ನವದೆಹಲಿ: ಈಶಾನ್ಯ ಫ್ರಾಂಟಿಯರ್ ರೈಲ್ವೆಯು 2022-23ನೇ ಆರ್ಥಿಕ ವರ್ಷದ ಮೊದಲನೇ ತ್ತೈಮಾಸಿಕದಲ್ಲಿ ಒಟ್ಟು 2.979 ಮೆಟ್ರಿಕ್ ಟನ್ ಸರಕನ್ನು ಸಾಗಾಟ ಮಾಡಿದೆ.
ಇದು ಕಳೆದ ಆರ್ಥಿಕ ವರ್ಷದ ಮೊದಲ ತ್ತೈಮಾಸಿಕಕ್ಕೆ ಹೋಲಿಸಿದರೆ ಶೇ.28 ಹೆಚ್ಚಾಗಿದೆ.
ಜೂನ್ ತಿಂಗಳೊಂದರಲ್ಲೇ 0.910 ಮೆಟ್ರಿಕ್ ಟನ್ ಸರಕು ಸಾಗಾಟ ಮಾಡಲಾಗಿದೆ. ಇದು ಕಳೆದ ವರ್ಷದ ಜೂನ್‌ಗೆ ಹೋಲಿಸಿದರೆ ಶೇ.7.9ರಷ್ಟು ಹೆಚ್ಚಿದೆ.
ಕಲ್ಲಿದ್ದಲು, ಆಲೂಗಡ್ಡೆ ಸೇರಿ ಅನೇಕ ವಸ್ತುಗಳ ಸಾಗಾಟ ಹೆಚ್ಚಿದೆ.
ಸಿಮೆಂಟ್ ಸಾಗಾಟ ಶೇ.68.3 ಹೆಚ್ಚಿದ್ದರೆ, ಪೆಟ್ರೋಲ್ ಆಧರಿತ ಉತ್ಪನ್ನಗಳ ಸಾಗಾಟ ಶೇ.17.3 ಹೆಚ್ಚಿದೆ.
ರೈಲ್ವೆಯಿಂದ ಸರಕು ಸಾಗಾಟಕ್ಕೆ ಹೆಚ್ಚಿದ ಸೌಲಭ್ಯ ಮತ್ತು ಉತ್ತಮ ನಿರ್ವಹಣೆಯಿಂದಾಗಿ ಈ ಹೆಚ್ಚಳ ಉಂಟಾಗಿದೆ ಎಂದು ಇಲಾಖೆಯ ವಕ್ತಾರರು ತಿಳಿಸಿದ್ದಾರೆ.