Advertisement

ಸಿಎಂ ಆಗುವ ಆತುರದಲ್ಲಿಲ್ಲ; ಆರ್‌ಜೆಡಿ ನಾಯಕರಿಗೆ ಡಿಸಿಎಂ ತೇಜಸ್ವಿ ವಾರ್ನಿಂಗ್

02:14 PM Oct 01, 2022 | Team Udayavani |

ಪಾಟ್ನಾ: ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸುವ ಆತುರವಿಲ್ಲ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಹೇಳಿದ್ದಾರೆ.

Advertisement

‘ಮುಂದಿನ ವರ್ಷದ ವೇಳೆಗೆ ಯುವ ನಾಯಕ ಮುಖ್ಯಮಂತ್ರಿಯಾಗಲಿದ್ದಾರೆ’ ಎಂದು ಆರ್‌ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಇತ್ತೀಚೆಗೆ ದೆಹಲಿಯಲ್ಲಿ ನೀಡಿದ ಹೇಳಿಕೆಗೆ ಯಾದವ್ ಪ್ರತಿಕ್ರಿಯಿಸಿದ್ದು,ಸುದ್ದಿಗಾರರೊಂದಿಗೆ ಮಾತನಾಡಿ, ಆರ್‌ಜೆಡಿ ನಾಯಕರಿಗೆ ಈ ವಿಷಯದ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲು ಸಲಹೆ ನೀಡಿದ್ದಾರೆ.

ಜಗದಾನಂದ್ ಸಿಂಗ್ ಅವರ ಹೇಳಿಕೆ ಸಿಎಂ ನಿತೀಶ್ ಕುಮಾರ್ ಅವರ ಪಕ್ಷವಾದ ಜೆಡಿಯುನಲ್ಲಿ ಕೆಲವು ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬಿಜೆಪಿಯ ಯೋಜನೆ ಯಶಸ್ವಿಯಾಗಲು ಬಿಡುವುದಿಲ್ಲ: ಗೆಹ್ಲೋಟ್

“ನನಗೆ ಯಾವುದೇ ವೈಯಕ್ತಿಕ ಮಹತ್ವಾಕಾಂಕ್ಷೆ ಇಲ್ಲ ಅಥವಾ ನಾನು ಆತುರದಲ್ಲಿಲ್ಲ. ಬೆಂಬಲಿಗರು ಮಿತಿಮೀರಿ ಹೋಗುತ್ತಾರೆ ಆದರೆ ಭವಿಷ್ಯದಲ್ಲಿ ಸಿಎಂ ಯಾರಾಗಬಹುದು ಎಂದು ನಾವು ಯೋಚಿಸಬೇಕಾದ ಸಮಯ ಇದು ಅಲ್ಲ” ಎಂದು ಯಾದವ್ ತಿಳಿಸಿದರು.

Advertisement

“ಬಿಜೆಪಿ ಪ್ರತಿನಿಧಿಸುವ ಫ್ಯಾಸಿಸ್ಟ್ ಶಕ್ತಿಗಳನ್ನು ಅಧಿಕಾರದಿಂದ ಕಿತ್ತೊಗೆಯುವುದರ ಮೇಲೆ ನಾವು ಗಮನಹರಿಸಬೇಕು. ಬಿಹಾರದಲ್ಲಿ ನಾವು ಅದನ್ನು ಸಾಧಿಸಿದ್ದೇವೆ. ರಾಷ್ಟ್ರೀಯವಾಗಿಯೂ ಇದನ್ನು ಸಾಧಿಸಬೇಕಾಗಿದೆ” ಎಂದು ಅವರು ಹೇಳಿದರು.

ನಿತೀಶ್ ಕುಮಾರ್ ಮುಖ್ಯಮಂತ್ರಿ ಮತ್ತು ಬಹುಪಕ್ಷೀಯ ಮಹಾಘಟಬಂಧನ್ ನಾಯಕ ಎಂದು ಪ್ರತಿಪಾದಿಸಿದ ಯಾದವ್, ಅವರು ಕೂಡ ತನಗಾಗಿ ಏನನ್ನೂ ಬಯಸದೆ ಬಿಜೆಪಿಯನ್ನು ಸೋಲಿಸಲು ಬಯಸುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next