Advertisement

Norway Chess Tourney; ಕರುವಾನಗೆ ಆಘಾತವಿತ್ತ ಪ್ರಜ್ಞಾನಂದ

11:58 PM Jun 02, 2024 | Team Udayavani |

ಸ್ಟಾವಂಜರ್‌ (ನಾರ್ವೆ): ಇಲ್ಲಿ ನಡೆಯುತ್ತಿರುವ ನಾರ್ವೆ ಚೆಸ್‌ ಟೂರ್ನಿಯ 5ನೇ ಸುತ್ತಿನಲ್ಲಿ ಭಾರತದ ಆರ್‌. ಪ್ರಜ್ಞಾನಂದ, ವಿಶ್ವದ ನಂ. 2 ಆಟಗಾರ ಅಮೆರಿಕದ ಫ್ಯಾಬಿಯಾನೊ ಕರುವಾನ ವಿರುದ್ಧ ಜಯ ಗಳಿಸಿದ್ದಾರೆ. ಈ ಮೂಲಕ ವಿಶ್ವ ಚೆಸ್‌ ರ್‍ಯಾಂಕಿಂಗ್‌ನಲ್ಲಿ ಟಾಪ್‌ 10ಕ್ಕೆ ಏರಿದ್ದಾರೆ.

Advertisement

ನಾರ್ವೆ ಚೆಸ್‌ ಟೂರ್ನಿಯ 5ನೇ ಸುತ್ತಿನ ಬಳಿಕ ಪ್ರಜ್ಞಾನಂದ 8.5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. 10 ಅಂಕ ಗಳಿಸಿರುವ ಅಮೆರಿಕದ ಹಿಕಾರು ನಕಮುರ ಪ್ರಥಮ, 9 ಅಂಕ ಗಳಿಸಿರುವ ನಾರ್ವೆಯ ಮ್ಯಾಗ್ನಸ್‌ ಕಾರ್ಲ್ಸನ್‌ ದ್ವಿತೀಯ ಸ್ಥಾನದಲ್ಲಿದ್ದಾರೆ.

ಮಹಿಳಾ ವಿಭಾಗದ 5ನೇ ಸುತ್ತಿನಲ್ಲಿ, ಪ್ರಜ್ಞಾನಂದ ಅವರ ಸಹೋದರಿ ಆರ್‌. ವೈಶಾಲಿ ಚೀನದ ಟಿಂಗಿj ಲೀ ವಿರುದ್ಧ ಗೆದ್ದು ಅಗ್ರ ಸ್ಥಾನದಲ್ಲೇ ಮುಂದುವರಿದ್ದಾರೆ
(10 ಅಂಕ).

Advertisement

Udayavani is now on Telegram. Click here to join our channel and stay updated with the latest news.

Next