Advertisement

ವದಂತಿಗಳಿಗೆ ತೆರೆ:ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಕೊನೆಗೂ ಸಾರ್ವಜನಿಕವಾಗಿ ಪ್ರತ್ಯಕ್ಷ

08:17 AM May 03, 2020 | Mithun PG |

ಸಿಯೋಲ್:  ಉತ್ತರ ಕೊರಿಯಾದ ಸರ್ವಾಧಿಕಾರಿ  ಕಿಮ್ ಜಾಂಗ್ ಉನ್ ಕಳೆದ ಹಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದು, ಸಾವನ್ನಪ್ಪಿರುವ ಸಾಧ‍್ಯತೆಯೂ ಇದೆ ಎಂಬ ಅಲ್ಲಿನ ಮಾಧ್ಯಮಗಳ ನಿರಂತರ ವರದಿಯ ಬೆನ್ನಲ್ಲೇ ಇದೀಗ ಕಿಮ್ ಸಾರ್ವಜನಿಕವಾಗಿ ಕಾಣಿಸಿಕೊಂಡು ಈ ಎಲ್ಲಾ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ.

Advertisement

ಕಳೆದ ಕೆಲ ದಿನಗಳಿಂದ ಕಿಮ್ ಜಾಂಗ್ ಬಹಿರಂಗವಾಗಿ ಕಾಣಿಸಿಕೊಳ್ಳದೇ ಇರುವುದಕ್ಕೆ ಅವರಿಗೆ ಕೋವಿಡ್ 19 ವೈರಸ್ ಹಬ್ಬಿರುವುದೇ ಕಾರಣ ಎಂಬ ವರದಿಗಳು ಬಿತ್ತರಗೊಂಡಿದ್ದವು. ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಚೀನಾದ ವೈದ್ಯರೊಬ್ಬರಿಂದ ಸೋಂಕಿಗೆ ಒಳಗಾಗಿದ್ದಾರೆ ಎಂದು ಕೂಡ ಚೀನಾದ ಕೆಲವು ವಾಹಿನಿಗಳು ಸುದ್ದಿ ಬಿತ್ತರಿಸಿದ್ದವು.

ಆದರೇ  ಶುಕ್ರವಾರ ನಡೆದ ಕಾರ್ಮಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕೆಸಿಎನ್​ಎ ಫರ್ಟಿಲೈಸರ್ ಫ್ಯಾಕ್ಟರಿಯ ಉದ್ಘಾಟನಾ ಕಾರ್ಯಕ್ರಮವೊಂದರಲ್ಲಿ ತಮ್ಮ ಸಹೋದರಿ ಜೊತೆ  ಕಿಮ್ ಜಾಂಗ್ ಭಾಗವಹಿಸಿದ್ದರು  ಎಂದು ಮಾಧ್ಯಮಗಳು ವರದಿ ಮಾಡಿವೆ.

ಕಿಮ್ ಜಾಂಗ್ ಆರೋಗ್ಯವಾಗಿದ್ದಾರೆ ಎಂದು ಉತ್ತರ ಕೊರಿಯಾ ಅಧಿಕಾರಿಗಳು ಮೊದಲೇ  ಮಾಹಿತಿ ನೀಡಿದ್ದರು. ಇದೀಗ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಾವಿನ ವದಂತಿಗಳಿಗೆ ಕಿಮ್ ಜಾಂಗ್ ಖುದ್ದು ತೆರೆ ಎಳೆದಿದ್ದಾರೆ.

Advertisement

ಏ. 11ರಂದು ವರ್ಕರ್ಸ್​ ಪಾರ್ಟಿ ಸಭೆಯೊಂದರಲ್ಲಿ ಕಾಣಿಸಿಕೊಂಡ ಬಳಿಕ ಮತ್ತೆ ಎಲ್ಲೂ ಹೊರಗೆ ಕಾಣಿಸಿಕೊಂಡಿರಲಿಲ್ಲ. ಇದೀಗ ಕೊರಿಯಾದ ಬೃಹತ್ ಸಮಾರಂಭವೊಂದರಲ್ಲಿ ಕಿಮ್ ಜಾಂಗ್ ಅತಿಥಿಯಾಗಿ ಆಗಮಿಸಿ, ಉದ್ಘಾಟನೆ ನೆರವೇರಿಸಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

Advertisement

Udayavani is now on Telegram. Click here to join our channel and stay updated with the latest news.

Next