Advertisement

ವ್ಯಾಸಂಗ ಪ್ರಕ್ರಿಯೆಯಲ್ಲಿ ನಿರಾಸೆ ಸಲ್ಲ

12:56 PM Oct 31, 2017 | Team Udayavani |

ಧಾರವಾಡ: ಶಾಲಾ ಅಂಗಳವನ್ನು ತುಳಿಯುವ ಪ್ರತಿಯೊಬ್ಬ ವಿದ್ಯಾರ್ಥಿ ನಿತ್ಯವೂ ತರಗತಿಗಳಲ್ಲಿ ಸಂತಸದ ಕಲಿಕೆಗೆ ತೆರೆದುಕೊಳ್ಳಬೇಕು. ಅವರೆಂದಿಗೂ ತಮ್ಮ ವ್ಯಾಸಂಗದ ಪ್ರಕ್ರಿಯೆಯಲ್ಲಿ ನಿರಾಸೆಯನ್ನು ಅನುಭವಿಸಬಾರದು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ ವೀರಣ್ಣ ತುರಮರಿ ಹೇಳಿದರು. 

Advertisement

ನಗರದ ಕರ್ನಾಟಕ ವಿವಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೋಮವಾರ ವಿದ್ಯಾರ್ಥಿ ಒಕ್ಕೂಟದ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿ.ಇಡಿ. ವ್ಯಾಸಂಗದ ನಂತರ ಶಿಕ್ಷಕ ವೃತ್ತಿ ಸ್ವೀಕರಿಸಲಿರುವ ಎಲ್ಲ ಪ್ರಶಿಕ್ಷಣಾರ್ಥಿಗಳು ಶ್ರೇಷ್ಠ ನೈತಿಕ ವ್ಯಕ್ತಿತ್ವ, ಸತತ ಅಧ್ಯಯನ, ಸಮಯಪ್ರಜ್ಞೆ ಹಾಗೂ ವೃತ್ತಿ ಪ್ರೌಢಿಮೆ ಬೆಳೆಸಿಕೊಳ್ಳಬೇಕು ಎಂದರು. 

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಿನ್ಸಿಪಾಲ್‌ ಡಾ| ಪ್ರಭಾ ಗುಡ್ಡದಾನ್ವೇರಿ ಮಾತನಾಡಿ, ಸಮಸ್ತ ಶಿಕ್ಷಕ ಸಂಕುಲ ಶಿಸ್ತು, ಕರ್ತವ್ಯ ಪ್ರಜ್ಞೆ ಹಾಗೂ ಸಮರ್ಪಣಾ ಮನೋಭೂಮಿಕೆ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ| ನಾಗರಾಜ ತಳವಾರ ಹಾಗೂ ಪ್ರಾಧ್ಯಾಪಕ ಡಾ| ಸುರೇಶ ಸಮ್ಮಸಗಿ ಮಾತನಾಡಿದರು.

ಪ್ರಾಧ್ಯಾಪಕಿ ಡಾ|ಶಹತಾಜ್‌ ಬೇಗಂ, ಪ್ರಾಧ್ಯಾಪಕ ಡಾ| ರಮೇಶ ನಾಯಕ, ಸುನೀಲ ದೊಡಮನಿ, ಸುರೇಶ ಪಾಣಗಿ, ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾದ ಮಹಾಲಕ್ಷ್ಮೀ ಯರಗಂಬಳಿಮಠ(ಪ್ರಥಮ ವರ್ಷ), ಶೃತಿ ದೇವಗಿರಿ (ದ್ವಿತೀಯ ವರ್ಷ), ರಮೇಶ ಕುರಿ, ಶಶಿಕಲಾ ಬಳ್ಳೂರ, ತಿಮ್ಮಪ್ಪನಾಯಕ ನೀಡ್ಲಿ, ನವೀನ ದೊಡ್ಡಮನಿ, ಶಿಲ್ಪಾ ಕಂಬಳಿ, ಶರಣಗೌಡ ಮಾಲಿಪಾಟೀಲ, ಶರಣಯ್ಯ ಮಠ, ಆನಂದ ಬಡಿಗೇರ, ನಾಗವೇಣಿ ಪಾಟೀಲ, ದೀಪಾ ನಿಂಬೋಜಿ, ಫಕ್ಕೀರಸ್ವಾಮಿ ವಾಚೇಶ್ವರಮಠ, ಶರಣು ಗೌಡರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next