ಲಕ್ನೋ: ಮದುವೆ ಸಮಾರಂಭದಲ್ಲಿ ಊಟ ಕಡಿಮೆಯಾಯಿತು ಎಂದು ಜಗಳ ತೆಗೆದು ಮದುವೆ ಮುರಿದ ಘಟನೆಗಳು ಸಾಕಷ್ಟು ಇದೆ ಅದೇ ರೀತಿ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಕೆಲವರಿಗೆ ರಸಗುಲ್ಲಾ ಸಿಗಲಿಲ್ಲ ಎಂಬ ಕಾರಣಕ್ಕೆ ಜಗಳ ನಡೆದು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಪ್ರಕರಣ ದಾಖಲಾಗಿದ್ದು, ಆಸ್ಪತ್ರೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ಶಂಸಾಬಾದ್ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅನಿಲ್ ಶರ್ಮಾ ತಿಳಿಸಿದ್ದಾರೆ.
“ಭಾನುವಾರ ಆಗ್ರಾದ ಬ್ರಿಜ್ಭಾನ್ ಕುಶ್ವಾಹಾ ಎಂಬುವವರ ಮನೆಯಲ್ಲಿ ಮದುವೆ ಸಮಾರಂಭ ನಡೆಯುತಿತ್ತು ಈ ವೇಳೆ ಮದುವೆಗೆ ಗಂಡು ಹೆಣ್ಣಿನ ಕಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಬಂದಿದ್ದರು. ಈ ವೇಳೆ ಊಟನೂ ಶುರುವಾಗಿದೆ ಈ ವೇಳೆ ಓರ್ವ ವ್ಯಕ್ತಿ ಊಟದ ನಡುವೆ ಸ್ವೀಟ್ ತಿನ್ನಲೆಂದು ರಸಗುಲ್ಲಾ ಕೌಂಟರ್ ಇರುವಲ್ಲಿಗೆ ತೆರಳಿದ್ದಾನೆ ಆದರೆ ಅಲ್ಲಿ ರಸಗುಲ್ಲಾ ಖಾಲಿಯಾಗಿತ್ತು ಇದರಿಂದ ಕೋಪಗೊಂಡ ವ್ಯಕ್ತಿ ಊಟ ಬಡಿಸುವ ವ್ಯಕ್ತಿಯ ಜೊತೆಗೆ ಜಗಳವಾಡಿದ್ದಾನೆ ಅದಕ್ಕೆ ಊಟ ಬಡಿಸುವ ವ್ಯಕ್ತಿಯೂ ಸಮಾಧಾನದಲ್ಲಿ ಸಿಹಿ ಖಾದ್ಯ ಖಾಲಿಯಾಗಿರುವ ವಿಚಾರ ಹೇಳಿದ್ದಾನೆ ಆದರೆ ಸಮಾಧಾನಗೊಳ್ಳದ ವ್ಯಕ್ತಿ ಜಗಳ ಶುರುಮಾಡಿ ಮಾತಿಗೆ ಮಾತು ಬೆಳೆದು ಅಲ್ಲಿದ್ದ ಕೆಲವರು ತಮಗೂ ರಸಗುಲ್ಲಾ ಬೇಕು ಎಂದು ಹೇಳಿ ಜಗಳ ಅತಿರೇಖಕ್ಕೆ ಹೋಗಿ ಮಾರಾಮಾರಿ ನಡೆದಿದೆ.
ಬಳಿಕ ಇದು ಪೊಲೀಸ್ ಠಾಣೆಯ ವರೆಗೂ ಹೋಗಿದ್ದು ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಪಡಿಸುವ ಮೂಲಕ ಮದುವೆ ಸಮಾರಂಭದ ಊಟ ಕೊನೆಗೊಂಡಿದೆ.
ಈ ಹಿಂದೆ ಅಕ್ಟೋಬರ್ 2022 ರಲ್ಲಿ, ಎತ್ಮಾದ್‌ಪುರದಲ್ಲಿ ನಡೆದ ಮದುವೆಯೊಂದರಲ್ಲಿ ಸಿಹಿತಿಂಡಿಗಳ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನಡೆದ ಜಗಳದಲ್ಲಿ ಒಬ್ಬ ವ್ಯಕ್ತಿಯನ್ನೇ ಕೊಲ್ಲಲಾಗಿತ್ತು.
ಇದನ್ನೂ ಓದಿ: Uttarkashi Tunnel: ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರ ಮೊದಲ ವಿಡಿಯೋ ಬಿಡುಗಡೆ