Advertisement

ದೀಪಕ್‌ ಅಲ್ಲ ದೀಪಿಕಾ!!!

03:45 AM Feb 21, 2017 | |

ಅದು ಐಚ್ಚಿಕ ಆಂಗ್ಲ ಭಾಷಾ ತರಗತಿ. ನಮ್ಮ ಉಪನ್ಯಾಸಕರು ಮೊದಲೇ ಕಟ್ಟುನಿಟ್ಟು. ಕೋಪ ಬಂದಾಗ ಖಡಕ್ಕಾಗಿ ಬೈಯುತ್ತಿದ್ದರು. ನಾನು ಗೆಳತಿಗೆ ನಾನು ಏನೋ ಹೇಳಲೇಬೇಕಿತ್ತು. ಮಾತನಾಡಿದರೆ ಗೊತ್ತಾಗುತ್ತದೆಂಬ ಭಯದಿಂದ ಚೀಟಿ ಪಾಸ್‌ ಮಾಡೋಣವೆಂದು ತೀರ್ಮಾನಿಸಿದೆ. ಕೂಡಲೇ ನೋಟ್‌ಬುಕ್‌ನಿಂದ ಚೀಟಿ ಹರಿದು “Do you have Deepaks number?’ಎಂದು ಬರೆದು ಪಾಸ್‌ ಮಾಡಿದೆ. ಹೀಗೆ ನಮ್ಮ ಚಾಟಿಂಗ್‌ ಯಾವುದೇ ಅಡೆತಡೆಯಿಲ್ಲದೆ ಮುಂದುವರೆಯುತ್ತಿತ್ತು.

Advertisement

ಇನ್ನೇನು ಚೀಟಿಯನ್ನು ಒಳಗಿಡೋಣ ಅಂತ ಅಂದುಕೊಂಡಾಗ ನಮ್ಮ ಸರ್‌ನ ದೃಷ್ಟಿ ಚೀಟಿ ಮೇಲೆ ಬಿತ್ತು. ಜೋರಾದ ದನಿಯಲ್ಲಿ “What are you doing?’ ಎಂದು ಕೇಳಿದರು. ನಾನು ನಡುಗಿಕೊಂಡು Nothing sir’ ಎಂದೆ. ನನ್ನ ಹತ್ತಿರ ಕುಳಿತಿದ್ದ ಗೆಳತಿ, ಇವಳೇ ನನಗೆ ಮೊದಲು ಚೀಟಿ ಕೊಟ್ಟದ್ದು ಎಂದು ಏರುದನಿಯಲ್ಲಿ ಹೇಳಿದಳು. ಕೂಡಲೆ ಸರ್‌ ನನ್ನ ಬಳಿ ಬಂದು ಚೀಟಿಯನ್ನು ಕಸಿದುಕೊಂಡರು.

ಚೀಟಿಯನ್ನು ಹರಿದು ಕಸದ ಬುಟ್ಟಿಗೆ ಎಸೆಯುತ್ತಾರೆ ಅಂದುಕೊಂಡರೆ; ನನ್ನ ಅಂದಾಜು ತಪ್ಪಾಯಿತು. ಎಲ್ಲರ ಸಮ್ಮುಖದಲ್ಲಿ ನಾನು ಬರೆದಿದ್ದನ್ನು ಓದಿದರು. ದೀಪಿಕಾ ಎನ್ನುವ ಬದಲು ದೀಪಕ್‌ ಎಂದರು. “ಸರ್‌ ದೀಪಕ್‌ ಅಲ್ಲ, ದೀಪಿಕಾ’ ಎಂದಾಗ ಕೆಂಗಣ್ಣಿನಿಂದ ನನ್ನನ್ನು ನೋಡಿ “Don’t repeat this again’ ಎಂದು ವಾರ್ನಿಂಗ್‌ ಕೊಟ್ಟರು.

ಅವರ ಮಾತು ಕೇಳಿ ಮನಸ್ಸಿಗೆ ಬಹಳಷ್ಟು ದುಃಖವಾಯಿತು. ಬೆಲ್‌ ಹೊಡೆದ ತಕ್ಷಣ ಸಹಪಾಠಿಗಳೆಲ್ಲ ಬಳಿ ಬಂದು ದೀಪಕ್‌ ಯಾರೆಂದು ಕೇಳಿದಾಗ ನಾನು ಅಳುತ್ತಾ ಕ್ಲಾಸಿನಿಂದ ಹೊರನಡೆದೆ. ಅದಾದ ಬಳಿಕ ಎಂದಿಗೂ ಚೀಟಿ ವ್ಯವಹಾರದಲ್ಲಿ ತೊಡಗಬಾರದೆಂದು ನಿರ್ಧರಿಸಿದೆ.

– ಪ್ರಜ್ಞಾ ಹೆಬ್ಟಾರ್‌, ಎಸ್‌ಡಿಎಂ ಉಜಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next