Advertisement
ಭಾರತದ ಬೇರೆ ಬೇರೆ ಮೈದಾನಗಳಲ್ಲಿ ನಡೆದ ಪಂದ್ಯಗಳ ವೇಳೆನ್ಯೂಜಿಲ್ಯಾಂಡ್ ತಂಡವು ಉತ್ತಮ ಯೋಜನೆ ರೂಪಿಸಿ ಚೆನ್ನಾಗಿ ಆಡಿದೆ. ಬ್ಲ್ಯಾಕ್ ಕ್ಯಾಪ್ಸ್ ತಂಡವು ವಿಶ್ವಕಪ್‌ನಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಸಾಧನೆ ಮಾಡಿದೆ. ನ್ಯೂಜಿಲ್ಯಾಂಡ್ ತಂಡವು ಈಗಾಗಲೇ ಅಹ್ಮದಾಬಾದ್, ಹೈದರಾಬಾದ್ ಮತ್ತು ಚೆನ್ನೈಯಲ್ಲಿ ನಡೆದ ಪಂದ್ಯದಲ್ಲಿ ಆಡಿದೆ, ಇದೀಗ ನ್ಯೂಜಿಲ್ಯಾಂಡ್ ಭಾರತ ವಿರುದ್ಧ ಆಡಲು ಧರ್ಮ ಶಾಲಾಕ್ಕೆ ಪ್ರಯಾಣಿಸಲಿದೆ. ಭಾರತವು ಇಷ್ಟರ ವರೆಗೆ ಆಡಿದ ಪಂದ್ಯಗಳಲ್ಲಿ ಜಯಭೇರಿ ಬಾರಿಸಿದ ಸಾಧನೆ ಮಾಡಿದೆ.
ರೋಹಿತ್ ಪ್ರಚಂಡ ಫಾರ್ಮ್ ನಲ್ಲಿರುವುದು ಕಿವೀಸ್ ಪಾಳಯಕ್ಕೆ ಚಿಂತೆಯ ವಿಷಯವಾಗಿದೆ. ಪಾಕಿಸ್ಥಾನ ವಿರುದ್ಧ 86 ರನ್ ಗಳಿಸಿದ್ದ ರೋಹಿತ್ ಅಫ್ಘಾನಿಸ್ಥಾನ ವಿರುದ್ಧ ತ್ವರಿತವೇಗದಲ್ಲಿ ಶತಕ ಸಿಡಿಸಿದರಲ್ಲದೇ 131 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಪವರ್‌ಪ್ಲೇಯಲ್ಲಿ ಆಡುವುದು ಅತೀ ಮುಖ್ಯ ಈ ವೇಳೆ ರೋಹಿತ್ ಅವರಂತೆ ಬ್ಯಾಟಿಂಗ್ ಪ್ರದರ್ಶನ ನೀಡುವುದು ಉತ್ತಮ. ನಾವು ಕೂಡ ರವಿವಾರದ ಪಂದ್ಯದ ವೇಳೆ ಅದೇ ರೀತಿಯ ಬ್ಯಾಟಿಂಗ್ ಪ್ರದರ್ಶನ ನೀಡಲು ಪ್ರಯತ್ನಿಸಲಿದ್ದೇವೆ ಎಂದು ಸ್ಯಾಂಟ್ನರ್ ತಿಳಿಸಿದರು.