Advertisement

ಎಲ್ಲ ಅಂತರ್‌ ಧರ್ಮೀಯ ವಿವಾಹ ಲವ್‌ ಜೆಹಾದ್‌ ಅಲ್ಲ

12:45 PM Oct 20, 2017 | Team Udayavani |

ಕೊಚ್ಚಿ: ಎಲ್ಲ ಅಂತರ್‌ ಧರ್ಮೀಯ ವಿವಾಹಗಳು “ಲವ್‌ ಜೆಹಾದ್‌’ ಪ್ರಕರಣಗಳಿಗೆ ಸೇರಿದ್ದಲ್ಲ ಎಂದು ಎರ್ನಾಕುಳಂನಲ್ಲಿರುವ ಕೇರಳ ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿದೆ. 

Advertisement

ಕೇರಳದಲ್ಲಿ ಹಿಂದೂ ಯುವತಿಯರನ್ನು “ಲವ್‌ ಜೆಹಾದ್‌’ಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂಬ ಆರೋಪಗಳ ನಡುವೆಯೇ ಈ ಮಹತ್ವದ ಅಭಿಪ್ರಾಯವನ್ನು ಹೈಕೋರ್ಟ್‌ ವ್ಯಕ್ತಪಡಿಸಿದೆ. ಹಿಂದೂ ಯುವತಿ ಮತ್ತು ಮುಸ್ಲಿಂ ಸಮು ದಾಯಕ್ಕೆ ಸೇರಿದ ಯುವಕನ ವಿವಾಹ ಸಿಂಧು ಎಂದು ವಿಭಾಗೀಯ ನ್ಯಾಯಪೀಠ ಮಾನ್ಯ ಮಾಡಿದ ಸಂದರ್ಭದಲ್ಲಿ ಈ ರೀತಿ ಹೇಳಿದೆ.

“ಕೇರಳದಲ್ಲಿ ನಡೆಯುತ್ತಿರುವ ಯಾವುದೇ ಅಂತರ್‌ ಧರ್ಮೀಯ ವಿವಾಹಗಳನ್ನು ಲವ್‌ ಜೆಹಾದ್‌ ಎಂದೇ ಪರಿಗಣಿಸಲಾಗುತ್ತದೆ. ಇದು ನ್ಯಾಯಪೀಠಕ್ಕೆ ಆತಂಕ ತಂದಿದೆ. ಪತಿ-ಪತ್ನಿಯರ ನಡುವೆ ನೈಜ ಪ್ರೇಮವಿದ್ದರೂ ಇಂಥ ಘಟನೆಗಳನ್ನು ವೈಭವೀಕರಿಸಲಾಗುತ್ತಿದೆ. ಇದು ಸರಿಯಲ್ಲ. ಇದರಿಂದ ಸಮುದಾಯಗಳ ನಡುವೆ ಕಂದಕ ಹೆಚ್ಚಾಗುತ್ತದೆ. ಕೇರಳದಲ್ಲಿ ಅಂಥವುಗಳು ನಡೆಯಬೇಕೇ’ ಎಂದು ನ್ಯಾಯಪೀಠ ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next