Advertisement

ಕೋವಿಡ್‌ -19 ಎಫೆಕ್ಟ್: ನಾರ್ವೇಜಿಯನ್‌ ಅಂಗಸಂಸ್ಥೆ ಸಂಕಷ್ಟಕ್ಕೆ

02:26 PM Apr 21, 2020 | Team Udayavani |

ಮಣಿಪಾಲ: ಕೋವಿಡ್‌-19 ಜಗತ್ತಿನಾದ್ಯಂತ ನಷ್ಟದ ಮೇಲೆ ನಷ್ಟಗಳನ್ನು ತಂದು ಸುರಿಯುತ್ತಿದೆ. ಪ್ರತಿ ಕ್ಷೇತ್ರಗಳೂ ಇಂದು ಕೋವಿಡ್‌ ವೈರಸ್‌ನ ಭೀಕರ ನರ್ತನಕ್ಕೆ ತತ್ತರಿಸಿವೆ.

Advertisement

ಇದಕ್ಕೆ ವಿಮಾನಯಾನ ಕ್ಷೇತ್ರಗಳೂ ಹೊರತಾಗಿಲ್ಲ. ದೇಶಿಯ ಮತ್ತು ಅಂತಾರಾಷ್ಟ್ರೀಯ ವಾಯು ಮಾರ್ಗ ಬಂದ್‌ ಆದ ಕಾರಣ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತಿವೆ. ಕಡಿಮೆ ವೆಚ್ಚದ ವಿಮಾನ ಸೇವೆ ಎಂದು ಹೆಸರಾದ ನಾರ್ವೇಜಿಯನ್‌ ಸಂಸ್ಥೆಯು ತನ್ನ ಡೆನ್ಮಾರ್ಕ್‌ ಮತ್ತು ಸ್ವೀಡನ್‌ನಲ್ಲಿನ ಅಂಗ ಸಂಸ್ಥೆಗಳನ್ನು ಮುಚ್ಚಲು ನಿರ್ಧರಿಸಿದೆ. ಇದರಿಂದ ಸರಿಸುಮಾರು ಮುಕ್ಕಾಲು ಭಾಗದಷ್ಟು (ಶೇ. 75ರಷ್ಟು) ಪೈಲಟ್‌ಗಳು, ಸಿಬಂದಿ ತಮ್ಮ ಕೆಲಸ ಕಳೆದುಕೊಳ್ಳಲಿದ್ದಾರೆ.

ನಷ್ಟವನ್ನು ತುಂಬುದು ಅಸಾಧ್ಯ
ಕೊರೊನಾ ವೈರಸ್‌ ವಿಮಾನಯಾನ ಉದ್ಯಮದ ಮೇಲೆ ಬೀರಿದ ನಷ್ಟವನ್ನು ತುಂಬುದು ಅಸಾಧ್ಯ. ಆದರೆ ಅನಿವಾರ್ಯವಾಗಿ ನಾವು ಈ ನಿರ್ಧಾರವನ್ನು ಪಾಲಿಸಬೇಕಾಯಿತು. ಈ ನಿರ್ಧಾರವನ್ನು ತಪ್ಪಿಸಲು ನಾವು ಎಲ್ಲವನ್ನು ಮಾಡಿದ್ದೇವೆ ಮತ್ತು ಸ್ವೀಡನ್‌ ಮತ್ತು ಡೆನ್ಮಾರ್ಕ್‌ ಸರಕಾರದ ಬೆಂಬಲವನ್ನು ಕೇಳಿದ್ದೇವೆ ಎಂದು ನಾರ್ವೇಜಿಯನ್‌ ಸಂಸ್ಥೆ ತಿಳಿಸಿದೆ.

ನಾರ್ವೆ ಸರಕಾರವು ಸ್ಥಳೀಯ ಸಹಕಾರ ನೀಡುತ್ತಿದ್ದು, ಇದೇ ಸಹಕಾರ ಸ್ವೀಡಿಷ್‌ ಮತ್ತು ಡೆನ್ಮಾರ್ಕ್‌ ಸರಕಾರಗಳು ನೀಡದ ಕಾರಣ ಈ ಸಮಸ್ಯೆ ಉದ್ಭವಿಸಿದೆ ಎಂದು ಹೇಳಿದೆ.

ಈ ಬಿಕ್ಕಟ್ಟಿನಿಂದ ಹೊರಬರಲು ಮತ್ತು ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ. ಸಹೋದ್ಯೋಗಿಗಳನ್ನು ಮತ್ತೆ ನಾವು ಆಗಸದಲ್ಲಿ ಹಾರಾಡುವುದನ್ನು ನೋಡಲು ದಿನಪೂರ್ತಿ ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ ಉಳಿದ ಸಿಬಂದಿ. ಈ ಕ್ರಮದಿಂದ 1,571 ಪೈಲಟ್‌ಗಳು ಮತ್ತು 3,134 ಕ್ಯಾಬಿನ್‌ ಸಿಬಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next