Advertisement

ಕಾಂಗ್ರೆಸ್‌ ಸೇರಿಲ್ಲ; ಪ್ರಚಾರ ಕೂಡ ಮಾಡಲ್ಲ: ಕಲಾವಿದೆ ಸಪ್ನಾ ಚೌಧರಿ

09:57 AM Mar 26, 2019 | Sathish malya |

ಹೊಸದಿಲ್ಲಿ : ಹರಿಯಾಣದ ಜನಪ್ರಿಯ ಕಲಾವಿದೆ ಸಪ್ನಾ ಚೌಧರಿ ತಾನು ಕಾಂಗ್ರೆಸ್‌ ಪಕ್ಷ ಸೇರಿದ್ದೇನೆಂಬ ಎಲ್ಲ ವರದಿಗಳು ಸುಳ್ಳೆಂದು ಹೇಳಿದ್ದಾರೆ.

Advertisement

ನಾನು ಕಾಂಗ್ರೆಸ್‌ ಪಕ್ಷ ಸೇರಿಲ್ಲ. ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರವನ್ನೂ ನಡೆಸುವುದಿಲ್ಲ ಎಂದು 28ರ ಹರೆಯದ ಸಪ್ನಾ ಚೌಧರಿ ಹೇಳಿದ್ದಾರೆ.

ನನ್ನ ಟ್ವಿಟರ್‌ ಅಕೌಂಟ್‌ ಕೂಡ ಫೇಕ್‌; ನನ್ನ ಹಳೆಯ ಫೋಟೋಗಳನ್ನು ಬಳಸಿಕೊಂಡು ಸುಳ್ಳು ಸುಳ್ಳೇ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಸಪ್ನಾ ಚೌಧರಿ ಹೇಳಿದ್ದಾರೆ.

ಪ್ರಿಯಾಂಕಾ ಗಾಂಧಿ ವಾದ್ರಾ ಜತೆಗಿನ ತನ್ನ ಫೋಟೋಗಳು ವೈರಲ್‌ ಆಗಿರುವುದಕ್ಕೆ ಪ್ರತಿಕ್ರಿಯಿಸಿರುವ ಸಪ್ನಾ ಚೌಧರಿ, ಆ ಫೋಟೋಗಳೆಲ್ಲ ಹಳೆಯವು; ನಾನು ಕಾಂಗ್ರೆಸ್‌ ಸೇರಿಲ್ಲ; ಯಾವುದೇ ರಾಜಕೀಯ ಪಕ್ಷದ ಪರವಾಗಿ ಪ್ರಚಾರವನ್ನೂ ಮಾಡುವುದಿಲ್ಲ ಎಂದು ಹೇಳಿದರು.

ಮಾಧ್ಯಮದಲ್ಲಿ ಪ್ರಕಟಗೊಂಡಿದ್ದ ಕೆಲವು ವರದಿಗಳಲ್ಲಿ
ಸಪ್ನಾ ಚೌಧರಿ ಅವರು ಉ.ಪ್ರ. ಕಾಂಗ್ರೆಸ್‌ ಮುಖ್ಯಸ್ಥ ರಾಜ್‌ ಬಬ್ಬರ್‌ ಅವರ ನಿವಾಸದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿರುವುದಾಗಿ ಪ್ರಕಟಗೊಂಡಿತ್ತು. ಮಾತ್ರವಲ್ಲದೆ ಸಪ್ನಾ ಉ.ಪ್ರ. ಮಥುರಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ, ಹಿರಿಯ ನಟಿ, ಹೇಮಾ ಮಾಲಿನಿ ವಿರುದ್ದ ಸೆಣಸಲಿದ್ದಾರೆ ಎಂದೂ ವರದಿಗಳು ಹೇಳಿದ್ದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next