Advertisement

ನಾವು ತಲೆಕೆಡಿಸಿಕೊಳ್ಳುವುದಿಲ್ಲ, ಮೋದಿ ಎಷ್ಟು ಬಾರಿಯಾದರೂ ಪಶ್ಚಿಮ ಬಂಗಾಳಕ್ಕೆ ಬರಲಿ : ಬಸು

06:12 PM Mar 03, 2021 | Team Udayavani |

ನವ ದೆಹಲಿ : ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಿಡುವಿಲ್ಲದೆ ಸಾಗುತ್ತಿರುವ ನಡುವೆ ಆಡಳಿತ ಪಕ್ಷ ಹಾಗೂ ಪ್ರತಿ ಪಕ್ಷಗಳ ನಡುವೆ ಬಾರಿ ಪೈಪೋಟಿ ಕಾಣಿಸುತ್ತಿರುವುದಲ್ಲದೇ, ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ದಿನನಿತ್ಯ ಚುನಾವಣೆ ವಿಚಾರ ಹೊಸ ತಿರುವನ್ನು ಪಡೆದುಕೊಳ್ಳುತ್ತಿದೆ.

Advertisement

ಚುನಾವಣಾ ಪ್ರಚಾರ ಸಭೆಗೆ ಮೋದಿ ಆಗಮಿಸುತ್ತಿರುವ ವಿಚಾರ ಹೊರಬೀಳುತ್ತಿದ್ದಂತೆ, “ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಧಾರಾಳವಾಗಿ ಚುನಾವಣಾ ಪ್ರಚಾರಕ್ಕಾಗಿ ಎಷ್ಟು ಬಾರಿ ಬೇಕಾದರೂ ಬರಬಹುದು. 20 ಬಾರಿ ಅಥವಾ ಅದಕ್ಕಿಂತ ಹೆಚ್ಚು ಬಾರಿ ಬೇಕಾದರು ಬರಬಹುದು. ಅವರಿಗೆ ಸ್ವಾಗತ ಮಾಡುತ್ತೇವೆ. ಪಶ್ಚಿಮ ಬಂಗಾಳ ತೃಣಮೂಲ ಕಾಂಗ್ರೆಸ್ ಆಡಳಿತದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ ಎಂದು ಅವರಾಗಿಯೆ ಅರ್ಥೈಸಿಕೊಳ್ಳಬಹದು. ಮತ್ತು ಬಿಜೆಪಿ ಆಡಳಿತವಿರುವ ರಾಜ್ಯದಲ್ಲಿ ಎಷ್ಟು ಅಭಿವೃದ್ಧಿಯಾಗಿದೆ, ಇಲ್ಲಿ ಎಷ್ಟು ಅಭಿವೃದ್ದಿಯಾಗಿದೆ ಎಂದು ಹೋಲಿಕೆ ಮಾಡಿ ನೋಡಬಹದು ಎಂದು ತೃಣಮೂಲ ಕಾಂಗ್ರೆಸ್ ನ ನಾಯಕರೋರ್ವರು ಇಂದು(ಬುಧವಾರ, ಮಾ.3) ಹೇಳಿಕೆ ನೀಡಿದ್ದಾರೆ.”

ಓದಿ : ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯಾಗಿ 5 ಲೀಟರ್ ‘ಪೆಟ್ರೋಲ್’ ಪಡೆದ ಕ್ರಿಕೆಟಿಗ.!

ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳಕ್ಕೆ ಅವರಿಚ್ಚೆಯಂತೆ ಎಷ್ಟು ಬಾರಿ ಬೇಕಾದರು ಬಂದು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಬಹುದು. ತೃಣಮೂಲ ಸರ್ಕಾರ ಮಾಡಿದ ಅಭಿವೃದ್ಧಿಯನ್ನು ನೋಡಬಹುದು ಎಂದು ತೃಣಮೂಲ ಕಾಂಗ್ರೆಸ್ ನ ಸಚಿವ ಹಾಗೂ ವಕ್ತಾರ ಬ್ರಾತ್ಯ ಬಸು ಹೇಳಿದ್ದಾರೆ.

ಮಾರ್ಚ್ 27 ರಿಂದ ಪ್ರಾರಂಭವಾಗುವ ಎಂಟು ಹಂತದ ವಿಧಾನಸಭಾ ಚುನಾವಣೆಯ ಉದ್ದೇಶದಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅನೇಕ ಸಭೆಗಳನ್ನುದ್ದೇಶಿಸಿ ಬಿಜೆಪಿ ಪ್ರಮುಖರಿಗೆ ಅನುವು ಮಾಡಿಕೊಡುತ್ತವೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ  ಬಸು ಹೀಗೆ ಉತ್ತರಿಸುತ್ತಿದ್ದಾರೆ.

Advertisement

ನಮಗೆ ಯಾವ ರೀತಿಯಿಂದಲೂ ತೊಂದರೆ ಇಲ್ಲ. 2011 ರಲ್ಲಿ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಅಧಿಕಾರವನ್ನು ಹಿಡಿದ ಮೇಲೆ ರಾಜ್ಯ ಎಷ್ಟು ಅಭಿವೃದ್ಧಿಯಾಗಿದೆ, ನಮ್ಮ ಹೆದ್ದಾರಿಗಳು ಹೇಗೆ ಕಾಣಿಸುತ್ತಿವೆ, ವಿದ್ಯುತ್ ಸರಬರಾಜು ಹೇಗಾಗುತ್ತಿದೆ, ಗ್ರಾಮೀಣ ಪ್ರದೇಶದ ಜನರು ಹೇಗೆ ಉತ್ತಮ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಂತಹ ರಾಜ್ಯಗಳು ಹೇಗೆ ಹಿಂದುಳಿದಿವೆ ಎನ್ನುವುದನ್ನು ನೋಡುವುದಕ್ಕೆ ಅವರು( ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ) ಎಷ್ಟು ಬಾರಿಯಾದರೂ ರಾಜ್ಯಕ್ಕೆ ಬರಲಿ, ನಾವೇನೂ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಬಸು ಹೇಳಿದ್ದಾರೆ.

ಎಂಟು ಹಂತಗಳ ಚುನಾವಣೆಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿಯವರು ಹಲವು ಚುನಾವಣಾ ಪ್ರಚಾರ ಸಭೆಯಲ್ಲಿ ಪಶ್ಚಿಮ ಬಂಗಾಳದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾತ್ರವಲ್ಲದೇ, ಗೃಹ ಮಂತ್ರಿ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿ ಹಲವು ಪ್ರಮುಖ ರಾಷ್ಟ್ರೀಯ ನಾಯಕರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಪಶ್ಚಿಮ ಬಂಗಾಳದ ಬಿಜೆಪಿ ಮೂಲಗಳು ತಿಳಿಸವೆ.

ಓದಿ : ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳ ಹಾಸ್ಟೆಲ್ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

Advertisement

Udayavani is now on Telegram. Click here to join our channel and stay updated with the latest news.

Next