Advertisement

ಖಾತ್ರಿಗೆ ಸಿಗುತ್ತಿಲ್ಲ ಕಾರ್ಮಿಕರು

05:03 PM Jun 27, 2018 | Team Udayavani |

ವಾಡಿ: ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲು ಮುಂದಾದರೂ ಕಾರ್ಮಿಕರು ಸಿಗುತ್ತಿಲ್ಲ. ಯೋಜನೆ ಸಾಕಾರಕ್ಕೆ ಸಾಕಷ್ಟು ಪ್ರಯತ್ನಿಸಿದರೂ ಶ್ರಮಿಕರು ಮುಂದೆ ಬರುತ್ತಿಲ್ಲ ಎಂದು ಲಾಡ್ಲಾಪುರ ಗ್ರಾಪಂ ಪಿಡಿಒ ಗುರುನಾಥರೆಡ್ಡಿ ಹೇಳಿದರು.

Advertisement

ಲಾಡ್ಲಾಪುರ ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಅಧ್ಯಕ್ಷ ಸಾಬಣ್ಣ ಆನೇಮಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಉದ್ಯೋಗ ಖಾತ್ರಿ ಯೋಜನೆ ಸಾಕಾರಕ್ಕೆ ಸದಸ್ಯರು ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಿದೆ ಎಂದರು. ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ಹೊರ ವಲಯದ ಕೋಗಿಲ್ಕೆರೆಯ ಹೂಳು ತೆಗೆಸಲು ಚಿಂತಿಸಲಾಗಿದೆ. ಇದರಿಂದ ಗ್ರಾಮಸ್ಥರಿಗೆ ಕೂಲಿಯೂ ಸಿಗುತ್ತದೆ.

ಗ್ರಾಮದ ಕೆರೆಯೊಂದು ಹೂಳಿನಿಂದ ಮುಕ್ತವಾಗಿ ನೀರಿನ ಸೆಲೆ ಹೆಚ್ಚುತ್ತದೆ. ಕೆರೆ ಅಭಿವೃದ್ಧಿಯಾದರೆ ಗ್ರಾಮದ ಸೌಂದರ್ಯ ಮತ್ತಷ್ಟು ಹೆಚ್ಚುತ್ತದೆ. ಗ್ರಾಪಂ ಸದಸ್ಯರು ಗ್ರಾಮಸ್ಥರ ಮನವೊಲಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ಗ್ರಾಪಂ ವ್ಯಾಪ್ತಿಯ ನಿರಾಶ್ರಿತರಿಗೆ ಆಶ್ರಯ ಮನೆಗಳನ್ನು ನೀಡಲಾಗುತ್ತಿದೆ. ಇದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದ್ಯ 701 ಅರ್ಜಿಗಳು ಗ್ರಾಪಂಗೆ ಸಲ್ಲಿಕೆಯಾಗಿವೆ. 

ಫಲಾನುಭವಿಗಳ ಆಯ್ಕೆ ಕಾರ್ಯವನ್ನು ವಸತಿ ನಿಗಮ ಮಾಡಲಿದೆ. ಇನ್ನುಮುಂದೆ ಒಟ್ಟು ಆಸ್ತಿ ಮೌಲ್ಯದ ಆಧಾರದಡಿ ತೆರಿಗೆ ಪಡೆಯುವಂತೆ ರಾಜ್ಯ ಸರಕಾರ ಆದೇಶ ನೀಡಿದೆ ಎಂದು ಸದಸ್ಯರ ಗಮನ ಸೆಳೆದರು. ಇದಕ್ಕೆ ಸರ್ವ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು.

Advertisement

ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ಬೆಳಗೇರಿ ಮಾತನಾಡಿ, ಕೊಂಚೂರು ಗ್ರಾಮದ ಜನತೆಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಅಶುದ್ಧ ನೀರು ಕುಡಿದು ಆರೋಗ್ಯ ಸಮಸ್ಯೆಉಂಟಾಗುತ್ತಿದೆ. ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಸದಸ್ಯರಾದ ಈರಣ್ಣ ಮಲಕಂಡಿ, ರುದ್ರುಮುನಿ ಮಠಪತಿ, ಮಹಾನಂದಾ ಬಸವರಾಜ, ಶರಣಮ್ಮ ಸಾಬಣ್ಣ,
ಕಾಂತಿಬಾಯಿ ಶಂಕರ, ರಮೇಶ ಡಿಸಿ, ರಾಮು ರೂಪ್ಲಾ, ದ್ಯಾವಮ್ಮ ಭಜಂತ್ರಿ, ಕರ ವಸೂಲಿಗಾರ ಮಲ್ಲಿಕಾರ್ಜುನ
ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next