ಬಳ್ಳಾರಿ: ಕೋಮುವಾದ ಮತ್ತು ಪ್ರತ್ಯೇಕ ಧರ್ಮದ ಹೆಸರಿನಡಿ ಪ್ರಬಲ ಜಾತಿ ಸಮುದಾಯದ ಉಪಜಾತಿಗಳ
ನಡುವೆ ಬಿರುಕು ಮೂಡಿಸಲು ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಹುನ್ನಾರ ನಡೆಸಿವೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.
ಘಟಕ ಏರ್ಪಡಿಸಿದ್ದ ಈ ಬಾರಿ ಕುಮಾರಣ್ಣ ಸರ್ಕಾರ ಎಂಬ ಘೋಷವಾಕ್ಯದಡಿ ಜಿಲ್ಲಾ ಮಟ್ಟದ ಯುವ ಸಮಾವೇಶ
ಉದ್ಘಾಟಿಸಿ ಅವರು ಮಾತನಾಡಿದರು. ಇಂತಹ ಸರ್ಕಾರಗಳಿಂದ ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯವಿಲ್ಲ. ಹೀಗಾಗಿ, ಈ ಎರಡೂ ಸರ್ಕಾರಗಳನ್ನು ಬುಡ ಸಮೇತ ಕಿತ್ತೆಸೆಯಬೇಕು. ಅನಗತ್ಯ ಕೋಮು ಗಲಭೆ ಸೃಷ್ಟಿಸಿ, ಜಾತಿ ರಾಜಕಾರಣದ ಹೆಸರಿನಡಿ ಸಮಾಜಕ್ಕೆ ಬೆಂಕಿ ಹಚ್ಚುವ ಕಾರ್ಯಕ್ಕೆ ಆ ಎರಡೂ ಪಕ್ಷಗಳು ನಾಂದಿ ಹಾಡಿವೆ. ಅವುಗಳಿಗೆ ನಾವೆಲ್ಲರೂ ಸೇರಿಕೊಂಡು ಕೊನೆ ಹಾಡಬೇಕಿದೆ ಎಂದರು.
Advertisement
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೂಗು ಹಿಡಿದಾದರೂ ಮೊದಲೇ ಅವರು ಸಹಕಾರಿ ಸಂಘಗಳಲ್ಲಿನ ರೈತರ 50,000 ರೂ.ಗಳವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಯಡಿಯೂರಪ್ಪನವರಿಗೆ ರಾಜ್ಯದ ರೈತರ ಕುರಿತು ಸ್ವಲ್ಪವಾದರೂ ಕಾಳಜಿ ಇದ್ದರೆ, ಪ್ರಧಾನಿ ನರೇಂದ್ರ ಅವರಬಳಿ ಬಿಜೆಪಿ ಸಂಸದರ ನಿಯೋಗ ಕೊಂಡೊಯ್ದು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಂಪೂರ್ಣ ಸಾಲ ಮನ್ನಾ
ಮಾಡುವಂತೆ ಆಗ್ರಹಿಸಿದರು.
ವೈ.ಗೌಸಿಯಾ ಬೀ, ಶರಭಯ್ಯ, ಪ್ರಶಾಂತ, ಕುಮಾರ, ಯಲ್ಲನಗೌಡ, ಬಂಡೇಗೌಡ, ಕಪ್ಪಗಲ್ಲು ರಸೂಲ್‌ಸಾಬ್,
ವೀರೇಶ, ಹೊನ್ನೂರಸ್ವಾಮಿ, ಪ್ರವೀಣಕುಮಾರ್, ಚಾಂದ್ ಬಾಷಾ, ಓಂಪ್ರಕಾಶಗೌಡ, ವಸಂತಕುಮಾರ, ಕಾರಪ್ಪ,
ವೆಂಕಣ್ಣ, ನಾಗಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಹಾಜರಿದ್ದರು.
Related Articles
Advertisement
ಮಧು ಬಂಗಾರಪ್ಪ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ