Advertisement
ನನ್ನ ತಂದೆಯ ನಿಧನದ ನಂತರ ಪಕ್ಷ ಒಂದು ರೀತಿಯಲ್ಲಿ ಅನಾಥವಾಗಿದೆ. ಆದರೇ, ಜನರಲ್ಲಿ ಅವರ ಮೇಲಿನ ವಿಶ್ವಾಸ ಮತ್ತು ಅಭಿಮಾನವು ನನಗೆ ಮತ್ತು ನನ್ನ ಸಹದ್ಯೋಗಿಗಳಿಗೆ ಪ್ರೇರಕ ಶಕ್ತಿಯಾಗಿದೆ ಎಂದು ಅಸ್ಸಾಂ ನ ಚುನಾವಣಾ ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ಗೌರವ್ ಹೇಳಿದ್ದಾರೆ.
Related Articles
Advertisement
ಜೊರ್ಹತ್ ಜಿಲ್ಲೆಯ ತಿತಾಬಾರ್ ವಿಧಾನ ಸಭಾ ಕ್ಷೇತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ವಿಧಾನ ಸಭಾ ಕ್ಷೇತ್ರದಲ್ಲಿ ನನ್ನ ತಂದೆಯವರು 20 ವರ್ಷಗಳ ಕಾಲ ಪ್ರತಿನಿಧಿಸಿದ್ದರು. ‘ಈ ಕ್ಷೇತ್ರದಲ್ಲಿ ಉತ್ತರಾಧಿಕಾರಿ ಸಮಾಜಕ್ಕಾಗಿ ಕೆಲಸ ಮಾಡುವ ಯಾರಿಗಾದರೂ ದೊರಕಬೇಕು, ನಮ್ಮ ಕುಟುಂಬಕ್ಕೆ ದೊರಕಬಾರದು’ ಎಂಬುವುದು ತಂದೆಯವರ ಕೊನೆಯ ಆಸೆಯಾಗಿತ್ತು, ಹಾಗಾಗಿ ಚುನಾವಣೆಯಲ್ಲಿ ಅಲ್ಲಿಂದ ನಾನು ಸ್ಪರ್ಧಿಸುತ್ತಿಲ್ಲ. ತಂದೆಯವರ ಕೊನೆಯ ಆಸೆಗೆ ಎಐಸಿಸಿ ಕೂಡ ಒಪ್ಪಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಬರುವ ವಿಧಾನಸಭಾ ಚುನಾವಣೆಗೆ, ಗೊಗೊಯ್ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ತಿತಾಬಾರ್ ನಿಂದ ಭಾಸ್ಕರ್ ಜ್ಯೋತಿ ಬರುವಾ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ.
ಅಸ್ಸಾಂ ನ ರಾಜಕೀಯ ವಲಯದಲ್ಲಿ, ‘ಗ್ರ್ಯಾಂಡ್ ಅಲೈಯನ್ಸ್’ ಅಧಿಕಾರಕ್ಕೆ ಬಂದರೆ, ಕಲಿಯಾಬೋರ್ ನ ಲೋಕಸಭಾ ಸಂಸದರನ್ನು ಕಾಂಗ್ರೆಸ್ ನ ಮುಖ್ಯಮಂತ್ರಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮುಂಪಕ್ತಿಗೆ ತರುತ್ತದೆ ಎಂಬ ವಿಚಾರ ಹರಿದಾಡುತ್ತಿದೆ. ಆದಾಗ್ಯೂ, ವಿರೋಧ ಪಕ್ಷವು ಅಧಿಕೃತವಾಗಿ ಯಾವುದೇ ಹೆಸರನ್ನು ಇದುವರೆಗೆ ಇನ್ನು ಘೋಷಿಸಿಲ್ಲ.
ಓದಿ : ಬೇರೆಯವರ ಮೇಲೆ ರಾಡಿ ಎರಚುವ ಕೆಲಸ ಬಿಜೆಪಿ ಮಾಡುತ್ತಿದೆ : ಹೆಚ್.ಡಿ ಕುಮಾರಸ್ವಾಮಿ