Advertisement

ಬಹಳ ಜನರಿಗೆ ಗೊತ್ತಿಲ್ಲ, ಕಲಾವಿದರ ಸಂಘಕ್ಕೆ ಮೂಲ ಪುರುಷ ಶಿವರಾಂ: ಅನಂತ್‍ನಾಗ್

12:36 PM Dec 05, 2021 | Team Udayavani |

ಬೆಂಗಳೂರು: ಶಿವರಾಮಣ್ಣ ಚೇತರಿಸಿಕೊಳ್ಳುತ್ತಾರೆಂದು ಅಂದುಕೊಂಡಿದ್ದೆವು, ಆದರೆ ವಿಧಿವಶರಾಗಿದ್ದು, ಬೇಸರ ತಂದಿದೆ ಎಂದು ಹಿರಿಯ ನಟ ಅನಂತ್‍ನಾಗ್ ಹೇಳಿಕೆ ನೀಡಿದ್ದಾರೆ.

Advertisement

ಶಿವರಾಂ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅನಂತ್‍ನಾಗ್ ನಮ್ಮದು 45 ವರ್ಷಗಳ ಸ್ನೇಹ. ನಾವಿಬ್ಬರು ಪ್ರೇಮಾಯಣ ಸಿನಿಮಾದಲ್ಲಿ ಮೊದಲು ನಟಿಸಿದ್ದೆವು. ಬಳಿಕ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ಬಣ್ಣ ಹಚ್ಚಿದ್ದೆವು. ಅವರು ಎಲ್ಲ ಪಾತ್ರಗಳನ್ನು ಲೀಲಾಜಾಲವಾಗಿ ಮಾಡುವಂತಹ ನಟರಾಗಿದ್ದರು. ಎಂ.ಎಸ್. ಸತ್ಯು ಅವರ ಬರ ಚಿತ್ರದಲ್ಲಿ ಒಬ್ಬ ಚಾಣಾಕ್ಷ ರಾಜಕಾರಣಿಯ ಪಾತ್ರದಲ್ಲಿ ಗಮನಸೆಳೆದಿದ್ದರು ಎಂದರು.

‘ಮನಸ್ಸಿಲ್ಲಿ ಎಷ್ಟೇ ನೋವಿದ್ದರೂ ಎಲ್ಲರನ್ನೂ ನಗಿಸುತ್ತಿದ್ದರು. ಕೊರೊನಾ ವೇಳೆಯಲ್ಲಿ ಫೋನ್‌ನಲ್ಲಿ ತುಂಬಾ ಹೊತ್ತು ಮಾತನಾಡುತ್ತಿದ್ದೆವು ಎಂದರು.

ತೆರೆಗೆ ಬರಬೇಕಿರುವ ‘ದೃಶ್ಯ 2’ ಸಿನಿಮಾದಲ್ಲಿ ನಾನು ಮತ್ತು ಶಿವರಾಮ್‌ ಅವರು ನಟಿಸಿದ್ದು, ಒಬ್ಬರಿಗೊಬ್ಬರು ಭೇಟಿಯಾಗಿಲ್ಲ ಅನ್ನುವುದನ್ನು ಮಾತನಾಡಿಕೊಂಡಿದ್ದೆವು. ಅಲ್ಲಿ ಅವರ ಮತ್ತು ನನ್ನ ಪಾತ್ರಗಳು ಸಂಧಿಸುವುದೇ ಇಲ್ಲ. ಅದೇ ನಮ್ಮ ಕಡೆಯ ಮಾತಾಗಿತ್ತು ಎಂದರು.

ಕನ್ನಡ ಚಿತ್ರರಂಗದ ಕಲಾವಿದರ ಸಂಘವನ್ನು ಸಂಘಟಿಸಿದ್ದೇ ಶಿವರಾಮಣ್ಣ. ಡಾ. ರಾಜ್‌ಕುಮಾರ್ ಅವರು ಅಧ್ಯಕ್ಷರಾಗಿದ್ದ ಕಲಾವಿದರ ಸಂಘಕ್ಕೆ ಕಾರ್ಯದರ್ಶಿ ಆಗಿ 35 ವರ್ಷ ದುಡಿದು ಸಂಘಟಿಸಿದ್ದಾರೆ.

Advertisement

ಕಲಾವಿದರ ಸಂಘಕ್ಕೆ ಮೂಲಪುರುಷ ನಮ್ಮ ಶಿವರಾಮಣ್ಣ. ಇದು ಬಹಳ ಜನರಿಗೆ ಗೊತ್ತಿಲ್ಲ. ಅವರು ಸದಾ ನಮ್ಮ ಹೃದಯದಲ್ಲಿ ಇರುತ್ತಾರೆ. ಶಿವರಾಮಣ್ಣ ಕನ್ನಡ ಚಿತ್ರರಂಗದ ಮೈಲಿಗಲ್ಲು ಮಾತ್ರವಲ್ಲ, ಒಂದು ಕಂಬ ಎಂದರೆ ಅತಿಶಯೋಕ್ತಿಯಲ್ಲ ಎಂದು ಅನಂತ್ ನಾಗ್ ಒಡನಾಟವನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next