ಪ್ರತಿಯೊಬ್ಬರ ಜೀವನದಲ್ಲಿ ಮದುವೆಯ ಕ್ಷಣ ಅತ್ಯಮೂಲ್ಯ. ಈಗಿನ ಕಾಲದಲ್ಲಿ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಅದ್ಧೂರಿ ಮದುವೆಗಳನ್ನು ಮಾಡಲಾಗುತ್ತದೆ. ಪ್ರೀ ವೆಡ್ಡಿಂಗ್, ಪೋಸ್ಟ್ ವೆಡ್ಡಿಂಗ್.. ಹೀಗೆ ಮದುವೆ ಕಾರ್ಯಕ್ರಮಕ್ಕೂ ಮುನ್ನ ಹಾಗೂ ಬಳಿಕ ಖರ್ಚುಗಳನ್ನು ಮಾಡಲಾಗುತ್ತದೆ.
ಮದುವೆಯ ಶುಭ ಕಾರ್ಯದಲ್ಲಿ ಮಳೆ ಬಂದರೆ ಏನಾಗಬಹುದು? ಹಾಲ್ ನಲ್ಲಿ ಮದುವೆಯಿದ್ದರೆ ಅಷ್ಟಾಗಿ ತೊಂದರೆ ಆಗದು. ಆದರೆ ಹೊರಾಂಗಣದ ಸ್ಥಳದಲ್ಲಿ ಮದುವೆಯಿಟ್ಟರೆ, ಮಳೆಯಿಂದ ಸಂಭ್ರಮವೆಲ್ಲ ನೀರಿನಲ್ಲಿ ಹೋದ ಹಾಗೆ ಆಗಬಹುದು.
ಆದರೆ ಮಳೆ ಬರುತ್ತಿದ್ದರೂ, ಯಾರೊಬ್ಬರೂ ಟೆನ್ಷನ್ ತೆಗೆದುಕೊಳ್ಳದೇ ಅದ್ಧೂರಿಯಾಗಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದನ್ನು ಎಂದಾದರೂ ಕೇಳಿದ್ದೀರಾ? ಹೀಗೊಂದು ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅದು ಗ್ರ್ಯಾಂಡ್ ಮದುವೆ. ಆ ಮದುವೆಗಾಗಿಯೇ ಲಕ್ಷಗಟ್ಟಲೇ ಖರ್ಚು ಮಾಡಿ ದೊಡ್ಡ ಸೆಟ್ ಗಳನ್ನು ಹಾಕಲಾಗಿದೆ. ಆದರೆ ಇಂಥ ಶುಭ ಕಾರ್ಯದಲ್ಲಿ ಮಳೆ ಬಂದಿದೆ. ಮಳೆ ಬಂದಿದೆ ನಿಜ, ಮುಹೂರ್ತಕ್ಕೆ ಅನುಗುಣವಾಗಿ ಮದುವೆ ನೆರವೇರಿದೆ. ನವ ಜೋಡಿಗಳು ಮಳೆಯಲ್ಲೇ ಮದುವೆ ವೇದಿಕೆಗೆ ಹತ್ತಿದ್ದಾರೆ. ಅವರನ್ನು ನೃತ್ಯದ ಮೂಲಕ ಕಲಾವಿದರು ಸ್ವಾಗತ ಕೋರಿದ್ದಾರೆ. ಮಳೆಯಲ್ಲೇ ವೆಡ್ಡಿಂಗ್ ವಿಡಿಯೋಸ್ ಗಳು ಶೂಟ್ ಆಗಿದೆ.
Related Articles
ಮಳೆಯಲ್ಲೇ ಮದುವೆ ಆದ ಸುಂದರ ಕ್ಷಣವನ್ನು ನಿರೂಪಕ ಜೈ ಕರ್ಮಣಿ ಅವರು ʼʼನಿಮ್ಮ ಪ್ರೀತಿಪಾತ್ರರನ್ನು ಮದುವೆಯಾಗಲು ಯಾವುದೂ ತಡೆಯುವುದಿಲ್ಲ” ಎಂದು ಬರೆದುಕೊಂಡು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ 1 ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡು ವೈರಲ್ ಆಗಿದೆ.