದ್ದೆವು. ಒಮ್ಮೆ ಫಿಸಿಕ್ಸ್‌ ಸೆಮಿಸ್ಟರ್‌ ಇತ್ತು. ರಾಕೆಟ್‌ ಉಡಾವಣೆ ಕುರಿತ ಕೆಲವು ಕೀ ಪಾಯಿಂಟ್ಸ್‌ಗಳನ್ನು ಯಾರೋ ಒಬ್ಬ ತಪ್ಪು ಬರೆದು, ಗ್ರೂಪ್‌ನಲ್ಲಿ ಶೇರ್‌ ಮಾಡಿದ್ದ. ಪರೀಕ್ಷೆಗೆ ಒಂದೆರಡು ದಿನ ಇದ್ದಾಗ, ರಾಹುಲ್‌ ಮೊಬೈಲ್‌ ನೋಡದ ಕಾರಣ, ಆತನ ಗಮನಕ್ಕೂ ಇದು ಬರಲಿಲ್ಲ. ಬಂದಿದ್ದರೆ, ಆ ಅಪಭ್ರಂಶಗಳನ್ನು ಸರಿಪಡಿಸುತ್ತಿದ್ದನೇನೋ. ದುರ್ದೈವ… ಪರೀಕ್ಷೆಯಲ್ಲಿ ಅದೇ ಬಂದು, ರಾಹುಲ್‌ ಹೊರತಾಗಿ ಎಲ್ಲರೂ ಹಾದಿತಪ್ಪಿಬಿಟ್ಟರು. ಶೇರ್‌ ಮಾಡಿದ್ದ ವ್ಯಕ್ತಿ, ಆ ಕೀ ಪಾಯಿಂಟ್ಸ್‌ ಅನ್ನು ತಮಾಷೆಗೆ ರಚಿಸಿ, ಅಲ್ಲಿ ಹಾಕಿದ್ದನಂತೆ. ದುರ್ದೈವಕ್ಕೆ ಅವತ್ತು ಏಪ್ರಿಲ್‌ 1 ಬೇರೆ! ಅದನ್ನೇ ಎಲ್ಲರೂ ಫಾಲೋ ಮಾಡಿದ್ದು, ಮೂರ್ಖರಾಗಿಬಿಟ್ಟೆವು.

Advertisement

Udayavani is now on Telegram. Click here to join our channel and stay updated with the latest news.

Next