ನವದೆಹಲಿ: ಪ್ಯಾಂಗಾಂಗ್ ನ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ನಿಯೋಜಿಸಿದ್ದ ಸೇನಾ ತುಕಡಿಗಳ ವಾಪಸಾತಿ ಪ್ರಕ್ರಿಯೆನ್ನು ಭಾರತ ಮತ್ತು ಚೀನಾ ಏಕಕಾಲದಲ್ಲಿ ಆರಂಭಿಸಿರುವ ಮಾಹಿತಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ(ಫೆ.11) ತಿಳಿಸಿದ್ದು, ನಾವು ಒಂದು ಇಂಚಿನಷ್ಟು ಜಾಗವನ್ನು ಚೀನಾಕ್ಕೆ ಬಿಟ್ಟುಕೊಟ್ಟಿಲ್ಲ ಎಂದು ರಾಜ್ಯಸಭೆಯಲ್ಲಿ ಪೂರ್ವ ಲಡಾಖ್ ನ ಗಡಿಯಲ್ಲಿನ ಪ್ರಸ್ತುತ ಸನ್ನಿವೇಶದ ಕುರಿತು ವಿವರಣೆ ನೀಡುವ ವೇಳೆ ಸಿಂಗ್ ಈ ಮಾಹಿತಿ ಕೊಟ್ಟಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಗಾಲ್ವಾನ್ ಘರ್ಷಣೆಯಲ್ಲಿ ಚೀನಾದ 45 ಸೈನಿಕರು ಸಾವನ್ನಪ್ಪಿದ್ದರು: ರಷ್ಯಾ ನ್ಯೂಸ್ ಏಜೆನ್ಸಿ
ಪೂರ್ವ ಲಡಾಖ್ ಗಡಿಭಾಗದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಲು ಭಾರತೀಯ ಸೇನೆ ಸದಾ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಭಾರತ ಮತ್ತು ಚೀನಾ ನಡುವಿನ ಗಡಿ ವಿವಾದವನ್ನು ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಭಾರತ ಬಯಸಿರುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಪೂರ್ವ ಲಡಾಖ್ ನಲ್ಲಿ ಸಂಭವಿಸಿದ ಪರಿಸ್ಥಿತಿಯನ್ನು ಭಾರತೀಯ ಸೇನಾ ಪಡೆ ಕರಾರುವಕ್ಕಾಗಿ ಮತ್ತು ತಮ್ಮ ಸಾಮರ್ಥ್ಯಕ್ಕನುಗುಣವಾಗಿ ಎದುರಿಸಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿಯುತ ಪರಿಸ್ಥಿತಿ ಕಾಯ್ದುಕೊಳ್ಳಲು ಭಾರತ ಬದ್ಧವಾಗಿದೆ ಎಂದರು.
ದೇಶದ ಸಾರ್ವಭೌಮತೆ ವಿಚಾರದಲ್ಲಿ ಯಾವುದೇ ಸಮಸ್ಯೆ ಎದುರಾದರು ಅದನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಿದೆ ಎಂಬುದನ್ನು ಸಾಬೀತುಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.